Headlines

AKBMS ಆಧ್ಯಕ್ಷರಿಗೆ ಮಾತೃ ವಿಯೋಗ

ಬೆಂಗಳೂರು

ರಾಜ್ಯದ ಮಾಜಿ ಸಚಿವರಾದ ಹಾಗೂ ಹಾಸನ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದ ದಿವಂಗತ ಹಾರನಹಳ್ಳಿ ರಾಮಸ್ವಾಮಿ ಅವರ ಧರ್ಮ ಪತ್ನಿ ಶ್ರೀಮತಿ ಸುಶೀಲಮ್ಮನವರು(92) ಇಂದು ಸಂಜೆ (23/10/2023 ) ದೈವಾಧೀನರಾದರು.

ಮೃತರ ಅಂತ್ಯ ಕ್ರಿಯೆಯನ್ನು ನಾಳೆ 24 ರಂದು ಚಾಮರಾಜಪೇಟೆಯ T R ಮಿಲ್ ರುದ್ರಭೂಮಿಯಲ್ಲಿ ಮಧ್ಯಾಹ್ನ 11:45 ಕ್ಕೆ ನಡೆಸಲಾಗುವುದು. ಮೃತರಿಗೆ ಇಬ್ಬರು ಗಂಡು ಮಕ್ಕಳು ಹಿರಿಯ ಸುಪುತ್ರರಾದ ಅರವಿಂದ ಹಾರನಹಳ್ಳಿ ಅವರು ಅಮೆರಿಕಾದ ಇಂಟೆಲ್ನಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ , ಕಿರಿಯ ಪುತ್ರ ಅಶೋಕ್ ಹಾರನಹಳ್ಳಿ ರವರು ಮಾಜಿ ಅಡ್ವೊಕೇಟ್ ಜನರಲ್ ಹಾಗೂ ಹಾಸನ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಗಿ ಹಾಗು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಈ ಮೃತರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನ ದಯಪಾಲಿಸಲಿ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳು ಹಾಗು ಕಾರ್ಯಕಾರಿಣಿ ಸದಸ್ಯರು ಆ ಭಗವಂತನಲ್ಲಿ ಪ್ರಾರ್ಥಿಸಿ ಸಂತಾಪ ಸೂಚಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!