ಬೆಳಗಾವಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ವತಿಯಿಂದ ಬೆಳಗಾವಿ ನಗರದಲ್ಲಿ ಪಥ ಸಂಚಲನ (March Past) ನಡೆಯಿತು.
ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಅನಿಲ ಬೆನಕೆ , ಆರ್‌ಎಸ್‌ಎಸ್ ಕಾರ್ಯಕರ್ತರು ಗಣವೇಷ ಧರಿಸಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು.

ನಗರದ ಸರ್ದಾರ್ಸ್ ಮೈದಾನದಿಂದ ಪಥ ಸಂಚಲನ ಆರಂಭವಾಯಿತು. ಕಿತ್ತೂರು ಚನ್ನ ವೃತ್ತ, ಕಾಕತಿವೇಸ್, ಬೋಗಾರವೇಸ್ ಮೂಲಕ ಪಥಸಂಚಲನ ಸಾಗಿತು.
ಖಾಕಿ ಪ್ಯಾಂಟ್, ಬಿಳಿ ಶರ್ಟ್, ಲಾಠಿ ಹಿಡಿದು . ಬ್ಯಾಂಡ್‌ಗೆ ತಕ್ಕ ಹಾಗೆ ಆರ್‌ಎಸ್‌ಎಸ್ ಕಾರ್ಯಕರ್ತರು ಹೆಜ್ಜೆ ಹಾಕಿದರು.

ಆರ್‌ಎಸ್‌ಎಸ್ ಪಥ ಸಂಚಲನದ ಹಿನ್ನೆಲೆ ನಗರದ ವಿವಿಧೆಡೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು

ಬಿಜೆಪಿ ಮಹಿಳಾ ಕಾರ್ಯಕರ್ತೆಯರು, ನಗರಸೇವಕಿಯರು ಪಥಸಂಚಲನ ಮಾರ್ಗದ ಮಧ್ಯೆ ರಂಗೋಲಿ ಬಿಡಿಸಿ ಅಲಂಕಾರಗೊಳಿಸಿದ್ದರು.