Headlines

ದಲಿತ ಮಹಿಳೆ 3 ತಾಸು ಮೆರವಣಿಗೆ- ಕಣ್ಮುಚ್ಚಿದ ಖಾಕಿ

ಬೆಳಗಾವಿ.

ಪೊಲೀಸ್ ಠಾಣೆಯಿಂದ ಕೇವಲ ಒಂದುವೆರೆ ಕಿಲೋಮೀಟರ ಅಂತರದಲ್ಲಿ ನಡೆದ ಅಮಾನವೀಯ ಘಟನೆಯನ್ನು ಕಙಡು ಇಡೀ ರಾಜ್ಯ ಬೆಚ್ಚಿಬಿದ್ದಿದೆ.

ಇಂತಹ ಘಟನೆ ಎಲ್ಲೋ ದಟ್ಟಡವಿಯಲ್ಲಿ ನಡೆದಿದ್ದರೆ ಅದು ಪೊಲೀಸರಿಗೆ ಗೊತ್ತಾಗಲಿಲ್ಲ ಅನಬಹುದಿತ್ತು. ಆದರೆ ಘಟಪ್ರಭಾದ ಮುಖ್ಯ ರಸ್ತೆ ಅದರಲ್ಲೂ ಠಾಣೆಯಿಂದ ಕೂಗಳತೆ ಅಂತರದಲ್ಲಿ ದಲಿತ ಮಹಿಳೆಗೆ ಚಪ್ಪಲಿ ಹಾರ ಹಾಕಿ ಘೋಷಣೆ ಕೂಗುತ್ತ ಹೋದರೂ ಪೊಲೀಸರ ಗಮನಕ್ಕೆ ತುರ್ತಾಗಿ ಬರಲಿಲ್ಲ ಅಂದರೆ ವ್ಯವಸ್ಥೆ ಯಾವ ಮಟ್ಟಕ್ಕೆ ಹೋಗಿದೆ ಎನ್ನುವುದು ಗೊತ್ತಾಗುತ್ತದೆ.

ಕಿಡಿಗೇಡಿಗಳ ಉರವಣಿಗೆ 3 ತಾಸು..

ದಲಿತ ಮಹಿಳೆಯ ಮನೆ ಮುಂದೆ ಬಂದು 25 ಕ್ಕೂ ಹೆಚ್ಚು ಜನ‌ ಅರಚಾಟ, ಕೂಗಾಟವನ್ಬು ರಾತ್ರಿ‌11 ಕ್ಕೆ ಆರಂಭಿಸಿದೆ. ಈ ಸಂದರ್ಭದಲ್ಲಿ ನೊಂದ ಸಂತ್ರಸ್ತೆ ಗಾಬರಿಯಾಗಿ ಸ್ಥಳೀಯ ಠಾಣೆಗೆ ಮಾಹಿತಿ ಮುಟ್ಟಿಸಿದರೂ ಸ್ಥಳಕ್ಕೆ ಜಪ್ಪಯ್ಯ ಅಂದರೂ ಬರಲೇ ಇಲ್ಲ.‌ ಹೀಗಾಗಿ ಅವರ ಮನೆಯ ಮುಂದೆ ಕಿಡಿಗೇಡಿಗಳ ಅಟ್ಟಹಾಸ ಮತ್ತಷ್ಟು ಹೆಚ್ಚಾಯಿತು.

ಆ ಮಹಿಳೆಗೆ ಅತ್ಯಂತ ಕೆಟ್ಟದಾಗಿ ನಿಂದಿಸಿದ್ದಲ್ಕದೇ, ಕೈಹಿಡಿದು ಎಳೆದಾಟ ಕೂಡ ನಡೆಸಿದರುಮ ಇನ್ನೂ ಕೆಲವರು ಚಪ್ಪಲಿ ಯಿಂದ ಹಲ್ಲೆ ಕೂಡ ಮಾಡಿದರು.‌ಇಷ್ಟೆಲ್ಕ ನಡೆಯುತ್ತಿದ್ದರೂ ಘಟಪ್ರಭಾ ಪೊಲೀಸರು ನಿದ್ರೆಯಿಂದ ಎಚ್ಚರವಾಗಲೇ ಇಲ್ಕ.

