Headlines

ಬೆಳಗಾವಿಯಲ್ಲಿ‌ ಯಾರಿಗಾಗಿ ನಡೆಯಿತು ಈ ಕುಸ್ತಿ…!

,

ಕೌನ್ಸಿಲ್ ಗೊತ್ತುವಳಿ ತಿದ್ದಪಡಿ. ಸಭೆಯಲ್ಲಿ ಕೋಲಾಹಲ. ತನಿಖೆಗೆ ಅಸ್ತು. ಮೇಯರ್ ಸಹಿ ಬಗ್ಗೆಯೂ ತನಿಖೆ

138 ಪಿಕೆ ವಿವಾದ ತನಿಖೆಗೆ ಜಿಲ್ಲಾ ಮಂತ್ರಿ ಸೂಚನೆ.

ಬಿಜೆಪಿಗೆ ಮುಜುಗುರ ತಂದ ಪಿಕೆ ವಿವಾದ. ಡಿಸಿ, ಪೊಲೀಸ್ ಆಯುಕ್ತರ ಮೂಲಕ ತನಿಖೆಗೆ ಅಸ್ತು.

ಆ ವಿವಾದ ಮರೆಮಾಚಲು ಇದನ್ನು ಹುಟ್ಟು ಹಾಕಿದರಾ?

ಬೆಳಗಾವಿ.

ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ರಾಜಕೀಯ ಸಂಘರ್ಷಕ್ಕೆ ಕಾರಣವಾಯಿತು.

ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಕೊಟ್ಟ ಒಂದು ನೋಟೀಸ್ ಈ ಸಂಘರ್ಷಕ್ಕೆ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.

2020-21 ಸಾಲಿನಿಂದ ಇಲ್ಲಿಯವರೆಗೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಿಲ್ಲ. ಇದರ ಬಗ್ಗೆ ಕೌನ್ಸಿಲ್ ಗೆ ಮನವರಿಕೆ ಮಾಡಿ ಕೊಡಬೇಕು. ಇಲ್ಲದಿದ್ದರೆ ಕೇಂದ್ರದ ಹಣ ವಾಪಸ್ಸು ಹೋಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಪಾಲಿಕೆ ವಿಸರ್ಜನೆಗೆ ಶಿಫಾರಸ್ಸು ಮಾಡುವ ಅಧಿಕಾರವಿದೆ ಎನ್ನುವುದನ್ನು ಆ ಪತ್ರದಲ್ಲಿ ಉಲ್ಲೇಖ ಮಾಡಲಾಗಿತ್ತು.

ಹಾಗೇ ನೋಡಿದರೆ ಈ ತರಹದ ನೋಟೀಸ್ ಬೆಳಗಾವಿ ಮಹಾನಗರ ಪಾಲಿಕೆ ಅಷ್ಟೇ ಅಲ್ಲ ಎಲ್ಲ ಪಾಲಿಕೆಗೂ ಹೋಗಿತ್ತು.ಇದಕ್ಕೆ ಒಂದು ಸಾದಾ ಸೀದಾ ಉತ್ತರ ಕೊಟ್ಟರೆ ಇದು ರಾಜ್ಯ ಮಟ್ಟದ ಸುದ್ದಿಯೂ ಆಗುತ್ತಿರಲಿಲ್ಲ.

ಆದರೆ ಇಲ್ಲಿ ಪಾಲಿಕೆ ಕೌನ್ಸಿಲ್ ತೆಗೆದುಕೊಂಡ ನಿರ್ಧಾರವನ್ನು ತಿದ್ದುಪಡಿ ಮಾಡಿ ಕಳಿಸಲಾಗಿದೆ ಎನ್ನುವುದು ಸೇರಿದಂತೆ ಇನ್ನೂ ಕೆಲ ವಿಷಯ ಮುಂದಿಟ್ಟುಕೊಂಡು ಆಡಳಿತ ಪಕ್ಷದವರು ಆಯುಕ್ತರ ವಿರುದ್ಧ ಮುಗಿಬಿದ್ದರು.

ಆರಂಭಿಕ ಹಂತದಲ್ಲಿ ಆಯುಕ್ತರು, ಕೌನ್ಸಿಲ್ ಮತ್ತು ಉಪ ಆಯುಕ್ತರಿಂದ ಬಂದ ಮಾಹಿತಿಯನ್ನು ಆಧರಿಸಿ ಸರ್ಕಾರಕ್ಕೆ ಪತ್ರ ಕಳಿಸಲಾಗಿದೆ ಎನ್ನುವ ಉತ್ತರ ಆಯುಕ್ತರಿಂದ ಬಂದಿತು. ಆದರೆ ಈ ಉತ್ತರಕ್ಕೆ ಶಾಸಕ‌ ಅಭಯ ಪಾಟೀಲ ಸೇರಿದಂತೆ ಇನ್ನೂ ಕೆಲವರು ತೃಪ್ತಿ ಆಗಲಿಲ್ಲ. ಬದಲಾಗಿ ತಿದ್ದುಪಡಿ ಬಗ್ಗೆಯೇ ಸ್ಪಷ್ಟನೆಗೆ ಪಟ್ಟು ಹಿಡಿದರು.

