ಬೆಳಗಾವಿ.
ಗಡಿನಾಡ ಬೆಳಗಾವಿಯಲ್ಲಿ ತನ್ನದೇ ಆದ ಛಾಪು ಮೂಡಿಸಿ ಎಲ್ಲರಿಂದಲೂ ಭೇಷ್ ಎನಿಸಿಕೊಂಡ ಮಾರ್ಕೆಟ್ ಎಸಿಪಿ ನಾರಾಯಣ ಬರಮನಿ ಅವರು ಈಗ ಧಾರವಾಡ ಹೆಚ್ಚುವರಿ ಎಸ್ಪಿ.!

ಅಂದರೆ ಅವರಿಗೆ ರಾಜ್ಯ ಸರ್ಕಾರ ಪದೋನ್ನತಿ ನೀಡಿ ಧಾರವಾಡಕ್ಕೆ ವರ್ಗಾವಣೆ ಮಾಡಿದೆ.
ಬೆಳಗಾವಿಯಲ್ಲಿ ಎಲ್ಲೇ ಕ್ರಿಟಿಕಲ್ ಸಮಸ್ಯೆ ಬಂದರೆ ಅದರ ಪರಿಹಾರಕ್ಕಾಗಿ ಬರಮನಿ ಅವರು ಬರಲೇಬೇಕು ಎನ್ನುವ ಹಾಗಾಗಿತ್ತು.ತಮ್ಮವ್ಯಾಪ್ತಿಗೆ ಅದು ಬರದಿದ್ದರೂ ಎಲ್ಕವನ್ನೂ ಮೈಮೇಲೆ ಎಳೆದುಕೊಂಡು ಮುನ್ನುಗ್ಗುವ ಸ್ವಭಾವವನ್ನು ಅವರು ಬೆಳೆಸಿಕೊಂಡಿದ್ದರು..

ಕನ್ನಡ, ಮರಾಠಿ ವಿಷಯ ಇರಲಿ, ಅಥವಾ ಜಾತಿ ಸಂಘರ್ಷ ಏನೇ ಇದ್ದರೂ ಅಲ್ಲಿ ಇವರು ಎಂಟ್ರಿ ಆದರೆ ಎಲ್ಲವೂ ಕೂಲ್ ಕೂಲ್.!
ಇದರರ್ಥ ಅವರು ಎಲ್ಲವನ್ನು ಕಾನೂನು ಬಿಟ್ಟು ಮಾಡ್ತಾರೆ ಅಲ್ಲ. ಎಲ್ಲವನ್ನು ಕಾನೂನು ಚೌಕಟ್ಟಿನಲ್ಲಿ ತರುವುದಲ್ಲದೇ ಪುಂಡರಿಗೆ ತಮ್ಮಬಿರುಸು ಮಾತಿನ ಮೂಲಕ ಚಾಟಿ ಏಟು ಕೊಡುವ ಕೆಲಸವನ್ನು ಬರಮನಿ ಮಾಡುತ್ತಿದ್ದರು.
ಇಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ನಾರಾಯಣ ಬರಮನಿ ಅವರು ಮಾಧ್ಯಮ ಸ್ನೇಹಿ ಅಧಿಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.
ಆದರೆ ಪೊಲೀಸಿಂಗನ್ನು ಎಲ್ಲಿಯೂ ಬಿಟ್ಟು ಕೊಡುತ್ತಿರಲಿಲ್ಲ. ಈಗ ಅವರು ಧಾರವಾಡ ಹೆಚ್ವುವರಿ ಎಸ್ಪಿ ಆಗಿದ್ದಾರೆ.ಅವರಿಗೆ ಇನ್ನೂ ಹೆಚ್ಚಿನ ಬಡ್ತಿಗಳು ದೊರಕಲಿ ಎನ್ನುವುದೇ ನಮ್ಮ ಆಶಯ.
ಇನ್ನುಳಿದಂತೆ ಮಾಧ್ಯಮದವರಿಗೆ ಆತ್ಮೀಯರಾದ ಮಹಾಂತೇಶ್ವರ ಜಿದ್ದಿ ಮತ್ತು ರಾಮಗೊಂಡನಹಟ್ಟಿ ಅವರಗೂ ಸರ್ಕಾರ ಬಡ್ತಿ ನೀಡಿದೆ. ಅವರುಗೂ ಅಭಿನಂದನೆಗಳು.