ಬೆಳಗಾವಿಯಲ್ಲಿ ನಿಲ್ಲದ ಖಾವು ಕಟ್ಟಾ ರಾಜಕೀಯ.
ಮುಂದುವರೆದ ಸಚಿವ ಜಾರಕಿಹೊಳಿ ಮತ್ತು ಶಾಸಕ ಅಭಯ ಪಾಟೀಲರ ನಡುವೆ ರಾಜಕೀಯ ಸಂಘರ್ಷ.
ತನಿಖೆಗೆ ಹೆದರಲ್ಲ, ಬಗ್ಗಲ್ಲ ಎಂದ ಶಾಸಕ ಅಭಯ. ತನಿಖೆ ನಡೆಯುತ್ತದೆ ಎಂದಿದ್ದ ಸಚಿವ ಸತೀಶ,
ವಿರೋಧಿಗಳ ಒತ್ತಡಕ್ಕೆ ಮಣಿಯದ ಬಿಜೆಪಿ, ತನಿಖಾ ತಂಡದ ಮುಂದೆಯೇ ಧಿಕ್ಕಾರ ಎಂದ ಕಾಂಗ್ರೆಸ್ಸಿಗರು.
ಖಾವುಕಟ್ಟಾ ವಿವಾದಕ್ಕೆ ಜಾತಿ ಬಣ್ಣ
ಬೆಳಗಾವಿ
ಊರಿಗೆ ಬಂದವಳು ನೀರಿಗೆ ಬರಲೇಬೇಕು ಎನ್ನುವ ರೂಢಿ ಮಾತು ಗ್ರಾಮೀಣ ಪ್ರದೇಶದಲ್ಲಿದೆ. ಆದರೆ ಬೆಳಗಾವಿ ಬಂದವಳು ಗೋವಾವೇಸ್ ನ ಖಾವು ಕಟ್ಟಾಗೆ ಬರಲೇಬೇಕು ಎನ್ನುವ ಮಾತು ಚಾಲ್ತಿಯಲ್ಲಿದೆ.
ಇದು ಯಾವುದೇ ರೀತಿಯ ಉತ್ಪ್ರೇಕ್ಷೆಯ ಮಾತಲ್ಲ. ಗಡಿನಾಡ ಬೆಳಗಾವಿಯ ಗೋವಾವೇಸ್ ವೃತ್ತದ ಬಳಿಯಿರುವ ಖಾವುಕಟ್ಟಾ ಅಂದರೆ ತಿನಿಸು ಕಟ್ಟಾಗೆ ಹೋಗಿ ಬಂದವರು ಹೇಳುವ ಮಾತು.

ಆದರೆ ಅಂತಹ ಪ್ರಸಿದ್ಧ ತಿನಿಸು ಕಟ್ಟಾಗೆ ಕೆಲವರ ವಕ್ರದೃಷ್ಟಿ ಬಿದ್ದಿದೆ. ಆ ನಿಟ್ಟಿನಲ್ಲಿ ಅಲ್ಲಿನ ಜನರ ನೆಮ್ಮದಿ ಹಾಳು ಮಾಡುವ ಪ್ರಯತ್ನ ಕೂಡ ನಡೆದಿದೆ. ಇದೆಲ್ಲದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎನ್ನುವುದು ಸುಳ್ಳಲ್ಲ.
ಆದರೆ ಇಂತಹ ಕಲುಷಿತ ರಾಜಕೀಯದ ಹಿನ್ನೆಲೆಯಲ್ಲಿ ಅಲ್ಲಿರುವ ಮಳಿಗೆಯನ್ನೇ ನಂಬಿ ಜೀವನ ಸಾಗಿಸುತ್ತಿರುವವರಲ್ಲಿ ಕೆಲ ವಿಧವೆಯರು ಸಂಬಂಧಿಸಿದವರಿಗೆ ಹಿಡಿಶಾಪ ಹಾಕುವ ಪರಿಸ್ಥಿತಿ ಬಂದೊದಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬಹುತೇಕ ಅಭಿವೃದ್ಧಿ ಕಾರ್ಯಗಳಿಗೆ ಗ್ರಹಣ ಹಿಡಿದಂತಾಗಿದೆ. ಚಾಲ್ತಿಯಲ್ಲಿರುವ ಕಾಮಗಾರಿಗಳು ಸ್ಥಗಿತ ಗೊಂಡಿವೆ. ಅವುಗಳಿಗೆ ಚಾಲನೆ ಯಾವಾಗ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಅದು ಬಿಡಿ .ಒಂದು ಸರ್ಕಾರ ಹೋಗಿ ಮತ್ತೊಂದು ಸರ್ಕಾರ ಬಂದಾಗ ಇದೆಲ್ಲ ಸಹಜ ಅಂದುಕೊಳ್ಳಬಹುದು.