ಕೊನೆಗೆ ಆಯುಕ್ತರು 2023-24 ಇದ್ದುದನ್ನು 2024-25 ಮಾಡಲಾಗಿದೆ ಎಂದು ಒಪ್ಪಿಕೊಂಡರು. ಇದನ್ನೇ ಮುಂದಿಟ್ಟುಕೊಂಡು ಆಯುಕ್ತರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಬೇಕೆಂದು ಆಡಳಿತದವರು ಬಿಗಿ ಪಟ್ಟು ಹಿಡಿದರು.

ಒಂದು ಹಂತದಲ್ಲಿ ಪ್ರಕರಣದ ಕಾವು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಮೇಯರ್ ಶೋಭಾ ಸೋಮನ್ನಾಚೆ ಅವರು ಸಭೆಯನ್ನು ಹತ್ತು ನಿಮಿಷಗಳ ಕಾಲ ಮುಂದಕ್ಕೆ ಹಾಕಿದರು.

ಆದರೆ ಮಧ್ಯಾಹ್ನ ಊಟದ ನಂತರ ಸಭೆ ಸೇರಿದಾಗ ಜಿಲ್ಲಾ ಉಸ್ತುವಾರಿ ಮಂತ್ರಿ ಕೌನ್ಸಿಲ್ ಪ್ರವೇಶ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಓರ್ವ ನಗರಸೇವಕ ಆಯುಕ್ತರ ವಿರುದ್ಧ ಮಾತನಾಡತೊಡಗಿದ್ದರು. ಇದನ್ನು‌ಗಮನಿಸಿದ್ದ ಜಿಲ್ಲಾ ಮಂತ್ತಿಗಳು, ಮೊದಲು ಅವರಿಗೆ ಏನ್ ಬೇಕು ಕೇಳಿ ಕೊಟ್ಡು ಬಿಡಿ ಎಂದರು. ನಂತರ ಮಾತನಾಡಿದ ಅವರು, ಇಲ್ಲಿ ಬಿಜೆಪಿಯವರಿಗೆ ಬೇಕಾಗಿದ್ದು ಎನ್ ಕ್ವಾಯಿರಿ. ಮಾಡಿಬಿಡಿ. ನಮಗೂ ಅದೇ ಬೇಕು. ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮ‌ ತೆಗೆದುಕೊಳ್ಳಲಿ ಎಂದರು.

ಗಮನಿಸಬೇಕಾದ ಸಂಗತಿ ಎಂದರೆ , ಈ ವಿಷಯ ಮುಗಿದು ಒಂದು ಹಂತಕ್ಕೆ ಬರುತ್ಯಿದ್ದಂತೆಯೇ ಶಾಸಕ ಆಸೀಫ್ ಶೇಠರು 138 ಪಿಕೆಗಳ ನೇಮಕದ ಬಗ್ಗೆ ಪ್ರಶ್ನೆ ಮಾಡಿದರು. ಅಷ್ಟೇ ಅಲ್ಲ ಅದರ ಬಗ್ಗೆ ಕೂಡ ಕ್ರಮ‌ ಜರುಗಿಸಬೇಕು ಎಂದರು.‌

ಆಡಳಿತ ಪಕ್ಷದಲ್ಲಿ 138 ಎನ್ನುವ ಶಬ್ದ ಕಿವಿಗಪ್ಪಳಿಸುತ್ತಿದ್ದತೆಯೇ ಮೇಯರ್ ಸಭೆಯನ್ನು ಮೊಟಕುಗೊಳಿಸಿದರು.‌ಅಷ್ಟೇ ಅಲ್ಲ ಎಲ್ಲರೂ ಕುಳಿತಿರುವಾಗಲೇ ರಾಷ್ಡ್ರಗೀತೆ ಹಚ್ಚಿದರು. ಇದರಿಂದ ವಿರೋಧ ಪಕ್ಷದವರು ಕೆಂಡಾಮಂಡಲವಾದರು. ಒಂದಿಷ್ಡು ಕೂಗಾಟ, ಚೀರಾಟ ಕೂಡ ನಡೆಯಿತು.

ಬಿಜೆಪಿಗೆ‌ ಮುಜುಗುರ…!

ಉಳಿದ ವಿಷಯ ಏನೇ ಇರಲಿ, ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಶಾಸಕ ಅಭಯ ಪಾಟೀಲ ಸೇರಿದಂತೆ. ರಾಜಶೇಖರ ಡೋಣಿ, ಹನುಮಂತ ಕೊಂಗಾಲಿ ಅವರು ಪಾಯಿಂಟ ಟು ಪಾಯಿಂಟ ವಾದ ಮಾಡುತ್ತಿದ್ದರು.

