
ರಾಜಕೀಯ ಯುದ್ಧದಲ್ಲಿ ಅಧಿಕಾರಿಗಳೇ ಬಲಿಪಶು
ಬೆಳಗಾವಿ. ರಾಜಕಾರಣದಲ್ಲಿ ಯಾರು ಶತ್ರುನೂ ಅಲ್ಲ, ಮಿತ್ರನೂ ಅಲ್ಲ. ಆದರೆ ಅಂತಹ ರಾಜಕಾರಣಿಗಳ ಮಾತು ಕೇಳಿ ಏನಾದರೂ ಮಾಡ ಹೊರಟರೆ ಬಲಿ ಪಶು ಆಗುವವರು ಅಧಿಕಾರಿಗಳೇ..! ಇದನ್ನು ಎಲ್ಲರೂ ಒಪ್ಪುವ ಮಾತು. ಅನುಮಾನವೇ ಇಲ್ಲ. ಹೇಗಿದೆ ಎಂದರೆ ,ಎಲ್ಲವೂ ಸುಸೂತ್ರವಾಗಿ ದಾಟಿದರೆ ನೂರು ವರ್ಷ ಆಯಸ್ಸು. ಅಕಸ್ಮಾತ ಯಾರಾದರೂ ಸ್ವಲ್ಪ ಕಿರಿಕ್ ಮಾಡಿದರೆ ಖೇಲ್ ಖತಂ.! ಟಾರ್ಗೆಟ್ ಫಿಕ್ಸ್. ಸಧ್ಯ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ಅಧಿಕಾರಿಗಳಿಗೆ ಸರ್ಕಾರಿ ನೌಕರಿ ಮಾಡುವುದೇ ಕಷ್ಟ ಎನ್ನುವ ಪರಿಸ್ಥಿತಿ…