ಬೆಳಗಾವಿ ಡಿಸಿ ದಿಟ್ಟ ನಿರ್ಧಾರ. ನಿರ್ಧಾರ ಸ್ವಾಗತಿಸಿದ ಕನ್ನಡಿಗರು.
ಬೆಳಗಾವಿ.
ರಾಜ್ಯೋತ್ಸವ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಮೂವರು ಸಚಿವರು ಮತ್ತು ಓರ್ವ ಸಂಸದರಿಗೆ ಜಿಲ್ಲೆ ಪ್ರವೇಶ ನಿಷೇಧಿಸಿ ಡಿಸಿ ಆದೇಶ ಹೊರಡಿಸಿದ್ದಾರೆ.

:ಮಹಾರಾಷ್ಟ್ರ ರಾಜ್ಯದ ಸಚಿವರಾದ ಶಂಭುರಾಜೆ ದೇಸಾಯಿ, , ಚಂದ್ರಕಾಂತ (ದಾದಾ) ಪಾಟೀಲ, , ದೀಪಕ ಕೇಸರಕರ, ಹಾಗೂ ಸಂಸದರಾದ ಧೈರ್ಯಶೀಲ ಮಾನೆ ಪ್ರವೇಶ ನಿಷೇಣದಿಸಲಾಗಿದೆ.

ಇವರು ಬೆಳಗಾವಿ ಜಿಲ್ಲೆಗೆ ಆಗಮಿಸಿ ಬೆಳಗಾವಿ ನಗರದಲ್ಲಿ ಎಮ್.ಇ.ಎಸ್. ಸಂಘಟನೆಯವರು ಕೈಗೊಳ್ಳಲಿರುವ ಕರಾಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರಚೋದನಾಕಾರಿ ಭಾಷಣ ಅಥವಾ ಪ್ರಚೋದನಾಕಾರಿ ಹೇಳಿಕೆ ನೀಡುವ ಸಾಧ್ಯತೆಗಳು ಇರುತ್ತವೆ. ಇದರಿಂದ ಭಾಷಾ ವೈಷಮ್ಯ ಬೆಳೆದು ಹೆಚ್ಚಿನ ಪ್ರಮಾಣದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಅದು ಅಲ್ಲದೇ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟಾಗುವುದನ್ನು ಹಾಗೂ ಕರ್ನಾಟಕದ ಮರಾಠಿ ನಿವಾಸಿಗರನ್ನು ಪ್ರಚೋದಿಸುವ ಸಾದ್ಯತೆ ಇರುವುದರಿಂದ, ಬೆಳಗಾವಿ ಜಿಲ್ಲೆಯಲ್ಲಿ ಕಾನೂನು ಸುವ್ಯಸ್ಥೆಯನ್ನು ಹಾಗೂ ಸಾರ್ವಜನಿಕರ ನೆಮ್ಮದಿಯನ್ನು ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ , ಸಿಆರ್‌ಪಿಸಿ 1973 ಕಲಂ. 144 (3) ರನ್ವಯ 31.10.2023 ರ ಬೆಳಿಗ್ಗೆ 6-00 ಗಂಟೆಯಿಂದ ದಿನಾಂಕ:02.ರ ಸಾಯಂಕಾಲ 6-00 ಗಂಟೆಯವರೆಗೆ ಬೆಳಗಾವಿ ನಗರ ಹಾಗೂ ಬೆಳಗಾವಿ ಜಿಲ್ಲೆಯ ಗಡಿಯೊಳಗೆ ಪ್ರವೇಶಿಸದಂತೆ ಕ್ರಮ ವಹಿಸಲು ಈ ನಿರ್ಭಂಧಿತ ಆದೇಶವನ್ನು ಹೊರಡಿಸಿದ್ದಾರೆ