ಆದರೆ ವಿರೋಧ ಪಕ್ಚದ ಸದಸ್ಯರು ಮತ್ತು ಶಾಸಕ ಶೇಠ ಅವರು 138 ಪೌರ ಕಾರ್ಮಿಕರ ಅಕ್ರಮ‌ ನೇಮಕಾತಿ ಬಗ್ಗೆ ಪ್ರಸ್ತಾಪ ಮಾಡಿದರು. ಆದರೆ ಇದಕ್ಕೆ ಸ್ಪಷ್ಟ ಉತ್ತರ ಕೊಡದೆ ನಗರಸೇವಕರು ಸದನ ಬಿಟ್ಟು ಹೊರ ಹೋಗಬೇಕಾದ ಪರಿಸ್ಥಿತಿ ಬಂದಿತು. ಅಂದರೆ 138 ಪ್ರಕರಣ ಆಡಳಿತಾರೂಢ ಬಿಜೆಪಿ ವರ್ಚಸ್ಸಿಗೆ ಧಕ್ಕೆ ತಂದಿತು ಎನ್ನುವುದರಲ್ಲಿ ಎರಡು ಮಾತಿಲ್ಲ.

ವಿಚಾರಣೆಗೆ ಸೈ.‌!

ಲೋk ಚುನಾವಣೆ ಸನ್ನಿಹಿತವಾಗುತ್ತಿರುವ ಸಂದರ್ಭದಲ್ಲಿ 138 ಪೌರ ಕಾರ್ಮಿಕರ ನೇಮಕಾತಿ ವಿವಾದ ಬಿಜೆಪಿಗೆ ಒಂದು ಹೆಜ್ಜೆ ಹಿಂದಿಡುವಂತೆ ಮಾಡಿದೆ.

ಇಂದಿನ ಸಭೆಯಲ್ಲೂ ಕೂಡ ಕೊನೆಗಳಿಗೆಯಲ್ಲಿ ಅದೇ ಆಗಿದೆ. ಈ ಪ್ರಕರಣ ಬೆಳಕಿಗೆ ಬಂದಾಗಿನಿಂದ ಬಿಜೆಪಿ ಶಾಸಕರು ಸೇರಿದಂತೆ ಬಹುತೇಕ ನಗರಸೇವಕರು ಅದರ ಬಗ್ಗೆ ತನಿಖೆ ಮಾಡಿಸಿ ಎನ್ನುವ ಮಾತನ್ನು ಆಡಿದ್ದರು. ಆದರೆ ಅದಕ್ಕೆ ಮುಹೂರ್ತ ಕೂಡಿ ಬಂದಿರಲಿಲ್ಲ. ಆದರೆ ಸಭೆ ಮುಗಿದ ತಕ್ಷಣ ಜಿಲ್ಲಾ ಮಂತ್ರಿಗಳ ಸಮ್ಮುಖದಲ್ಲಿ ಆಯುಕ್ತರು ಸೇರಿದಂತೆ ಶಾಸಕ ಶೇಠರು ಈ ಪಿಕೆ ನೇಮಕಾತಿ ಯಡವಟ್ಟನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಕೊನೆಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರ ಮೂಲಕ ತನಿಖೆ ನಡೆಸಲು ತೀರ್ಮಾನ ಮಾಡಲಾಯಿತು ಎಂದು ಗೊತ್ತಾಗಿದೆ.

ಮೇಯರ ವಿರುದ್ಧವೇ ದೂರು…!

ತಡರಾತ್ರಿಯವರೆಗೆ ಕೌನ್ಸಿಲ್ ಕಡತ ನಾಪತ್ತೆ ಪ್ರಕರಣದ ಬಗ್ಗೆ ಮೇಯರ್ ವಿರುದ್ಧವೇ ದೂರು ದಾಖಲು ಮಾಡುವ ಪ್ರಯತ್ನ‌ ನಡೆದಿತ್ತು

ಸ್ವತಃ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರ ಸೂಚನೆ ಮೇರೆಗೆ ಕೌನ್ಸಿಲ ಕಾರ್ಯದರ್ಶಿ ಅವರು ಮೇಯರ್ ವಿರುದ್ಧ ದೂರು ದಾಖಲು ಮಾಡುವ ಸಿದ್ಧತೆಯಲ್ಲಿದ್ದರು.

ಇಲ್ಲಿ ಕೌನ್ಸಿಲ್ ಕಡತವನ್ನು ಮೇಯರ್ ತೆಗೆದುಕೊಂಡು ಹೋಗಿ ವಾಪಸ್ ಕೊಟ್ಟಿಲ್ಲ. ಎಂಬುದು ಅವರ ದೂರಿನ ಸಾರಾಂಶ. ಈ ನಿಟ್ಟಿನಲ್ಲಿ ತಡರಾತ್ರಿಯವರೆಗೆ ಕೌನ್ಸಿಲ್ ಕಾರ್ಯದರ್ಶಿ ಅವರು ಮಾರ್ಕೆಟ್ ಠಾಣೆಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!