ವಿಧಾನಸಭೆ.
ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಅಭಿಜಿತ್ ಜವಳಕರ ಬಂಧನ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ ಟಿಳಕವಾಡಿ ಸಿಪಿಐ ಅವರನ್ನು ಸಸ್ಪೆಂಡ್ ಮಾಡಬೇಕೆಂದು ಶಾಸಕ ಅಭಯ ಪಾಟೀಲ ಒತ್ತಾಯಿಸಿದರು.

ಸದನದಲ್ಲಿಂದು ಗಮನ ಸೆಳೆಯುವ ಸೂಚನೆ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಶಾಸಕ ಅಭಯ ಪಾಟೀಲ ಮಾಡಿದರು.
ಟಾವರ್ ಅಳವಡಿಸುವ ಸಂಬಂಧ ನಡೆದ ಗಲಾಟೆಯಲ್ಲಿ ಗಾಯಗೊಂಡ ನಗರಸೇವಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಟಿಳಕವಾಡಿ ಸಿಪಿಐ ಪರಶುರಾಮ ಪೂಜಾರಿ ಮತ್ತಿಬ್ಬರು ಪೊಲೀಸರು ಆಸ್ಪತ್ರೆಯಲ್ಲಿ ಒತ್ತಾಯಪೂರ್ವಕವಾಗಿ ಡಿಸ್ಚಾರ್ಜ ಸಮರಿ ತೆಗೆದುಕೊಂಡು ಹೋಗಿ ಅರೆಸ್ಟ್ ಮಾಡಿದ್ದಾರೆ. ಇದು ಕಾನೂನು ಬಾಹಿರ. ಅಷ್ಟೇ ಅಲ್ಲ ಪೊಲೀಸ್ ಆಯುಕ್ತರೂ ಸಹ ಆಸ್ಪತ್ರೆ ವೈದ್ಯರನ್ನು ಕರೆಯಿಸಿ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಈ ಪ್ರಕರಣದಲ್ಲಿ ಸಿಪಿಐ ಸೇರಿದಂತೆ ಇಬ್ಬರನ್ನು ತಕ್ಷಣ ಅಮಾನತ್ ಮಾಡಬೇಕೆಂದು ಶಾಸಕರು ಸಭಾಧ್ಯಕ್ಷರನ್ನು ಒತ್ತಾಯಿಸಿದರು.

ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಿದ ಕಾಂಗ್ರೆಸ್ ಶಾಸಕ ಆಸೀಫ್ ಶೇಠರು ಪೊಲೀಸರ ಕ್ರಮವನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡಿದರು.
ಇದೂ ಅಲ್ಲದೇ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ವಿರುದ್ಧ ದಾಖಲಾದ ಪ್ರಕರಣದ ಬಗ್ಗೆ ಚರ್ಚೆ ನಡೆಯಿತು.
ಕೊನೆಗೆ ಈ ಎರಡೂ ವಿಷಯಗಳ ಬಗ್ಗೆ ನಾಳೆ ದಿ.7 ರಂದು ಗೃಹ ಮಂತ್ರಿ ಗಳು ಉತ್ತರ ನೀಡುತ್ತಾರೆಂದು ಸಭಾಧ್ಯಕ್ಷರು ತಿಳಿಸಿದರು.