ಹಿಂಡಲಗಾ ಜೈಲಿನತ್ತ ಬಿಜೆಪಿ ನಗರಸೇವಕರ ದೌಡು. ಒಂದೇ ದಿನದಲ್ಲಿ ಜಾಮೀನು ಮಂಜೂರು. ಬಂಧನ ಸಮಯದಲ್ಲಿ ಫೊನ್ ಕಸಿದುಕೊಂಡಿದ್ದ ಪೊಲೀಸರು ಯಾರಿಗೂ ಕಾಲ್ ಮಾಡಲು ಅವಕಾಶ ಕೊಡದ ಖಾಕಿ.ಅಷ್ಟೊಂದು ತರಾತುರಿ ಬಂಧನದ ಹಿನ್ನೆಲೆಯಾದರೂ ಏನು? ಆಸ್ಪತ್ರೆ ಬಿಲ್ ತುಂಬದಿದ್ದರೂ ಡಿಸ್ಚಾ.ರ್ಜ ಮಾಡಿದ್ದು ಏಕೆ?
ಬೆಳಗಾವಿ
ಕಳದ ದಿನ ಟಿಳಕವಾಡಿ ಪೊಲಿಸರಿಂದ ಬಂಧನಕ್ಕೊಳಗಾಗಿದ್ದ ನಗರಸೇವಕ ಅಭಿಜಿತ್ ಜವಳಕರ ಅವರಿಗೆ ಇಲ್ಲಿನ ಜೆಎಂಎಫ್ಸಿ 4 ನೇ ಕೋರ್ಟ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.,
ಭಾಗ್ಯನಗರ 8 ನೇ ಕ್ರಾಸ್ನಲ್ಲಿ ರಮೇಶ ಪಾಟೀಲರೊಂದಿಗೆ ಕಳೆದ ಎರಡು ದಿನಗಳ ಹಿಂದೆ ಟಾವರ್ ವಿಷಯಕ್ಕೆ ಸಂಬಂಧಿಸಿದಂತೆ ವಾರವಿವಾದ ನಡೆದಿತ್ತು, ಅದು ವಿಕೋಪಕ್ಕೆ ಹೋಗಿ ದೂರು ಪ್ರತಿ ದೂರುಗಳು ದಾಖಲಾಗಿದ್ದವು.

ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಗರಸೇವಕ ಜವಳಕರ ಅವರನ್ನು ಟಿಳಕವಾಡಿ ಪೊಲೀಸ ಅಧಿಕಾರಿಗಳು ಬಂಧಿಸಿದ ಜೈಲಿಗಟ್ಟುವ ಕೆಲಸ ಮಾಡಿದ್ದರು,
ನ್ಯಾಯವಾದಿ ರವಿರಾಜ ಪಾಟೀಲರು ನಗರಸೇವಕರ ಪರ ವಾದ ಮಂಡಿಸಿದರು,
ಜೈಲಿನತ್ತ ನಗರಸೇವಕರ ದಂಡು
ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ ಅವರಿಗೆ ಜಾಮೀನು ಸಿಕ್ಕಿತು ಎಂದು ಗೊತ್ತಾದ ಕೂಡಲೇ ನಗರಸೇವಕರು ಮತ್ತು ಬಿಜೆಪಿ ಕಾರ್ಯಕರ್ತರು ಹಿಂಡಲಗಾ ಜೈಲಿನತ್ತ ಧಾವಿಸುದರು.

ಜೈಲಿನಿಂದಲೇ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಇವರೆಲ್ಲರೂ ಅಲ್ಗಿಗೆ ತೆರಳಿದ್ದರು.