ಬೆಳಗಾವಿ.ಅದ್ದೂರುಯಾಗಿ ನಡೆದ ರಾಜ್ಯೋತ್ಸವಜ್ಕೆ ಕಪ್ಪು ಚುಕ್ಕೆ ಯಂತಾಗಿದ್ದ ನಾಡದ್ರೋಹಿ ಎಂಇಎಸ್ ಭಂಡರ ವಿರುದ್ಧ ಬೆಳಗಾವಿ ಮಾರ್ಕೆಟ್ ಪೊಲೀಸರು ಸ್ವಯಂ ಪ್ರೇರಿತವಾಗಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ.

ಯಾವುದೇ ಅನುಮತಿ ಇಲ್ಲದಿದ್ದರೂ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ನವೆಂಬರ್ 1 ರಂದು ಕರಾಳ ದಿನ ಆಚರಣೆ ಮಾಡಿದ್ದರು.ಈಗ ವಿಡಿಯೋ ಆಧರಿಸಿ ಎಂಇಎಸ್ನ ಸುಮಾರು 18 ಕ್ಕೂ ಹೆಚ್ಚು ಜನರ ವಿರುದ್ಧ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ,
ಮಾಲೋಜಿರಾವ್ ಅಷ್ಟೇಕರ, ಮನೋಹರ ಕಿಣೇಕರ, ಪ್ರಕಾಶ ಮರಗಾಳಿ, ರಣಜಿತ್ ಚವ್ವಾಣ, ಅಮರ ಯಳ್ಳೂರಕರ, ನಗರಸೇವಕ ರವಿ ಸಾಳುಂಕೆ, ವೈಶಾಲಿ ಭಾತಖಾಂಡೆ, ಗಜಾನನ ಪಾಟೀಲ, ಶಿವಾಜಿ ಸುಂಟಕರ, ಎಂ.ಜೆ. ಪಾಟೀಲ, ಆರ್.ಎಂ. ಚೌಗಲೆ, ನೇತಾಜಿ ಜಾಧವ, ಸರಿತಾ ಪಾಟೀಲ, ಸರಸ್ವತಿ ಪಾಟೀಲ, ವಿಕಾಸ ಕಲಘಟಗಿ, ಇನ್ನೂ ಕೆಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ನಿನ್ನೆ ನಡೆದ ಕರಾಳ ದಿನ ವಿಡಿಯೋ ಆಧರಿಸಿ ಕೇಸ್ ದಾಖಲು ಮಾಡಿಕೊಳ್ಳುತ್ತಿದ್ದಾರೆ, ಶುಭಂ ಶೆಳಕೆ ಮತ್ತು ರಮಾಕಾಂತ ಕೊಂಡುಸ್ಕರ ಹೆಸರೂ ಸಹ ಸೇರ್ಪಡೆ ಆಗುವ ಸಾಧ್ಯತೆಗಳಿವೆ.