Headlines

ಮಾಧ್ಯಮಗಳೇ ವಿರೋಧ ಪಕ್ಷಗಳು..!

ಬೆಳಗಾವಿಯಲ್ಲಿ ಮಾಧ್ಯಮ ನಿಲುವಿನ‌ ಬಗ್ಗೆ ಮೆಚ್ಚುಗೆ. ಅನ್ಯಾಯದ ವಿರುದ್ಧ ಸಿಡಿದ ಮಾಧ್ಯಮಗಳು. ಮುಚ್ವಿಹೋಗುವ ಪ್ರಕರಣಗಳು ಬೆಳಕಿಗೆ..ಸರ್ಕಾರ ಮತ್ತು ಅಧಿಕಾರಿಗಳನ್ನು ಎಚ್ಚರಿಸಲು ಮಾಧ್ಯಮಗಳೇ ಬೇಕು. ಪೊಲೀಸರಿಗೆ ಮಾಧ್ಯಮಗಳೇ ಟಾರ್ಗೆಟ್. ನೋಟೀಸ್ ಕೊಟ್ಟು ಹೆದರಿಸುವ ಕೆಲಸ.

ಬೆಳಗಾವಿ‌ ಗಡಿನಾಡ ಬೆಳಗಾವಿಯ ಮಣ್ಣಿನ ಗುಣವೇ ಅಂತಹುದು.

ಕನ್ನಡ ನಾಡು ನುಡಿ ವಿಷಯದಲ್ಲಿ ಹೋರಾಟಗಾರರ ಮತ್ತು ಅನ್ಯಾಯ ಎಂದು ಕಂಡು ಬಂದಾಗ ಮಾಧ್ಯಮಗಳು ತಾಳಿದ ನಿಲುವುಗಳಿಗೆ ಭೇಷ್ ಎನ್ನಲೇಬೇಕು. .

ಯಾವುದಕ್ಕೂ ‘ರಾಜೀ ಎನ್ನುವ ಮಾತಿಲ್ಲದೇ ಮುನ್ಬುಗ್ಗುತ್ತವೆ

ಇಲ್ಲಿ ವಿರೋಧ ಪಕ್ಕಕ್ಕಿಂತಲೂ ಹೆಚ್ಚು ಮಾಧ್ಯಮಗಳು ತಮ್ಮ‌ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿವೆ ಎಂದರೆ ತಪ್ಪಾಗಲಾರದು.

ಕೆಲವೊಂದು ಸಂದರ್ಭಗಳಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು Don’t care ಎಂದ ಪ್ರಕರಣಗಳನ್ನು ಮಾಧ್ಯಮ care ಮಾಡುವ ಹಾಗೆ ಮಾಡಿವೆ. ಅಂದರೆ ಅವರನ್ನು ಎಚ್ಚರಿಸುವ ಕೆಲಸ ಮಾಡಿವೆ

ಇಲ್ಲಿ ಸ್ಪಷ್ಟವಾಗಿ ಹೇಳಬೇಕೆಂದರೆ ವಿರೋಧ ಪಕ್ಷಗಳು ಕೆಲವೊಂದು ಸಂದರ್ಭಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು.‌

ಆದರೆ ಬೆಳಗಾವಿ ಮಾಧ್ಯಮಗಳು ಎಂದಿಗೂ ರಾಜಿಯಾದ ಉದಾಹರಣೆಯಿಲ್ಲ. ಇಂತಹ ಸಂದರ್ಭದಲ್ಲಿ ಸಣ್ಣವರು, ದೊಡ್ಡವರು ಎನ್ನುವ ತಾರತಮ್ಯವನ್ನು ಸಹ ಮಾಡಿಲ್ಲ.

ಗಮನಿಸಬೇಕಾದ ಸಂಗತಿ ಎಂದರೆ, ಕೆಲವೊಮ್ಮೆ ನಿಷ್ಠುರವಾಗಿ ವರದಿ‌ ಮಾಡಿದ ಮಾಧ್ಯಮಗಳನ್ನು ಹೆದರಿಸುವ ಕೆಲಸವೂ ನಡೆದಿದೆ‌. ಆದರೆ ಮಾಧ್ಯಮಗಳು ಅಂತಹ ಗೊಡ್ಡು ಬೆದರಿಕೆಗಳಿಗೆ ಬಗ್ಗಿಲ್ಲ. ಬಗ್ಗೋದು ಇಲ್ಲ ಎನ್ನುವುದು ಸ್ಪಷ್ಟ.

ಸಿಂಪಲ್ ಆಗಿ ಒಂದೆರಡು ಘಟನೆಗಳನ್ನು ಇಲ್ಲಿ ಉಲ್ಲೇಖಿಸಬಹುದು.

ಅಂಗವಿಕಲನ ಮೇಲೆ ಹಲ್ಲೆ

ಉದ್ಯಮಬಾಗ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ಅಂಗವಿಕಲನ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದರು ಇದರ ಬಗ್ಗೆ ಪೊಲೀಸ್ ಇಲಾಖೆ ಸಿರಿಯಸ್ ಇರಲಿಲ್ಲ. ಅಂಗವಿಕಲನದ್ದೆ ತಪ್ಪು ಎನ್ನುವ ರೀತಿಯಲ್ಲಿ ಬಿಂಬಿಸತೊಡಗಿತ್ತು. ಆದರೆ ಮಾಧ್ಯಮಗಳ‌ ನಿಷ್ಠುರ ವರದಿ ಇಲಾಖೆಗೆ ಬಿಸಿ ಮುಟ್ಟಿಸಿತು. ನಂತರ ತಪ್ಪಿತಸ್ಥ ಎಂದು ಕಂಡು ಬಂದವರ ಮೇಲೆ ಇಲಾಖೆ ವಿಚಾರಣೆಗೆ ಆದೇಶ ಮಾಡಲಾಯಿತು. ಇಲ್ಲಿ ಮಾಧ್ಯಮಗಳು ಮೌನವಾಗಿದ್ದರೆ ಪ್ರಕರಣಕ್ಕೆ ಎಳ್ಖು ನೀರು ಬಿಟ್ಟಂತಾಗುತ್ತಿತ್ತು.

