ಬೆಳಗಾವಿಯ ಕೊಲ್ಲಾಪುರ ಕ್ರಾಸ್ ಬಳಿ ನಡೆದ ಘಟನೆ.
ನಾಲ್ವರಿಂದ ಹಲ್ಲೆ. ನಡು ರಸ್ತೆಯಲ್ಲಿ ಅಡ್ಡಡ್ಡ ಬೀಳಿಸಿ ಬೂಟುಗಾಲಿನಿಂದ ಒದ್ದು ಹಲ್ಲೆ.
ರಕ್ತ ಸೋರಿದರೂ ಬಿಡದ ಹಲ್ಲೆಕೋರರು.
ಬೆಳಗಾವಿ. ಕ್ಷುಲ್ಲಕ ಕಾರಣಕ್ಕಾಗಿ ಹೊಟೇಲನಲ್ಲಿ ಕುಳಿತಿದ್ದ ವ್ಯಕ್ತಿಯನ್ಬು ನಾಲ್ವರ ಗುಂಪು ಮನಸೋ ಇಚ್ಛೆ ಥಳಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ನಗರದ ಕೊಲ್ಲಾಪುರ ವೃತ್ತದ ಬಳಿಯಿರುವ ಹೊಟೇಲ್ ನಲ್ಲಿ ಒಬ್ಬರು ಕುಳಿತಿದ್ದರು. ಈ ಸಂದರ್ಭದಲ್ಲಿ ಬಙದ ನಾಲ್ವರು ಅವನನ್ನು ಥಳಿಸಲು ಆರಂಭಿಸಿದರು. ಇದರಿಂದ ಗಲಿಬಿಲಿಗೊಂಡ ಹೊಟೇಲ್ ಸಿಬ್ಬಂದಿ ಗಲಾಟೆ ಮಾಡುವವರನ್ನು ಹೊರಗೆ ಕಳಿಸಿದರು.

ಆದರೆ ಹೊರಗೆ ಹೋದ ಮೇಲೂ ಕೂಡ ನಡು ರಸ್ತೆಯಲ್ಲಿ ನಾಲ್ವರೂ ಕೂಡಿ ನೆಲಕ್ಕೆ ಬೀಳಿಸಿ ಮುಖಕ್ಕೆ ಕಾಲಿನಿಂದ ಒದ್ದರು. ಈ ಸಂದರ್ಭದಲ್ಲಿ ಮುಖದಲ್ಲಿ ರಕ್ತ ಸೋರುತ್ತಿದ್ದರೂ ಕೂಡ ಅದನ್ನು ಲೆಕ್ಕಿಸದೇ ಮೈಮೇಲಿನ ಬಟ್ಟೆ ಹರಿದು ಕಪಾಳ ಮೋಕ್ಷ ಮಾಡಿದರು. ಅಷ್ಟರಲ್ಲಿ ಒಬ್ಬರು ಪೊಲೀಸರು ಬಂದಿದ್ದನ್ನು ಗಮನಿಸಿದ ಹಲ್ಲೆಕೋರರು ಅಲ್ಲಿಂದ ಓಡಿ ಹೋದರು.
ಹಲ್ಲೆಗೊಳಗಾದ ವ್ಯಕ್ತಿ ರಕ್ತ ಸೋರುತ್ತಿದ್ದರೂ ಲೆಕ್ಕಿಸದೇ ನೇರವಾಗಿ ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ಕೊಡಲು ಹೋದರು. ಆದರೆ ಈ ಘಟನೆಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ.