ಬೆಳಗಾವಿ.
ಗಡಿನಾಡ ಬೆಳಗಾವಿ ಮತ್ತೊಂದು ಅಮಾನವೀಯ ಘಟನೆಗೆ ಸಾಕ್ಷಿಯಾಗಿದೆ. ಕಳೆದ ಬಾರಿ ಅಂಗವಿಕಲನ ಮೇಲೆ ಖಾಕಿ ದೌರ್ಜನ್ಯ ನಡೆದ ಪ್ರಕರಣ ಮಾಸುವ ಮುನ್ನವೇ ಅದೇ ಬೆಳಗಾವಿಯಲ್ಲಿ ದೇಶ ರಕ್ಷಣೆಯಲ್ಲಿ ತೊಡಗುವ ಸೈನಿಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ
ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶಪುರದ ಬಳಿಯ ಬಾರ್ ಮುಂದೆ ಈ ಘಟನೆ ನಡೆದಿದೆ. ಸೈನಿಕನ ಮೇಲೆ ಹತ್ತಾರು ಜನ ಗುಂಪು ಹಲ್ಲೆ ಮಾಡುತ್ತಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸೈನಿಕನ ತಲೆಗೆ ರಕ್ತ ಸೋರುತ್ತಿರುವುದು
ಇಲ್ಲಿ ಇಷ್ಟೆಲ್ಲ ಆದರೂ ಕೂಡ ಪಾಪ ಕ್ಯಾಂಪ್ ಪೊಲೀಸರು ತಮ್ಮಷ್ಟಕ್ಕೆ ತಾವೇ ಇದ್ದರು. ಕೊನೆಗೆ ಸ್ಥಳಕ್ಜೆ ಆಗಮಿಸಿದ ಪೊಲೀಸರು ಹಲ್ಲೆ ಮಾಡಿದ ವ್ಯಕ್ತಿಗೆ ನಮಸ್ಕರಿಸಿ ಹೊರಟು ಹೋದರು ಎಂದು ಗೊತ್ತಾಗಿದೆ.
ಈ ಬಗ್ಗೆ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆ ಉದ್ಯಮಬಾಗದಲ್ಲಿ ನಡೆದ ಅಂಗವಿಕಲನ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸ್ ಆಯುಕ್ತರು ಇಲಾಖಾ ವಿಚಾರಣೆಗೆ ಆದೇಶ ಮಾಡುವುದಾಗಿ ಹೇಳಿದ್ದರು. ಆದರೆ ಇಲಾಖೆ ವಿಚಾರಣೆಗೆ ಆದೇಶ ಹೊರಬಿತ್ತೊ ಅಥವಾ ಇಲ್ಲವೊ ಎನ್ನುವುದು ಸ್ಪಷ್ಟವಾಗಿಲ್ಲ.
ಇನ್ನು ಘಟಪ್ರಭಾ ಠಾಣೆ ವ್ಯಾಪ್ತಿಯಲ್ಲಿ ದಕಿತ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಪ್ರಕರಣದಲ್ಲೂ ಕೂಡ ಜಿಲ್ಲಾ ಪೊಲೀಸರು ಜಾಣಮೌನ ತಾಳಿದ್ದರು ಎಂದು ಹೇಳಲಾಗಿತ್ತು.ಇತ್ತೀಚೆಗೆ ಶಾಸಕ ಅಭಯ ಪಾಟೀಲರು ಬೆಳಗಾವಿಯಲ್ಲಿ ಪೊಲೀಸ್ ವೈಫಲದ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು