ಮನೆಗೆ ನುಗ್ಗಿದ ಕಸದ ವಾಹನ.
ಸುದೈವವಶಾತ್ ಯಾರಿಗೂ ಏನೂ ಆಗಿಲ್ಲ.
ಆದರೆ ಮನೆಯ ಆವರಣ ಗೋಡೆ ಢಮಾರ್.
ಬದಲಾದ ಚಾಲಕನ ಯಡವಟ್ಟು ಇದಕ್ಕೆ ಕಾರಣ. ಬ್ರೆಡ್ ಒತ್ತುವ ಬದಲು ಎಕ್ಸಿಲೇಟರ್ ಒತ್ತಿದ ಚಾಲಕ.
ಬೆಳಗಾವಿ. ಬೆಳಗಾವಿಯಲ್ಲಿ ಕಸ ತುಂಬುವ ವಾಹನಗಳನ್ನು ನೋಡಿದರೆ ಸಾಕು, ಪಾಲಿಕೆಯ ಆ ಶಾಖೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಇಲ್ಲಿ ಕಸದ ವಾಹನಕ್ಕೆಂದೇ ಚಾಲಕರು ಇದ್ದಾರೆ. ಆದರೆ ಚಾಲಕರು ಯಾರು, ವಾಹನ ಚಲಾಯಿಸುವವರು, ಕಸ ತುಂಬುವವರು ಯಾರು ಎನ್ನುವುದೇ ಗೊತ್ತಾಗುತ್ತಿಲ್ಲ.ಎಲ್ಲವೂ ಒನ್ ಟುಕಾ ಫೋರ್. ಅದರ ಬಗ್ಗೆ ಪ್ರಶ್ನೆ ಮಾಡುವವರೂ ಕೂಡ ಇಲ್ಕದ ಪರಿಸ್ಥಿತಿ ಬಂದೊದಗಿದೆ.

ಇಂದು ಬೆಳಿಗ್ಗೆ ಅನಗೋಳ ಅಂದರೆ ಚಿದಂಬರ ನಗರದ ರಾಜಾರಾಮ ಮಾರ್ಗದಲ್ಲಿ ಕಸದ ವಾಹನವೊಂದು ಒಬ್ಬರ ಮನೆಗೆ ನುಗ್ಗಿತ್ತು.

ಇಲ್ಲಿ ವಾಹನದ ಬ್ರೆಕ್ ಫೇಲ್ ಆಗಿದ್ದರೆ ಸಹಜ ಅನಬಹುದು. ಆದರೆ ಇಲ್ಲಿ ವಾಹನ ಚಾಲನೆ ಮಾಡಬೇಕಾದ ಚಾಲಕ ಪಕ್ಕಕ್ಕೆ ಕುಳಿತಿದ್ದರೆ ಬೇರೊಬ್ಬರು ವಾಹನ ಚಲಾಯಿಸುತ್ತಿದ್ದರು ಎಂದು ಹೇಳಲಾಗಿದೆ. ಅವರು ರಸ್ತೆ ತಿರುವು ಬಂದಾಗ ಬ್ರೆಕ್ ಒತ್ತದೆ ಎಕ್ಸಿಲೇಟರ್ ಒತ್ತಿದ್ದು ಇದಕ್ಕೆ ಕಾರಣ ಎನ್ನುವ ಮಾತುಗಳಿವೆ.

ಇದೆಲ್ಲದರ ಜೊತೆಗೆ ಪಾಲಿಕೆಯಲ್ಲಿ ಉತ್ತಮ ಕಂಡೀಶನದಲ್ಲಿರುವ ವೆಹಿಕಲ್ ಗಳಿವೆ.ಅವುಗಳಿಗೆ ಚಾಲಕರು ಇಲ್ಲ ಎನ್ನುವ ಮಾತುಗಳಿವೆ. ಆದರೆ ಅಂತಹ ಕಂಡೀಶನಗ ವಾಹನಗಳನ್ನು ಬಿಟ್ಟು ಸಂಪೂರ್ಣ ಹದಗೆಟ್ಡ ವಾಹನಗಳನ್ನು ರಸ್ತೆಗೆ ಬಿಡುವ ಕಾರಣ ಏನು ಎನ್ನುವುದು ಸಗಪಷ್ಟವಾಗಬೇಕಿದೆ. ಅದೇನೇ ಆಗಲಿ. ಬೆಳಗಾವಿ ಪಾಲಿಕೆ ಆರೋಗ್ಯಕ್ಕೆ ಹೈ ಡೋಸ್ ಚುಚ್ಚುನದ್ದು ಕೊಡುವ ಕೆಲಸವನ್ನು ಶಾಸಕದ್ವಯರು, ಆಯುಕ್ತರು, ಉಪ ಆಯುಕ್ತರು ಮಾಡಬೇಕಾಗಿದೆ. ಇಲ್ಲದಿದ್ದರೆ ಪಾಲಿಕೆ ಆರೋಗ್ಯ ಶಾಖೆಯಲ್ಲಾಗುತ್ತಿರುವ ದುಷ್ಪರಿಣಾಮ ಎಲ್ಕೆಡೆಗೆ ಹಬ್ಬುವ ಸಾಧ್ಯತೆ ಇದೆ.