ಸಾಹುಕಾರ 30 ರಂದು ಪ್ರೆಸ್‌ಮೀಟ್:
ಹೆಚ್ಚಿಸಿದ ಹಾರ್ಟ್‌ಬೀಟ್
ಬೆಳಗಾವಿಯಲ್ಲಿ ಸಿಡಿಸ್ತಾರಾ ಹೊಸ ಅಸ್ತ್ರ? ಸಮ್ಮಿಶ್ರ ಸರ್ಕಾರ ಕೆಡವಿದ ರೂವಾರಿ.
ಬೆಳಗಾವಿ:
ಒಂದೆಡೆ ಆಪರೇಷನ್ ಕಮಲ ಬಗ್ಗೆ ವದಂತಿಗಳು ಕೇಳಿ ಬರುತ್ತಿರುವ ಬೆನ್ನಲ್ಲಿಯೇ ಸೋಮವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ನಡೆಸುತ್ತಿರುವ ಪತ್ರಿಕಾಗೋಷ್ಠಿ ಭಾರೀ ಸಂಚಲನ ಮೂಡಿಸಿದೆ.
೨೦೧೮ರ ಸಮ್ಮಿಶ್ರ ಸರ್ಕಾರ ಕೆಡವಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲು ಮುಖ್ಯ ಕಾರಣ ಎಂದೇ ಹೇಳಲಾಗುವ ಬಾಂಬೇ ಬಾಯ್ಸ್ ಲೀಡರ್ ರಮೇಶ ಜಾರಕಿಹೊಳಿ ಅವರು ಈಗ ಮತ್ತೊಮ್ಮೆ ಆಪರೇಷನ್ ಕಮಲಾ ನಡೆಸಿ ಕಾಂಗ್ರೆಸ್ ಸರ್ಕಾರವನ್ನು ಕೆಡಹುವುಕ್ಕೆ ಖೆಡ್ಡಾ ತೋಡುತ್ತಿದ್ದಾರೆಯೇ ಎಂಬ ಪ್ರಶ್ನೆಯೂ ಕಾಡುತ್ತಿದೆ.

ಕೆಲ ದಿನಗಳ ಹಿಂದೆ ಅಥಣಿಯಲ್ಲಿ ಕಾಣಿಸಿಕೊಂಡಿದ್ದ ಸಾಹುಕಾರ ರಮೇಶ ಜಾರಕಿಹೊಳಿ ತಮ್ಮ ಹಾಗೂ ಜಗದೀಶ ಶೆಟರ್ ಭೇಟಿಯ ಬಗ್ಗೆ ಟೀಕಾಕಾರರಿಗೆ
ಖಡಕ್ ಉತ್ತರ ನೀಡಿ ಕಾದು ನೋಡಲು ಹೇಳಿದ್ದರು.
ಅದೇ ಪ್ರಕಾರ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿರುವ ಸತೀಶ ಜಾರಕಿಹೊಳಿಯವರಿಗೆ ಹಿಂಸೆಯಾಗುತ್ತಿರುವುದರ ಬಗ್ಗೆಯೂ ಹೇಳಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈ ಕಟ್ಟಿ ಹಾಕಲಾಗಿದೆ ಎಂದು ವ್ಯಂಗ್ಯ ಮಾಡಿದ್ದರು.
ಇದೀಗ ಸಾಹುಕಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸುತ್ತಿರುವುದು ಭಾರೀ ಕುತೂಹಲ
ಕೆರಳಿಸಿದ್ದು, ಯಾವ ವಿಚಾರದ ಬಗ್ಗೆ ಮಾತನಾಡಲಿದ್ದಾರೆ ಎಂಬುದು ಮಾತ್ರ ಗೌಪ್ಯವಾಗಿದೆ.