
ಎಲ್ಲರ ಚಿತ್ತ ಪಾಲಿಕೆ ಸಭೆಯತ್ತ..!
ಬೆಳಗಾವಿ. ನಾಳೆ ದಿ. 29 ರಂದು ನಡೆಯಲಿರುವ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯತ್ತ ಬೆಳಗಾವಿಗರ ಚಿತ್ತ ನೆಟ್ಟಿದೆ. ನಾಳೆ ನಡೆಯುವ ಸಭೆಯಲ್ಲಿ ಯಾವ ವಿಷಯ ರಂಗೇರಬಹುದು ಎನ್ನುವ ಕುತೂಹಲ ಎಲ್ಲರಲ್ಲಿದೆ. ಈ ಹಿಂದೆ ನಡೆದ ವಿಶೇಷ ಸಭೆಯಲ್ಲಿನ ವಿಷಯವೂ ಸೇರಿದಂತೆ ಪೊಲೀಸ್ ಆಯುಕ್ತರ ಕಚೇರಿಗೆ ಹೋಗಿದ್ದ ಸಂದರ್ಭದಲ್ಲಿ ಮೇಯರ್ ಗೆ ಆದ ಅವಮಾನ, ಚಿಕಿತ್ಸೆ ಪಡೆಯುತ್ತಿದ್ದ ನಗರಸೇವಕ ಅಭಿಜಿತ್ ಜವಳಕರ ಅವರನ್ನು ಒತ್ತಾಯ ಪೂರ್ವಕವಾಗಿ ಬಂಧಿಸಿದ್ದ ಪೊಲೀಸ್ ಕ್ರಮದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ…