FB WAR ದೀರ್ಘ ಕ್ಕೆ ಹೊಗುವ ಯತ್ನ. ಭಾತಖಾಂಡೆ ಗಲ್ಲಿಯಲ್ಲಿ ಕೆಲ ಹೊತ್ತು ವಾತಾವರಣ ಗರಂ.ಮಧ್ಯರಾತ್ರಿ ಠಾಣೆಗೆ ಧಾವಿಸಿದ ಬಿಜೆಪಿ ನಗರ ಸೇವಕ
ಬೆಳಗಾವಿ.
ಗಡಿನಾಡ ಬೆಳಗಾವಿ ಜನ ಒಂದು ರೀತಿಯಲ್ಲಿ ಆತಂಕದ ಕ್ಷಣಗಳನ್ನು ಎದುರಿಸುವಂತಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಉತ್ತರಕ್ಕೆ ಪ್ರತ್ಯುತ್ತರ ಕೊಡುವುದು ಸಹಜ. ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅದೇ ರೀತಿ ಮುಂದುವರೆಸಬೇಕು.
ಆದರೆ ಇಲ್ಲಿ ಫೇಸಬುಕ್ ದಲ್ಲಿ ಉತ್ತರಕ್ಕೆ ಪ್ರತ್ಯುತ್ತರ ಕೊಡುವ ಬದಲು ಹೆದರಿಸುವ ತಂತ್ರಗಾರಿಕೆ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತವೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಶಾಸಕ ಅಭಯ ಪಾಟೀಲರ ನಡುವೆ ಕೆಲ ವಿಷಯಕ್ಕೆ ಸಂಬಂಧಿಸಿದಂತೆ ವಾರ್ ನಡೆದಿದೆ.
ಅದೇ ವಿಷಯ ಮುಂದಿಟ್ಟುಕೊಂಡು ಕಳೆದ ದಿನ ಕಾಂಗ್ರೆಸ್ ಕಾರ್ಯಕರ್ತರು ಮತ್ತು ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು. ಆಗ ಹಿಂದುಸ್ತಾನ ಶ್ರೀರಾಮ ಸೇನೆ ಮತ್ತು ಎಂಇಎಸ್ ಮುಖಂಡ ರಮಾಕಾಂತ ಕೊಂಡುಸ್ಕರ ಅವರು ಶಾಸಕ ಅಭಯ ಪಾಟೀಲರ ಬಗ್ಗೆ ಮಾತನಾಡಿದ್ದರು.
ಸಸಹಜವಾಗಿ ಇದಕ್ಕೆ ಉತ್ತರವಾಗಿ ಬೂಡಾ ಮಾಜಿ ಅಧ್ಯಕ್ಷ ಸಂಜಯ ಬೆಳಗಾಂವಕರ ಅವರು ಮರಾಠಾ ಸಮಾಜದ ಪರ ಎಂದು ಹೇಳಿ ಉತ್ತರ ನೀಡಿದ್ದರು. ಅದೇ ರೀತಿ ಬಿಜೆಪಿ ನಗರಸೇವಕ ರಾಜು ಭಾತಖಾಂಡೆ ಅವರೂ ಸಹ ಅದೇ ಧಾಟಿಯಲ್ಲಿ ಉತ್ತರ ನೀಡಿದ್ದರು. ಇಲ್ಲಿ ನಾವು ಪ್ರಶ್ನೆ ಮಾಡಿದ್ದು ಸಚಿವರನ್ನು. ಆದರೆ ಅದಕ್ಕೆ ಅವರ ಬದಲು ಬೇರೆಯವರು ಉತ್ತರ ಕೊಡುವುದು ಎಷ್ಟು ಸೂಕ್ತ ಎಂದು ವಿಡಿಯೋ ಮಾಡಿದ್ದರು. ಅದು ವೈರಲ್ ಕೂಡ ಆಗಿತ್ತು.
ಇದಕ್ಕೆ ಕೊಂಡುಸ್ಕರ ಸಂಘಟನೆಯವರು ಅದೇ ಫೇಸಬುಕ್ ನಲ್ಲಿ ಉತ್ತರ ಕೊಟ್ಟಿದ್ದರೆ ಸಮಸ್ಯೆನೇ ಬರುತ್ತಿರಲಿಲ್ಲ.
ಆದರೆ ಇಂದು ಈ ಬಗ್ಗೆ ವಿಚಾರಣೆ ನೆಪದಲ್ಲಿ ನಗರಸೇವಕ ಭಾತಖಾಂಡೆ ಮನೆ ಕಡೆಗೆ ಹೋಗಿದ್ದು ಒಂದು ರೀತಿಯ ಗೊಂದಲಕ್ಕೆ ಕಾರಣವಾಯಿತು.
ಈ ಹಿನ್ನೆಲೆಯಲ್ಲಿ ಅಲ್ಲಿ ಬಿಜೆಪಿ ಪರವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರ ತೊಡಗಿದರು. ಕೊನೆಗೆ ಪೊಲೀಸ್ ಮಧ್ಯಸ್ಥಿಕೆ ವಹಿಸಿದ್ದರಿಂದ ಜನರನ್ನು ಚದುರಿಸಲಾಯಿತು.
ಒಂದು ಹಂತದಲ್ಲಿ ರಮಾಕಾಂತ ಕೊಂಡುಸ್ಕರ್, ವಿಕಾಸ ಕಲಘಟಗಿ, ಅಮರ ಯಳ್ಳೂರಕರ ಸೇರಿದಂತೆ ಇನ್ನೂ ಕೆಲವರು ಮಾರ್ಕೆಟ್ ಠಾಣೆಗೆ ದೂರು ಕೊಡುವ ನಿಟ್ಟಿನಲ್ಲಿ ಜಮಾ ಆಗಿದ್ದರು.
ಈ ಸಂದರ್ಭದಲ್ಲಿ ಜನ ಹೆಚ್ವಿಗೆ ಸೇರುತ್ತಿದ್ದುದನ್ನು ಗಮನಿಸಿದ ಎಸಿಪಿ ನಾರಾಯಣ ಬರಮನಿ ಅವರು ಖಡಕ್ ಎವ್ಚರಿಕೆ ಕೊಟ್ಟು ಜನರನ್ನು ಚದುರಿಸಿದರು. ಕೇಸ್ ಕೊಡುವುದಾಗಿ ಹೋಗಿದ್ದವರೂ ಸಹ ಪ್ರಕರಣ ದಾಖಲು ಮಾಡದೇ ವಾಪಸ್ಸು ಹೋದರು.
ಮತ್ತೊಂದು ಕಡೆಗೆ ನಗರಸೇವಕ ರಾಜು ಭಾತಖಾಂಡೆ ಅವರೂ ಕೂಡ ಮಧ್ಯರಾತ್ರಿ 1 ಗಂಟೆವರೆಗೆ ಠಾಣೆಯಲ್ಲಿದ್ದುಕೊಂಡು ದಾಖಲಿಸುವ ಕೆಲಸ ಮಾಡುತ್ತಿದ್ದರು.