Headlines

ವಿಶ್ವಕಪ್ ಕ್ರಿಕೆಟ್ ವೀಕ್ಷಣೆಗೆ ವಿಶೇಷ ವ್ಯವಸ್ಥೆ

ಶಾಸಕ. ಅಭಯ ಪಾಟೀಲರಿಂದ ವಿಶೇಷ ವ್ಯವಸ್ಥೆ.

ದಕ್ಷಿಣ ಕ್ಷೇತ್ರದ 7 ಕಡೆಗೆ LED SCREEN ಅಳವಡಿಕೆ.

ಸಾರ್ವಜನಿಕರಿಗೆ ಭಾರತ ಗೆಲ್ಲುವುದನ್ನು ಕಣ್ತುಂಬಿಕೊಳ್ಳಲು ಅವಕಾಶ


ಬೆಳಗಾವಿ.
ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲ ಮೇಲೆ ನಿಲ್ಲಿಸಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಕಪ್ ಅಂತಿಮ ಪಂದ್ಯದ ವೀಕ್ಷಣೆಗೆ ಇಡೀ ವಿಶ್ವವೇ ಕಾದು ಕುಳಿತಿದೆ.

ಈ ಸಂಭ್ರಮ ವನ್ನು ಕಣ್ತುಂಬಿಕೊಳ್ಳಲು ನೀವು ಬೆಳಗಾವಿಯಲ್ಲಿ ಬೇರೆಡೆಗೆ ಹೋಗುವ ಅವಶ್ಯಕತೆಯಿಲ್ಲ.

ಅದಕ್ಕಾಗಿಯೇ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು 7 ಕಡೆಗೆ ದೊಡ್ಡ ದೊಡ್ಡ KED. ಪರದೆಯನ್ನು ಅಳವಡಿಸಿದ್ದಾರೆ.

ಭಾಗ್ಯನಗರ ಮೊದಲನೇ ಕ್ರಾಸ್ನ ದತ್ತ ಮಂದಿರ ಬಳಿ,

ಬ್ಯಾಂಕ್ ಆಫ್ ಇಂಡಿಯಾ ಕಾರ್ನರ್,

ಲಕ್ಷ್ಮೀ ನಗರ ಹಳೆ ಬೆಳಗಾವಿಯ ಶಿಂಧೆ ಮೈದಾನ,

ಮಹದ್ವಾ ರಸ್ತೆಯ ಧರ್ಮವೀರ ಸಂಭಾಜಿ ಮೈದಾನ,

ಕೋರೆ ಗಲ್ಲಿ ಕ್ರಾಸ್ ನ ಸೂರಜ ಕೋಲ್ಡ್ರಿಂಕ್ಸ ಬಳಿ,

ನಾಥ್ ಪೈ ಸರ್ಕರ್ ಕಾರ್ನರ

ಮತ್ತು ಅನಗೋಳದ ಸಾಯಿ ಗಾರ್ಡನ್

ಬಳಿ ಬಹಿರಂರವಾಗಿ ಸಾರ್ವಜನಿಕರು ಒಟ್ಟಿಗೆ ಕುಳಿತುಕೊಂಡು ಭಾರತ ಗೆಲ್ಲುವ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಮಾಡಲಾಗಿದೆ

ನಾಳೆ ನಡೆಯಲಿರುವ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕೆಂದು ಕ್ರಿಕೆಟ್ ಪ್ರೇಮಿಗಳು ದೇವಸ್ಥಾಃನಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ,. ಇನ್ನೂ ಕೆಲವರು ಬೆಟ್ಟಿಂಗ್ ಕೂಡ ಕಟ್ಟತೊಡಗಿದ್ದಾರೆ,
ಆದರೆ ಭಾರತ ಗೆಲ್ಲುವುದನ್ನು ಒಟ್ಟಿಗೆ ಕುಳಿತು ನೋಡಿ ಕಣ್ತುಂಬಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಈ ಬಾರಿ ಬಹುತೇಕ ಕಡೆಗೆ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ,
ಬಹುತೇಕವಾಗಿ ಕ್ಲಬ್, ಹೊಟೇಲುಗಳಲ್ಲಿ ದೊಡ್ಡ ದೊಡ್ಡ ಸ್ಕ್ರೀನ್ ಹಾಕಲಾಗುತ್ತದೆ, ಅದರೆ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಶಾಸಕ ಅಭಯ ಪಾಟೀಲರು ಏಳು ಕಡೆಗೆ ದೊಡ್ಡ ಎಲ್ಇಡಿ ಪರದೆಯ ಮೇಲೆ ಜನರು ಖುಷಿ ಖುಷಿಯಾಗಿ ಒಟ್ಟಿಗೆ ಕುಳಿತು ಪಂದ್ಯ ವೀಕ್ಷಣೆ ವ್ಯವಸ್ಥೆ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿಂದು ಶಾಸಕರು ಖುದ್ದು ಆಯಾ ಸ್ಳಳಕ್ಕೆ ಹೋಗಿ ಪರಿಶೀಲನೆ ನಡೆಸಿದರು, .
ನಾಳೆ ಗುಜರಾತ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯಾವಳಿ ನಡೆಯಲಿದೆ.
ಭಾರತ ಎಲ್ಲ ಪಂದ್ಯದಲ್ಲೂ ಗೆಲುವು ಸಾದಿಸಿ ಈಗ ಅಂತಿಮ ಹಂತಕ್ಕೆ ಬಂದು ತಲುಪಿದೆ,.
ಹೀಗಾಗಿ ನಾಳಿನ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕೆಂದು ಗಣ್ಯಾತಿ ಗಣ್ಯರು ತಂಡಕ್ಕೆ ಶುಭ ಕೋರಿದ್ದಾರೆ,

ಗೆಲುವು ನಮ್ಮದೇ..!

ಗುಜರಾತನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್ ಪಂದ್ಯ ನಡೆಯಲಿದೆ. ಹೀಗಾಗಿ ಗೆಲುವು ಭಾರತದ್ದೇ. ಅನುಮಾನವೇ ಬೇಡ. ನಾವು ವಿಜಯದತ್ತ ಮುನ್ನುಗ್ಗುತ್ತಿದ್ದೇವೆ.

ಅಭಯ ಪಾಟೀಲ. ಶಾಸಕರು

Leave a Reply

Your email address will not be published. Required fields are marked *

error: Content is protected !!