ಮಂಗಳಚಾರ 2 ಕ್ಕೆ ರಮೇಶ ಜಾರಕಿಹೊಳಿ ಪ್ರೆಸ್ ಮೀಟ್. ಡಿಕೆ ವಿರುದ್ಧ ದೊಡ್ಡ ಮಟ್ಟದ ವಾಗ್ಧಾಳಿ ಸಾಧ್ಯತೆ. ಬೆಂಗಳೂರಿನ ರಮೇ# ನಿವಾಸಕ್ಕೆ ಅಶ್ಲೀಲ ಪೀಸ್ಟರ್ ಅಂಟಿಸಿಸದ ಡಿಕೆ ಬೆಂಬಲಿಗರು. ಕಳೆದ ದಿನವಷ್ಟೆ ಡಿಕೆ ವಿರುದ್ಧ ಕಿಡಿಕಾರಿದ್ದ ರಮೇಶ್ ಜಾರಕಿಹೊಳಿ.

ಬೆಳಗಾವಿ. ರಾಜ್ಯ ರಾಜಕಾರಣದಲ್ಲಿ ಯಾರು ಶತ್ರುನೂ ಅಲ್ಲ ಮಿತ್ರನೂ ಅಲ್ಲ ಎನ್ನುವುದು ರೂಢಿ ಮಾತು.

ಒಂದಾನೊಂದು ಕಾಲದಲ್ಲಿ ಗಳಸ್ಯ ಕಂಠಸ್ಯ ಎನ್ನುವಂತಿದ್ದ ಕನಕಪುರದ ಬಂಡೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಈಗ ಪಕ್ಕಾ ಬದ್ಧ ವೈರಿಗಳಾಗಿದ್ದಾರೆ. ಈ ವೈರತ್ವ ಯಾರಿಂದ, ಯಾರಿಗೋಸ್ಕರ, ಯಾತಕ್ಕಾಗಿ ಬಂದಿತು ಎನ್ನುವುದು ಇಲ್ಲಿ ಅಪ್ರಸ್ತುತ.

ಕಳೆದ ದಿನವಷ್ಟೇ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಡಿಸಿಎಂ ಡಿ.ಕೆ ಶಿವಕುಮಾರ ವಿರುದ್ಧ ಗುಡುಗಿದ್ದರು.ಅಷ್ಟೇಅಲ್ಲ ಬಾಯಿಗೆ ಬಂದಹಾಗೆ ನಿಂದಿಸಿದ್ದರು.
ಈಗ ಅದರಿಂದ ಕೆರಳಿದ ಡಿಕೆಶಿ ಬೆಂಬಲಿಗರು ರಮೇಶ ಜಾರಕಿಹೊಖಿ ಅವರ ಅಲ್ಲಿನ ನಿವಾಸದ ಮೇಲೆ ಅಶ್ಲೀಲ ಪೋಸ್ಟರ್ ಅಂಟಿಸುದ್ದರು. ಇದು ಸಹಜವಾಗಿ ಮತ್ತೇ ನಾಗರಹಾವನ್ನು ಬಡಿದೆಬ್ಬಿಸಿದಂತಾಯಿತು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಮಂಗಳವಾರ 31 ರಂದು ಮಧ್ಯಾಹ್ನ. 2 ಕ್ಕೆ ರಮೇಶ ಜಾರಕಿಹೊಳಿ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಈ ಗೋಷ್ಠಿ ನಡೆಯಕಿದೆ. . ಹೀಗಾಗಿ ರಮೇಶ್ ಮತ್ತೇನು ಮಾತನಾಡಬಹುದು, ಯಾವ ಭಾಷೆಯಲ್ಲಿ ಡಿಕೆಶಿಗೆ ಉತ್ತರ ಕೊಡಬಹುದು ಕಾದು ನೋಡಬೇಕು