ಬೆಳಗಾವಿ ಬಗ್ಗೆ
ಗಡಿನಾಡ ಬೆಳಗಾವಿಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಹೇಗಿದ್ದೀರಾ ಸರ್? ಎಂದು ಕೇಳಲೇ ಬಾರದು.
ಏಕೆಂದರೆ ಅವರಿಗೆ ಈಗ ಕೆರೆಸಿಕೊಳ್ಳಲು ಸಹ ಪುರುಸೊತ್ತಿಲ್ಲ. ಅಷ್ಡು ಗಡಿಬಿಡಿ. ಅಕ್ಷರಶಃ ಅವರು ಈ ಸರ್ಕಾರಿ ಕೆಲಸವನ್ನು ದೇವರ ಕೆಲಸ ಎಂದೇ ಭಾವಿಸಿ ಮುನ್ನಡೆಯುತ್ತಿದ್ದಾರೆ.

ಮತ್ತೊಂದು ಸಂಗತಿ ಅಂದರೆ, ದೇವರ ಕೆಲಸ ಇದ್ದರೆ ಒಂದರ್ಧ ತಾಸು ರೆಸ್ಟ್ ಮಾಡಿದರೆ ದೇವರು ಸಿಟ್ಡಿಗೇಳಲ್ಲ ಅಂದುಕೊಳ್ಳಬಹುದು. ಆದರೆ ಸರ್ಕಾರಿ ದೇವರು ಮಾತ್ರ ಈಗ ಕೆಲಸಕ್ಕೆ ವಿಶ್ರಾಂತಿಯನ್ನೇ ನೀಡುತ್ತಿಲ್ಲ
ಬೆಳಗಾವಿಯಲ್ಲಿ ಇದೇ ಡಿಸೆಂಬರ 4 ರಿಂದ ಹತ್ತು ದಿನಗಳ ಕಾಲ ಸುವರ್ಣ ವಿಧಾಬಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯಲಿದೆ. ಇಂತಹ ಸಂದರ್ಭದಲ್ಲಿ ಇಡೀ ಸರ್ಕಾರವೇ ಬೆಳಗಾವಿಯಲ್ಕಿರುತ್ತದೆ. ಮಂತ್ರಿಗಳು ಅಷ್ಟೇ ಅಲ್ಲ ಸರ್ಕಾರದ ಎಲ್ಲ ಸ್ಥರದ ಅಧಿಕಾರಿಗಳು ಇರುತ್ತಾರೆ. ಅವರಿಗೆಯಾವುದೇ ರೀತಿಯ ಕಿರಿಕಿರಿ ಆಗದ ಹಾಗೆ ನೋಡಿಕೊಳ್ಳುವುದರ ಜೊತೆಗೆ ‘ಕೇಳಿದ್ದೆಲ್ಲವನ್ನು’ ಪೂರೈಸುವ ಹೊಣೆ ಕೂಡ ಬೆಳಗಾವಿ ಅಧಿಕಾರಿಗಳ ಮೇಲಿರುತ್ತದೆ.

ಅದೆಲ್ಲ ಬಿಡಿ. ಇದರ ಹೊರತಾಗಿ ಬೆಳಗಾವಿಯನ್ನು ಅಂದಗೊಳಿದುವ ಮತ್ತು ಅಚ್ಚುಕಟ್ಟು ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಇಲ್ಲಿನ ಅಧಿಕಾರಿಗಳು ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ.
ಜಿಲ್ಲಾಧಿಕಾರಿ ನಿತೇಶ ಪಾಟೀಲರ ಮೇಲುಸ್ತುವಾರಿಯಲ್ಲಿ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಮತ್ತಿತರರು ಎಲ್ಲ ರೀತಿಯ ಪೂರ್ವ ಸಿದ್ಧತೆಗಳನ್ನು ಮುಗಿಸಿದ್ದಾರೆ,

ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರೊಬ್ಬರಿ ಸುಮಾರು 250 ಕ್ಕೂ ಹೆಚ್ಚು ಬ್ಲ್ಯಾಕ್ ಸ್ಪಾಟಗಳಿವೆ, ಅವುಗಳನ್ನು ಕ್ಲೀನ್ ಮಾಡುವ ಕೆಲಸ ನಡೆದಿದೆ
ಕಳೆದ ಹಲವು ದಿನಗಳಿಂದ ನಿತ್ಯ ಸ್ವಚ್ಚತೆಗೆ ಸಂಬಂಧಿಸಿದಂತೆ ಬೆಳಿಗ್ಗೆ ಸಭೆ ನಡೆಸಲಾಗುತ್ತಿದೆ, ಅಷ್ಟೇ ಅಲ್ಲ ಖುದ್ದು ಸ್ಥಳಕ್ಕೆ ಭೆಟ್ಟಿ ನೀಡುವ ಕೆಲಸವನ್ನು ಆಯುಕ್ತರು ನಡೆಸಿದ್ದಾರೆ.

ಇದರ ಜೊತೆಗೆ ಬೆಳಗಾವಿ ನಗರದ ನಿಯಮ ಉಲ್ಲಂಘಿಸಿ ಹಾಕಲಾಗಿದ್ದ ಹೋಲ್ಡಿಂಗ್ಗಳನ್ನು ತೆರವು ಮಾಡಿಸಲಾಗುತ್ತಿದೆ, ಅಷ್ಟೇ ಅಲ್ಲ ರಸ್ತೆಯ ಮಧ್ಯದಲ್ಲಿರುವ ವಿಭಜಕಗಳಿಗೆ ಬಣ್ಣ ಬಳಿಯುವ ಕೆಲಸವೂ ನಡೆದಿದೆ. ತೆಗ್ಗು ಬಿದ್ದ ರಸ್ತೆಗಳನ್ನು ದುರಸ್ತಿಗೊಳಿಸುವ ಕೆಲಸವೂ ಯುದ್ಧೋಪಾದಿಯಲ್ಲಿ ನಡೆದಿದೆ.
ಗಮನಿಸಬೇಕಾದ ಸಂಗತಿ ಎಂದರೆ, ಬೆಳಗಾವಿ ಮಹಾನಗರ ಪಾಲಿಕೆಯ ಇನ್ನಿತರ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ. ಉಪ ಆಯುಕ್ತ (ಆಡಳಿತ) ಉದಯಕುಮಾರ ತಳವಾರ ಸೇರಿದಂತೆ ಮತ್ತಿತರರು ರಾತ್ರಿ ಹಗಲು ಎನ್ನದೇ ಶ್ರಮಿಸುತ್ತಿದ್ದಾರೆ,

ಸಧ್ಯ ಏನಾಗಿದೆ ಎಂದರೆ, ಪಾಲಿಕೆ ಅಧಿಕಾರಿಗಳು ಅಧಿವೇಶನದ ಸಿದ್ಧತೆಗಳ ಜೊತೆಗೆ ಕಚೇರಿ ಆಡಳಿತಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುವ ಕೆಲಸ ಕೂಡ ಮಾಡಬೇಕಾಗಿದೆ, ಈ ಹಿನ್ನೆಲೆಯಲ್ಲಿ ಸಮಯ ಮೀರಿ ಅವರು ಕೆಲಸ ನಡೆಸಿದ್ದಾರೆ,
ಶೌಚಾಲಯ ದುರಸ್ತಿ…!
ವಿಶೇಷವಾಗಿ ಈ ಬಾರಿ ಅಧಿವೇಶನ ಬಂದೋಬಸ್ತಿಗೆ ಬಂದವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವ ಕೆಲಸವನ್ನು ಪಾಲಿಕೆ ತೆಗೆದುಕೊಂಡಿದೆ.
ಅಲ್ಲಲ್ಲಿ ಇರುವ ಸಾರ್ವಜನಿಕ ಶೌಚಾಲಯವನ್ನು ಕ್ಲೀನ್ ಇಡುವುದಲ್ಲದೇ ಯಾವುದೇ ರೀತಿಯ ಕಿರಿಕಿರಿ ಆಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. ಇದರ ಜೊತೆಗೆ ಕ\ಮುಖ್ಯವಾಗಿ ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಆಯುಕ್ತ ಅಶೋಕ ದುಡಗುಂಟಿ ತಿಳಿಸಿದ್ದಾರೆ,