ಕೊನೆಗೆ ಹಲ್ಲೆ ಕೋರರು ಅವಳ ಕೊರಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ‌ಮೂಲಕ ಮೃತ್ಯುಂಜಯ ವೃತ್ತಕ್ಕೆ ಬಂದಾಗ ಪೊಲೀಸರಿಗೆ ಎಚ್ಚರವಾಗಿದೆ. ಆಗ ಸ್ಥಳಕ್ಕೆವಬಙದ ಖಾಕಿಗಳನ್ನು ಕಂಡು ಕಿಡಿಗೇಡಿಗಳು ಅಲ್ಲಿಂದ ಓಡಿ ಹೋಗಿದ್ದಾರೆ.

ನಂತರ ಈ ಮಹಿಳೆಯನ್ನು ಪೊಲೀಸರು ಪ್ರಾಥಮಿಕ ಚಿಕಿತ್ಸೆಗಾಗಿ ಗೋಕಾಕಕ್ಕೆ ದಾಖಲು ಮಾಡಿದರು.‌ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಬೀಮ್ಸ್ ಗೆ ದಾಖಲು ಮಾಡಲಾಯಿತು.

ಇಲ್ಲಿ ಅವಳು ಪೊಲೀಸರ ಮುಂದೆ ಎಲ್ಕರ ಹೆಸರನ್ನು ನಮೂದಿಸಿ ದೂರು ಕೊಡುವ ಕೆಲಸವಬ್ನು ಮಾಡಿದ್ದಾಳೆ‌ ಈಗ ಬೀಸೋದೊಣ್ಣೆಯಿಂದ ಪಾರಾಗಬೇಕು ಎನ್ನುವ ನಿಟ್ಟಿನಲ್ಲಿ ಎಲ್ಲ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ .

ಮೂಲಗಳ ಪ್ರಕಾರ ಇಷ್ಟೆಲ್ಲ ಘಟನೆ ನಡೆದರೂ ಕೂಡ ಬೆಳಗಾವಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಹೋಗಿ ವಿಚಾರಣೆ ಮಾಡಿಲ್ಲ ಎಂದು ಹೇಳಲಾಗಿದೆ.

ಸಂತ್ರಸ್ತೆ ಮಹಿಳೆ ಬೆದರಿಕೆ ಕರೆ ಬರುತ್ತಿರುವ ಬಗ್ಗೆ ಸ್ಥಳೀಯ ಮತ್ತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಳು ಎನ್ನುವ ‌ಮಾತಿದೆ. ಆದರೆ ಪೊಲೀಸರು ಇವಳ ದೂರನ್ನು ಗಂಭೀರವಾಗಿ ಪರಿಗಣಿಸದೇ ಇದ್ದುದು ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ

ಘಟನೆಗೆ ಕಾರಣ ಏನು?
.
ಸಂತ್ರಸ್ತೆ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಘಟನೆಗೆ ಕಾರಣ ಏನು ಎನ್ನುವುದನ್ನು ವಿವರಿಸಿದ್ದಾಳೆ ಪ್ರಕರಣದ ಪ್ರಮುಖ ಆರೋಪಿ. ಮಾರುತಿ ಎನ್ನುವವ ಯಾವ ರೀತಿ ಬೆದರಿಕೆ ಹಾಕುತ್ತಿದ್ದ ಅಷ್ಟೇ ಅಲ್ಲ ನಿನ್ನೆ ಗಲಾಟೆ ಮಾಡಲು ಯಾರು ಯಾರು ಬಂದಿದ್ದರು ಎನ್ನುವುದನ್ನು ಅವಳು ಹೇಳಿದ್ದಾಳೆ.

ಪೊಲೀಸರು ಈಗ 13ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ. ಕಳೆದ ದಿನವೇ ಪೊಲೀಸರು ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದರು. ಈಗ ಪೊಲೀಸರು ಬಂಧಿತರ ವಿರುದ್ಧ ಐಪಿಸಿ 143, 145, 323, 354 (ಬಿ)355, 307 504 ಸಹ ಕಲಂ149 ರಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!