Headlines

ನನ್ನ ಮೌನ ದೌರ್ಬಲ್ಯವಲ್ಲ….!


ಹೆಬ್ಬಾಳಕರ ಜೊತೆ ಕಿರಿಕಿರಿಯಿಲ್ಲ.

ಅವರನ್ನು ಮೀರಿ ಬೆಳೆದಿದ್ದೇವೆ. ನಾನು 6 ಬಾರಿ ಶಾಸಕ, ಅವರು 2 ಬಾರಿ. ನಿಗಮ

ಮಂಡಳಿ ಶಾಸಕರ ಬದಲು ಕಾರ್ಯಕರ್ತರಿಗೆ ಕೊಡಿ ಎಂದಿದ್ದೇನೆ.

ಸವದಿಗೆ ಕಾರ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಅಡ್ಡಿಯಿಲ್ಲ.

ಬೆಂಗಳೂರು
ನನ್ನ ಮೌನವನ್ನು ದೌರ್ಬಲ್ಯ ಎಂದು ಭಾವಿಸಬೇಡಿ. ಕಳೆದ ನಾಲ್ಕು ತಿಂಗಳಲ್ಲಿ ಸಾಕಷ್ಟು ಬಾರಿ ವರ್ಗಾವಣೆ ವಿಷಯದಲ್ಲೂ ಸಾಕಷ್ಟು ಹಸ್ತಕ್ಷೇಪವಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಪರೋಕ್ಷವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಅಸಮಾಧಾನ ಹೊರ ಹಾಕಿದ ಅವರು, ನಾನೂ ಕೂಡ ಪಕ್ಷದ ಹಿತದೃಷ್ಟಿಯಿಂದ ಕಾಂಪ್ರಮೈಸ್ ಮಾಡಿಕೊಂಡಿದ್ದೇನೆ. ಹೀಗಾಗಿ ನನ್ನ ಮೌನವನ್ನು ದೌರ್ಬಲ್ಯ ಎಂದು ಭಾವಿಸಬೇಡಿ ಎಂದು ಪುನರುಚ್ಚರಿಸಿದರು,.


ನಾನು ವರ್ಗಾವಣೆಗೆ ಕೆಲವೊಂದು ಶಿಫಾರಸು ಮಾಡಿದ್ದೆ. ಆದರೆ ಮಾಡೋದು ಬಿಡೋದು ಅವರಿಗೆ ಬಿಟ್ಟಿದ್ದು. ನಿಗಮ, ಮಂಡಳಿಯಲ್ಲಿ ಕಾರ್ಯಕರ್ತರಿಗೆ ಅವಕಾಶ ಕೊಡಿ. ಕೇವಲ ಶಾಸಕರಿಗೆ ಮಾತ್ರ ಬೇಡ ಎಂದು ಹೇಳಿದ್ದೇನೆ ಎಂದರು,


ಕಳೆದ 30 ವರ್ಷದಿಂದ ರಾಜಕೀಯದಲ್ಲಿ ಇದ್ದು ಸಕ್ಸಸ್ ಆಗಿದ್ದೇವೆ. ಲಕ್ಷ್ಮಿ ಹೆಬ್ಬಾಳ್ಕರ್ ಜೊತೆ ಯಾವುದೇ ಕಿರಿಕಿರಿಯಿಲ್ಲ. ನಾವು ಅವರನ್ನು ಮೀರಿ ಬೆಳೆದಿದ್ದೇವೆ. ಎಲ್ಲರನ್ನೂ ನಾವು ಸಂಭಾಳಿಸಿಕೊಂಡು ಹೋಗಬೇಕು. ನಾನು ಆರು ಬಾರಿ ಶಾಸಕನಾಗಿದ್ದೇನೆ. ಅವರು ಎರಡು ಬಾರಿ ಮಾತ್ರ ಶಾಸಕರಾಗಿದ್ದಾರೆ. ಕೆಲವರು ಒಂದೇ ಬಾರಿ ಶಾಸಕರಾಗಿ ಸಚಿವರಾಗಿದ್ದಾರೆ.

ಎಲ್ಲರ ಜೊತೆಗೆ ಹೊಂದಿಕೊಂಡು ಕೆಲಸ ಮಾಡಬೇಕು ಎಂದರು.
ರಾಜ್ಯ ಪ್ರವಾಸ ಮುಂದೆ ಕೂಡ ಇರುತ್ತದೆ. ನಾವು ರಾಜ್ಯ ಪ್ರವಾಸ ಮಾಡಲು ಯಾವುದೇ ಅಡ್ಡಿಯಿಲ್ಲ. ಶಾಸಕರು ಕ್ಷೇತ್ರದ ಕೆಲಸ ಮಾತ್ರ ಅಲ್ಲ. ಒಟ್ಟಾಗಿ ಪ್ರವಾಸ ಕೂಡ ಮಾಡಬೇಕು. ಮುಂದೆ ಆ ಬಗ್ಗೆ ಪ್ಲಾನ್ ಮಾಡುತ್ತೇವೆ ಎಂದು ಇದೇ ವೇಳೆ ತಿಳಿಸಿದರು.

ಲಕ್ಷ್ಮಣ ಸವದಿ ಎಲ್ಲೂ ಕಾರ್ಯಾಧ್ಯಕ್ಷ ಸ್ಥಾನ ಕೇಳಿಲ್ಲ. ಮಾಡೋದಾದರೆ ನಮ್ಮ ಅಭ್ಯಂತರ ಏನು ಇಲ್ಲ. ಸವದಿ, ನಿಂಬಾಳ್ಕರ್ ಯಾರೇ ಕಾರ್ಯಾಧ್ಯಕ್ಷರಾದರೂ ಅಡ್ಡಿಯಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾಧ್ಯಕ್ಷರು, ಕಾರ್ಯಾಧ್ಯಕ್ಷರ ಬದಲಾವಣೆಗೆ ಶಿಫಾರಸು ಮಾಡಿದ್ದೇನೆ. ಹೈಕಮಾಂಡ್ ಯಾವ ರೀತಿಯಲ್ಲಿ ಮಾಡುತ್ತೆ ಎಂದು ನೋಡೋಣ.

Leave a Reply

Your email address will not be published. Required fields are marked *

error: Content is protected !!