Headlines

‘138 ತನಿಖೆಗೆ ಸಿದ್ಧ’

ಸಚಿವರ ಆರೋಪಕ್ಕೆ ಉತ್ತರ ಇಲ್ಲ. ಶಾಸಕ‌ ಶೇಠ 59 ನೇ ಕಾರ್ಪೋರೇಟರ್.. ಅವರಿಗೆ ತಿಳುವಳಿಕೆ ಇಲ್ಲ. ಸರ್ಕಾರ ಅವರದ್ದೇ ಇದೆ.ವಿಚಾರಣೆ ಮಾಡಿಸಲಿ, 138 ಕಾರ್ಮಿಕರ ಬಗ್ಗೆ ತನಿಖೆ ಮಾಡಿದರೆ ಅಭ್ಯಂತರವಿಲ್ಲ

ಬೆಳಗಾವಿ.‌

ಮಹಾನಗರ ಪಾಲಿಕೆಯಲ್ಲಿ ತೀವೃ ವಿವಾದ ಸೃಷ್ಟಿಸಿದ್ದ138 ಕಾರ್ಮಿಕರ ನೇಮಕದಲ್ಲಿ ಸರ್ಕಾರ ಯಾವುದೇ ರೀತಿಯ ತನಿಖೆ ನಡೆಸಲಿ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯದಲ್ಲಿ ಕಾಂಗ್ರೆಸ್ ದವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಅವರದ್ದೇ ಇದೆ. ಯಾವುದೇ ತನಿಖೆ ಮಾಡಿಸಲಿ ಎಂದು ಅಭಯ ಪಾಟೀಲ ಹೇಳಿದರು.

ಕಳೆದ ಪಾಲಿಕೆ ಸಭೆಯಲ್ಲಿ 138 ವಿಷಯ ಪ್ರಸ್ತಾಪ ಆದ ತಕ್ಷಣ ಬಿಜೆಪಿಗರು ಪಲಾಯನ ಮಾಡಿದರು ಎಂದು ವರದಿಗಳು ಪ್ರಕಟವಾಗಿವೆ‌ ಆದರೆ ಅದು ಸುಳ್ಳು. ಆ ಸಭೆಯಲ್ಲಿ ಈ ವಿಷಯ ಇರಲೇ ಇಲ್ಲ. ಹೀಗಾಗಿ ಆ ವಿಷಯದ ಬಗ್ಗೆ ಓಡಿ ಹೋಗಲಾಯಿತು ಎನ್ನುವುದು ಸುಳ್ಳು ಎಂದು ಅವರು ಹೇಳಿದರು.

ಇನ್ನು ಸಚಿವ ಸತೀಶ್ ಜಾರಕಿಹೊಳಿ ಅವರು ಮಾಡಿದ ಆರೋಪಗಳ ಬಗ್ಗೆ ಕೇಳಿದ ಎಲ್ಲ ಪ್ರಶ್ನೆಗೆ ಅಭಯ ಪಾಟೀಲರು ‘ಉತ್ತರ ಇಲ್ಲ’ ಎನ್ನುವ ಉತ್ತರ ನೀಡಿದರು.

ಶಾಸಕ ಆಸೀಫ್ ಶೇಠರಿಗೆ ಇದರ ಬಗ್ಗೆ ತಿಳುವಳಿಕೆ ಇಲ್ಲ. ಅವರು 59 ನೇ ನಗರ ಸೇವಕ ಎಂದು ವ್ಯಂಗ್ಯವಾಡಿದರು.

ಸ್ಮಾರ್ಟ ಸಿಟಿ ಬಗ್ಗೆ ವಿಚಾರಣೆ ಮಾಡಿಸಿ ಅಂತ ಕಳೆದ ಮೂರು ತಿಂಗಳ ಹಿಂದೆಯೇ ಹೇಳಿದ್ದೇನೆ. ಸರ್ಕಾರ ಅವರದ್ದೇ ಇದೆ. ವಿಚಾರಣೆ ಮಾಡಿಸಬಹುದು ಎಂದರು.

ರಾಜ್ಯಪಾಲರಿಗೆ ಕಾನೂನು ಸುವ್ಯವಸ್ಥೆ ಯಾವ ರೀತಿ ಹದಗೆಟ್ಟಿದೆ ಎನ್ನುವುದು ಸೇರಿದಂತೆ ಇನ್ನೂ ಕೆಲವೊಂದು ಸಂಗತಿಗಳನ್ನು ಗಮನಕ್ಕೆ ತರಲಾಗಿದೆ. ಅದನ್ನು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಿದ್ದಾರೆಂದರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಅನಿಲ ಬೆನಕೆ, ಎಂ.ಬಿ. ಝಿರಲಿ, ಮುರುಘೇಂದ್ರಗೌಡ ಪಾಟೀಲ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!