Headlines

ಬೆಳಗಾವಿ ಪೊಲೀಸರ ಸುಳ್ಳಿಗೆ ಇದು ಸಾಕ್ಷಿ ..!

ಖಾಸಗಿ ಆಸ್ಪತ್ರೆ ಬಯಲು ಮಾಡಿದ ಟಿಳಕವಾಡಿ ಪೊಲೀಸರ ಸುಳ್ಳು. ?

ಪೊಲೀಸರ ಕ್ರಮಕ್ಕೆ ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿದ ಆಸ್ಪತ್ರೆ ಮುಖ್ಯಸ್ಥರಿಂದ ಪತ್ರ.

ಟಿಳಕವಾಡಿ ಸಿಪಿಐ ಮೇಲೆ ಕ್ರಮವಾಗದಿದ್ದರೆ ಅಧಿವೇಶನದಲ್ಕೇ ಚರ್ಚೆ ಎಂದ ಶಾಸಕ ಅಭಯ ಪಾಟೀಲ.

ಒತ್ತಾಯಪೂರ್ವಕವಾಗೆ ಚಿಕಿತ್ಸೆ ಪಡೆಯುತ್ತಿದ್ದ ನಗರಸೇವಕರನ್ನು ಕರೆದುಕೊಂಡು ಹೋಗುವ ಸಿಸಿಟಿವಿ ದೃಶ್ಯಾವಳಿ ಲಭ್ಯ ?

ಸಿಪಿಐ ಮಾತು ಕೇಳಿ ಇಕ್ಕಟ್ಟಿನಲ್ಲಿ ಸಿಕ್ಕಾಕಿಕೊಂಡರಾ ಪೊಲೀಸ್ ಆಯುಕ್ತರು.?

ಬೆಳಗಾವಿ.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ನೌಕರಿ ಮಾಡುವುದೇ ಕಷ್ಟ ಎನ್ನುವ ಪರಿಸ್ಥಿತಿ ಬಂದೊದಗಿದೆ.

ಇಲ್ಲಿ ಯಾರ ಮಾತು ಕೇಳಬೇಕು? ಬಿಡಬೇಕು ಎನ್ಯಾನುವ ಗೊಂದಲ ಅಧಿಕಾರಿಗಳಲ್ಲಿದೆ

ಯಾರದೊ ಒಬ್ಬರ ಮಾತು ಕೇಳಿ ಮುನ್ನಡೆದರೆ ಇನ್ನೊಬ್ಬರು ಅರೋಪ ಮಾಡ್ತಾರೆ. ಇವರ ಮಾತು ಕೇಳಿದರೆ ‘ಅವರು’ ಮಾತಾಡ್ತಾರೆ. ಇವೆರಡೂ ಬೇಡ ಅಂದು ಕಾನೂನು ಪ್ರಕಾರ ಮಾಡಹೊರಟರೆ ನಾಳೆನೇ ಕುರ್ಚಿ ಖಾಲಿ ಮಾಡಬೇಕಾಗುತ್ತದೆ. ಅಂತಹ ಇಕ್ಕಟ್ಟಿನ ಸ್ಥಿತಿಯಲ್ಲಿ ಬೆಳಗಾವಿ ಜಿಲ್ಲೆಯ ಕೆಲ ಅಧಿಕಾರಿಗಳು ಅದರಲ್ಲೂ ಪೊಲೀಸರು ಇದ್ದಾರೆ. ಇದು ವಾಸ್ತವ.

ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ ನಂಬರ 42 ರ ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ‌ ಬಂಧನ, ಜಾಮೀನು ನಂತರ ನಡೆದ ಬೆಳವಣಿಗೆಗಳು ಹಲವು ಅಚ್ಚರಿಗೆ ಕಾರಣವಾಗಿವೆ.

ಇಲ್ಲಿ ಜವಳಕರ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯವರು ದಿ.‌27 ರಂದು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರಿಗೆ ಕೊಟ್ಟ ಪತ್ರವನ್ನು ಗಮನಿಸಿದರೆ ಟಿಳಕವಾಡಿ ಪೊಲೀಸರದ್ದೇ ತಪ್ಪು ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಜವಳಕರ ಬಂಧನ ಪ್ರಕರಣದಲ್ಲಿ ಟಿಳಕವಾಡಿ ಪೊಲೀಸರು ನಡೆದುಕೊಂಡ ರೀತಿ ಹಲವು ಅನುಮಾನಕ್ಕೆ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹೀಗಾಗಿ ಬೆಳಗಾವಿ ಟಿಳಕವಾಡಿ ಪೊಲೀಸರು ಹಸೀ ಸುಳ್ಳು ಹೇಳುವುದನ್ನು ಬಿಟ್ಟು ಬೇರೇನು ಮಾಡುತ್ತಿಲ್ಲ ಎನ್ನುವ ಮಾತು ಈ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ ?