ವಿವಸ್ತ್ರ ಪ್ರಕರಣ..!

ಇನ್ನು ಇಡೀ ದೇಶವ್ಯಾಪಿ ಗಮನ ಸೆಳೆದ ಬೆಳಗಾವಿ ತಾಲುಕಿನ ಹೊಸ ವಂಟಮೂರಿ ಗ್ರಾಮದ ಮಹಿಳೆಯ ವಿವಸ್ತ್ರ ಪ್ರಕರಣದಲ್ಲಿ ಮಾಧ್ಯಮಗಳು ತಮ್ಮ‌ಜವಾಬ್ದಾರಿಯನ್ಬು ಯಶಸ್ವಿಯಾಗಿ ನಿಭಾಯಿಸಿವೆ.

ಇಲ್ಲಿ‌‌ ಮಾಧ್ಯಮಗಳು ನಿಷ್ಠುರವಾಗಿ ಬರೆಯದಿದ್ದರೆ ಮತ್ತು ಹೈಕೋರ್ಟಸಿರೀಯಸ್ ಆಗಿ ತೆಗೆದುಕೊಳ್ಳದಿದ್ದರೆ ಈ ಸಂಗತಿ ಅಲ್ಲೇ ಕ್ಲೋಜ್ ಆಗುತ್ತಿತ್ತು.

ಸಚಿವೆ ಆಡಿದ ಮಾತು..!

ಬೆಳಗಾವಿಯಲ್ಲಿ ಪತ್ರಕರ್ತರ ಸಂಘದ ಕಾರ್ಯಕ್ರಮ ದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಉಡುಪಿ ಜಿಲ್ಲೆಯ ಪತ್ರಕರ್ತರು ಪ್ರಭುದ್ಧರು ಎನ್ನುವ ಮೂಲಕ ಬೆಳಗಾವಿ ಪತ್ರಕರ್ತರಿಗೆ ಪರೋಕ್ಷ ಅವಮಾನ ಮಾಡಿದರು ಎನ್ಬುವ ಕೂಗು ಕೇಳಿ ಬಂದಿತು

ಪತ್ರಕರ್ತರು ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ಸೇರುವ ತೀರ್ಮಾನ ಮಾಡಿದ್ದರು. ಆದರೆ ಆ ಸಭೆಯನ್ನು ವಿಫಲಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ಸಚಿವೆಯ ಪಿಎ ಒಬ್ಬರು ಶತಾಯ ಗತಾಯ ಪ್ರಯತ್ನ ನಡೆಸಿದ್ದರು. ಆದರೆ ಪ್ರಯೋಜನವಾಗಲಿಲ್ಲ. ಸಭೆ ಕೂಡ ಆಯಿತು ಸಭೆಯಲ್ಲಿ ಸಚಿವರ ಆ ಮಾತಿಗಿಂತ ಅವರ ಹಿಂವಾಲಕರಿಂದಲೇ ಆಗುತ್ತಿರುವ ಮುಜುಗುರ ಬಗ್ಗೆ ಚರ್ಚೆ ನಡೆಯಿತು.‌ಕೊನೆಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ವಾತಾವರಣ ತಿಳಿಗೊಳಿಸಿದರು ಎನ್ನುವುದು ಬೇರೆ ಮಾತು. ಎಲ್ಲಕ್ಕಿಂತ ಮುಖ್ಯವಾಗಿ ಸಭೆಯಲ್ಲಿ ಯಾರು ಏನ್ ಮಾತಾಡ್ತಾರೆ ಎನ್ನುವದರ ಬಗ್ಗೆ ಲೈವ್ ಕೊಡುವ ಕೆಲಸ ಮಾಡಿದರು.

ಇಲ್ಲಿ‌ ಪತ್ರಕರ್ತರ ಜತೆ ಸಚಿವೆ ಹೆಬ್ಬಾಳಕರ ಕುಟುಂವದ ಸಂಬಂಧ ಚನ್ನಾಗಿಯೇ ಇತ್ತು. ಆದರೆ ಅವರ ಹಿಂದೆ ಮುಂದೆ ಪಿಎ ಎಂದು ಹೇಳಿಕೊಂಡು ತಿರುಗುವವರು ಈ ಸಂಬಂಧಕ್ಕೆ ಹುಳಿ ಹಿಂಡುವ ಕೆಲಸ ಮಾಡಿದರು ಎನ್ನುವುದು ಬೇರೆ ಮಾತು.

ಬಿಡಿ‌ ಇದೆಲ್ಲವನ್ನು ಹೇಳುವ ಸಂಗತಿ ಎಂದರೆ, ಯಾರು ಎಷ್ಟೇ ಪ್ರಯತ್ನಿಸಿದರೂ ಪತ್ರಕರ್ತರು ಒಗ್ಗಟ್ಟು ಬಿಟ್ಟು ಕೊಡಲಿಲ್ಲ ಎನ್ನುವುದು ಸ್ಪಷ್ಟ.

Leave a Reply

Your email address will not be published. Required fields are marked *

error: Content is protected !!