ಸಭಾಧ್ಯಕ್ಷ ಸ್ಥಾನಕ್ಕೆ ಜಾತಿ ಬಣ್ಣ ಬಳಿದ ಕಾಂಗ್ರೆಸ್ ಶಾಸಕ ಜಮೀರ್ . ಸಿಡಿದೆದ್ದ ಬಿಜೆಪಿ. ಸೋಮವಾರ ಬೆಳಿಗ್ಗೆ 10 30 ಕ್ಕೆ ಬಿಜೆಪಿ ಶಾಸಕಾಂಗ ಸಭೆ
ಬೆಳಗಾವಿ.
ಕಾಂಗ್ರೆಸ್ ನ ಜಮೀರ ಅಹ್ಮದ ವಿರುದ್ಧ ನಾಳೆ ಸೋಮವಾರ ಸದನದಲ್ಲಿ ಭಾರೀ ಹೋರಾಟ ಮಾಡುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಈ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 10.30ಕ್ಕೆ ಸೋಮವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.ಇತ್ತೀಚೆಗೆ ಜಮೀರ್ ಅಹ್ಮದರು,ಮುಸ್ಲೀಂರನ್ನು ವಿರೋಧಿಸುತ್ತ ಬಂದಿದ್ದ ಬಿಜೆಪಿಯವರು. ಈಗ ಅದೇ ಮುಸ್ಲೀಂರಿಗೆ (ಸಭಾಧ್ಯಕ್ಷರಿಗೆ) ನಮಸ್ಕಾರ ಮಾಡುವ ಹಾಗೆ ಮಾಡಲಾಗಿದೆ ಎಂದು ಹೇಳಿದ್ದರು.

ಈ ಮೂಲಕ ಸಭಾಧ್ಯಕ್ಷ ಸ್ಥಾನಕ್ಕೆ ಜಾತಿ ಬಣ್ಣ ಕೊಡುವ ಕೆಲಸವನ್ನು ಜಮೀರ್ ಮಾಡಿದ್ದರು. ಈಗ ಅದೇ ವಿಷಯ ನಾಳೆ ಸದನದಲ್ಲಿ ಪ್ರತಿಧ್ವನಿಸಲಿದೆ