ಈಗ ಬೆಳಗಾವಿ ಪೊಲೀಸ್ ಟಿಳಕವಾಡಿ ಪೊಲೀಸರ ಒಂದು ಹಸೀ ಸುಳ್ಳು ಇಡೀ ಇಲಾಖೆಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿತಾ?. ಇಲ್ಲಿ ಪೊಲೀಸ್ ಆಯುಕ್ತರೂ ಸಹ ಆ ಸುಳ್ಳನ್ನೇ ಸತ್ಯ ಎಂದು ನಂಬಿ ಸಿಪಿಐ ಸೇರಿದಂತೆ ಮತ್ತಿಬ್ಬರ ಮೇಲೆ ಕ್ರಮ ಜರುಗಿಸದಿದ್ದರೆ ಅಧಿವೇಶನದಲ್ಲಿ ಇದನ್ನೇ ದೊಡ್ಡ ಅಸ್ತ್ರವನ್ನಾಗಿಸಿಕೊಳ್ಳಲು ಬಿಜಿಪಿ ಎಲ್ಲ ಸಿದ್ಧತೆ ಮಾಡಿಕೊಂಡಿದೆ.

ಅದಕ್ಜೆ ಸಾಕ್ಷೀಕರಿಸಲು ಬೇಕಾದಂತಹ ಸಿಸಿಟಿವಿ ಎಲ್ಲವನ್ನು ಶಾಸಕ ಅಭಯ ಪಾಟೀಲರು ರೆಡಿ ಮಾಡಿಕೊಂಡಿದ್ದಾರೆಂದು ಗೊತ್ತಾಗಿದೆ. ಇಲ್ಲಿ ಆಸ್ಪತ್ರೆಯವರು ಕೊಟ್ಟ ಲಿಖಿತ ಪತ್ರವನ್ನು ಆಧರಿಸಿ ಸಿಪಿಐ ಸೇರಿದಂತೆ ಇನ್ನೂ ಇಬ್ಬರು ಪೊಲೀಸರ ಮೇಲೆ ಕ್ರಮ ತೆಗೆದು ಕೊಳ್ಳದಿದ್ದರೆ ಅಧಿವೇಶನದಲ್ಲಿಯೇ ತಕ್ಕ ಉತ್ತರ ನೀಡುವುದಾಗಿ ಶಾಸಕರು ಸ್ಪಷ್ಟಪಡಿಸಿದ್ದಾರೆ.

ವಿಚಾರಣೆ ಮಾಡ್ತೆವಿ ಅಂದ್ರು ಆಯುಕ್ತರು

ಇದೆಲ್ಲದರ ಮಧ್ಯೆ ಒಟ್ಟಾರೆ ಪ್ರಕರಣದ ಬಗ್ಗೆ ವಿಚಾರಣೆ ನಡೆಸುವುದಾಗಿ ಪೊಲೀಸ್ ಆಯುಕ್ತ ಸಿದ್ರಾಮಪ್ಪ ಹೇಳಿದ್ದಾರೆ.
ಆಸ್ಪತ್ರೆ ಯವರು ಕೊಟ್ಟ ಪತ್ರದ ಬಗ್ಗೆ ಎಸಿಪಿ ವಿಚಾರಣೆ ಮಾಡ್ತಾರೆ. ಜೊತೆಗೆ ಆಸ್ಪತ್ರೆಯವರು ನೀಡಿದ ಡಿಸ್ಚಾರ್ಜ ಸಮರಿ ನಮ್ಮ ಬಳಿ ಇದೆ. ಬಿಲ್ ತುಂಬಿದ್ದು, ಬಿಟ್ಟಿದ್ದು ನಮಗೆ ಗೊತ್ತಿಲ್ಲ ಎಂದು ಅವರು ಹೇಳಿದರು.