ಆದರೆ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಇದ್ಯಾವುದು ಸಹಜ ಅಲ್ಲ. ಉದ್ದೇಶ ಪೂರ್ವಕವಾಗಿ ಮಾಡಲಾಗುತ್ತಿದೆ ಎನ್ನುವುದು ಸ್ಪಷ್ಟ.
ಸತೀಶ್ ಜಾರಕಿಹೊಳಿ ಜಿಲ್ಲಾ ಮಂತ್ರಿ ಆದ ತಕ್ಷಣ ಮಹಾನಗರ ಪಾಲಿಕೆಯಲ್ಲಿ ನಡೆದ ಪ್ರಥಮ ಸಾರ್ವಜನಿಕರ ಸಭೆಯಲ್ಲಿ ಕೇಳಿ ಬಂದ ದೂರಿನ ಹಿನ್ನೆಲೆಯಲ್ಲಿ ಖಾವು ಕಟ್ಟಾ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದರು
ಲೋಕೊಪಯೋಗಿ ಸಚಿವರೂ ಆಗಿರುವ ಸಚಿವ ಜಾರಕಿಹೊಳಿ ಅಧೀನದಲ್ಲಿಯೇ ಈ ತಿನಿಸು ಕಟ್ಟಾ ಸಹ ಬರುತ್ತದೆ.
ಹೀಗಾಗಿ ಹೊರಗಿನವರು ತನಿಖೆಗೆ ಅಡ್ಡಿಯಾಗುವ ಪ್ರಮೇಯವೇ ಇಲ್ಲಿ ಉದ್ಭವಿಸಲ್ಲ. ಈ ನಿಟ್ಟಿನಲ್ಲಿ ಸಚಿವರು ತನಿಖೆ ನಡೆಸಿ ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಬಹುದಿತ್ತು.
.ತನಿಖೆ ಅಂಸಾಗ ಅಧಿಕಾರಿಗಳು ಎಲ್ಲ ಮಗ್ಗುಲಗಳಲ್ಲಿ ವಿಚಾರಣೆ ಮಾಡಿ ವರದಿ ಕೊಡಬೇಕಾಗುತ್ತದೆ. ಹೀಗಾಗಿ ಸಮಯ ಕೂಡ ಬೇಕಾಗಬಹುದು ಎನ್ನಬಹುದು.

ಎಲ್ಲಕ್ಕಿಂತ ಮುಖ್ಯವಾಗಿ ಈ ತಿನಿಸುಕಟ್ಟಾಗೆ ಕಳೆದ ಎರಡು ದಿನಗಳ ಹಿಂದ ಬಂದ ಲೋಕೋಪಯೋಗಿ ಬಿ ಇಲಾಖೆ ಯ ಅಧಿಕಾರಿಗಳ ತನಿಖಾ ತಂಡ ಮೊದಲನೆಯದ್ದು ಏನಲ್ಲವಂತೆ. ಇಂತಹ ಮೂರು ತನಿಖಾ ತಂಡಗಳು ವಿಚಾರಣೆ ಮಾಡಿಕೊಂಡು ಹೋಗಿವೆ ಎನ್ನುವ ಮಾತಿದೆ.ಆದರೆ ಅವರ ವರದಿಗಳು ಏನಾದವು? ಅಥವಾ ಎಲ್ಲವೂ ಓಕೆ ಆಗಿದ್ದರಿಂದ ನಾಲ್ಕನೆಯ ತನಿಖಾ ತಂಡ ಲೋಪ ಹುಡುಕಾಟ ನಡೆಸಲು ಬಂದಿತೇ ಎನ್ನುವ ಪ್ರಶ್ನೆ ಸಹಜವಾಗಿ ಕೇಳಿ ಬರಲಾರಂಭಿಸಿದೆ.
ಕಳೆದ ಎರಡು ದಿನಗಳ ಹಿಂದೆ ಮತ್ತೊಂದು ತನಿಖಾ ತಂಡ ಬಂದಿದೆ. ಅದಕ್ಕೆ ಬಿಜೆಪಿಗರು ಯಾರೂ ಅಡ್ಡಿಪಡಿಸಿಲ್ಲ. ಅಂಗೆಇಯಲ್ಲಿದ್ದವರು ತನಿಖಾ ತಂಡ ಕೇಳಿದ ಪ್ರಶ್ನೆಗೆ ಉತ್ತರ ಕೊಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿಗೆ ಬಂದು ಗಲಾಟೆ ಮಾಡಿಸುವ ಅವಶ್ಯಕತೆ ಏರಿತ್ತು ಎನ್ನುವುದು ಬಿಜೆಪಿಗರ ಪ್ರಶ್ನೆಯಾಗಿದೆ.
ಇಲ್ಲಿ ಒಂದು ವೇಳೆ ನಿಯಮ ಮೀರಿ ಮಮಳಿಗೆಗಳನ್ನು ಕೊಡಲಾಗಿದ್ದರೆ ಅಙತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಅದಕ್ಕೆ ಯಾರೂ ಅಡ್ಡಿ ಮಾಡಲ್ಲ.ಆದರೆ ಅಧಿಕಾರಿಗಳ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಂದು ಬೀದಿ ರಂಪಾಟ ಮಾಡುವ ಅವಶ್ಯಕತೆ ಏರಿತ್ತು ಎನ್ನುವುದು ಕೆಲವರ ಪ್ರಶ್ನೆಯಾಗಿದೆ.
ಇದೇ ತಿನಿಸು ಕಟ್ಟಾ ವಿರೋಧವಾಗಿ ಯಾರು ಏನೇ ಮಾತನಾಡಿದರೂ ಅದಕ್ಕೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ತನಿಖೆ ನಡೆಸಿದ ಅಧಿಕಾರಿಗಳು ವರದಿ ನೀಡಲಿ. ಅದರ ಮೇಲೆ ನಾವು ಮಾತನಾಡುತ್ತೇವೆ ಎಂದು ಶಾಸಕ ಅಭಯ ಪಾಟೀಲ ಹೇಳುತ್ತಾರೆ.