ಗಮನಿಸಬೇಕಾದ ಸಂಗತಿ ಎಂದರೆ, ಅಧೀನ‌ ಅಧಿಕಾರಿಗಳು ಹೇಳಿದ್ದೆಲ್ಲವೂ ಸತ್ಯ ಎಂದು ನಂಬಿ ಅದನ್ನೇ ಎಲ್ಲರ ಸಮ್ಮುಖದಲ್ಲಿ ಪ್ರಸ್ತಾಪಿಸಿದ ಪೊಲೀಸ್ ಆಯುಕ್ತರು ಈಗ ಮುಜುಗುರಪಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ

ಇಲ್ಲಿ ಮುಖ್ಯವಾದ ಸಂಗತಿ ಎಂದರೆ, ಟಿಳಕವಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಬಲವಾದ ಹೊಡೆತ ತಿಂದ ನಗರಸೇವಕ ಅಭಿಜಿತ್ ಜವಳಕರ ಚಿಕಿತ್ಸೆ ಪಡೆಯುತ್ತಿದ್ದರು. ಅಂತಹ ಸಂದರ್ಭದಲ್ಲಿ ಆಸ್ಪತ್ರೆಗೆ ನುಗ್ಗಿದ ಸಿಪಿಐ‌, ಮತ್ತಿಬ್ಬರು ಪೊಲೀಸರು ಅವರ ಕೊಠಡಿಗೆ ಹೋಗಿ ಮಾತನಾಡಿಸಿದಂತೆ ಮಾಡಿದರು. ಅಷ್ಟೇ ಅಲ್ಲ ಅದನ್ನು ವಿಡಿಯೋ‌ ಶೂಟ್ ಸಹ ಮಾಡತೊಡಗಿದರು ಎನ್ನಲಾಗಿದೆ.

ಇದೆಲ್ಲಕ್ಕಿಂತ ಮುಖ್ಯವಾಗಿ ಸಿಪಿಐ ಇದ್ದ ಸಂದರ್ಭದಲ್ಲಿ ಯೇ ವೈದ್ಯರು ಚಿಕಿತ್ಸೆಗೆ ಬಂದಿದ್ದರು. ಆಗ ಜವಳಕರ ಅವರು ನನಗೆ ಇನ್ನೂ ಭುಜಕ್ಕೆ, ಬೆನ್ನಿಗೆ, ಮತ್ತು‌ ತಲೆಗೆ ನೋವಾಗ್ತಿದೆ ಎಂದು ಹೇಳಿದರು. ಹೀಗಾಗಿ ಇನ್ನೂ ರೆಸ್ಟ ಬೇಕು ಎಂದರು.

ಆದರೆ ಆ ವೈದ್ಯರ ಬೆನ್ನಟ್ಟಿ ಹೋದ ಪೊಲೀಸರು ಅವರಿಂದ ಡಿಸ್ಚಾರ್ಜ ಸಮರಿ ಕಸಿದುಕೊಂಡು ಬವಳಕರ ಅವರನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋದರು ಎಂದು ಹೇಳಲಾಗುತ್ತಿದೆ..ಇದನ್ನು ಅಲ್ಲಿದ್ದ ಇನ್ನುಳಿದ ರೋಗಿಗಳು ವಿಡಿಯೋ ಮಾಡಿಕೊಂಡಿದ್ದು ಅದೂ ಸಹ ಬಿಜೆಪಿಯವರ ಕೈಗೆ ಸಿಕ್ಕಿದೆ ಎಂದು ಗೊತ್ತಾಗಿದೆ

ಈಗ‌ ಆಸ್ಪತ್ರೆಯ ಚೇರಮನ್ನರು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರಿಗೆ ಟಿಳಕವಾಡಿ ಪೊಲೀಸರು‌ ನಡೆದುಕೊಂಡ ರೀತಿ ಬಗ್ಗೆ ಖಾರವಾಗಿ ಲಿಖಿತ ಪತ್ರವನ್ನು ಬರೆದಿದ್ದಾರೆ. ಈಗ ಅದು ವಿವಾದದ ಕೇಂದ್ರ ಬಿಂದುವಾಗಿದೆ. ಪೊಲೀಸ್ ಆಯುಕ್ತರು ಆ ಪತ್ರದ ಬಗ್ಗೆಯೂ ವಿಚಾರಣೆ ಮಾಡಬೇಕಾದ‌ ಪರಿಸ್ಥಿತಿ ಬಂದೊದಗಿದೆ.

Leave a Reply

Your email address will not be published. Required fields are marked *

error: Content is protected !!