ಬೆಳಗಾವಿ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದ ಮತ್ತು ಅಧಿವೇಶನದಲ್ಲಿ ಕಳವಳಕ್ಕೊಳಗಾದ ಹೊಸ ವಂಟಮೂರಿ ಗ್ರಾಮದಲ್ಲಾದ ಮಹಿಳೆ ವಿವಸ್ತ್ರ ಪ್ರಕರಣದಲ್ಲಿ ಇದ್ದುದರಲ್ಲಿಯೇ ಉತ್ತಮ ಕೆಲಸ ಮಾಡಿದ ಪೊಲೀಸ್ ಸಿಬ್ಬಙದಿಗಳನ್ನು ಗೌರವಿಸುವ ಕೆಲಸ ಇಂದು ನಡೆಯಿತು.

ಸಂತ್ರಸ್ತ ಮಹಿಳೆಯನ್ನು ರಕ್ಷಿಸಿಸಿದ ಅಲ್ಲಿನ ನಾಗರೀಕರು ಹಾಗೂ ಪೊಲೀಸರಿಗೆ ಪೊಲೀಸ ಆಯುಕ್ತ.ಸಿದ್ದರಾಮಪ್ಪ, ಇಂದು ಕವಾಯತು ಮೈದಾನದಲ್ಲಿ ನಡೆದ ಪರೇಡ್ ನಲ್ಲಿ ಸನ್ಮಾನಿಸಿದರು.

ಈ ಘಟನೆ ನಡೆದಾಗ . ವಾಸಿಮ ಮಕಾನದಾರ ಹಾಗೂ . ಸಿದ್ದಪ್ಪ ಹೊಳೆಕರ್ ಅಧ್ಯಕ್ಷರು ಗ್ರಾಮ ಪಂಚಾಯತ್ ಹೊಸವಂಟಮುರಿ ಇವರು ಕೂಡಲೇ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದರು., ಜಹಾಂಗೀರ್ ತಹಶೀಲ್ದಾರ್ ರವರು ಪೊಲೀಸರು ಬರುವ ಮುಂಚೆ ಮಹಿಳೆಯನ್ನ ರಕ್ಷಣೆ ಮಾಡಲು ಪ್ರಯತ್ನಿಸಿದ್ದರಂತೆ.. ಇದರ ಜೊತೆಗೆ ಬೆಳಗಾವಿ ನಗರ ಕಂಟ್ರೋಲ್ ರೂಂ, ಸಿಬ್ಬಂದಿ ಮಂಜುನಾಥ್ ತೆಕ್ಕಕರ ತಕ್ಷಣ ಕಾಕತಿ ERSS ಗೆ ಕಾಲ್ ಮಾಡಿ ತಿಳಿಸಿದ್ದರು. ನಂತರ ಕೇವಲ 10 ನಿಮಿಷಕ್ಕೆ ಘಟನಾ ಸ್ಥಳಕ್ಕೆ ಧಾವಿಸಿದ ಕಾಕತಿ ಪೊಲೀಸ್ ಠಾಣೆ ಪಿಎಸಐ. ಮಂಜುನಾಥ ಹುಲಕುಂದ ಹಾಗೂ ಸಿಬ್ಬಂದಿಯವರಾದ, ಸುಭಾಷ್ ಬಿಲ್ , ವಿಠ್ಠಲ್ ಪಟ್ಟೇದ, ನಾರಾಯಣ ಚಿಪ್ಪಲಕಟ್ಟಿ ಹಾಗೂ ಬೆಳಗಾವಿ ಅಧಿವೇಶನದ ಬಂದೋಬಸ್ತ ಕರ್ತವ್ಯಕ್ಕೆ ಆಗಮಿಸಿದ್ದ, ಕೋಲಾರ ಜಿಲ್ಲೆಯ ಡಿಎಆರ್ ಘಟಕದ ಮುತ್ತಪ್ಪ ಕ್ವಾನಿ ಇವರು ಮಹಿಳೆಯನ್ನು ರಕ್ಷಿಸಿದರು ಎನ್ನುವ ಕಾರಣದಿಂದ ಅವರನ್ನು ಸನ್ಮಾನಿಸಲಾಯಿತು

ಇಲ್ಲಿ ವಾಸಿಮ ಮಕಾನದಾರ ಹಾಗೂ . ಸಿದ್ದಪ್ಪ ಹೊಳೆಕರ್, ಜಹಾಂಗೀರ್ ತಹಶೀಲ್ದಾರ ಇವರುಗಳಿಗೆ ಪೊಲೀಸ್ ಗ್ರೌಂಡ್ ನಲ್ಲಿ ತಲಾ 5000 ಸಾವಿರ ರೂಪಾಯಿ ಹಾಗೂ ಕಾಕತಿ ಠಾಣೆಯ ಪಿಎಸಐ . ಮಂಜುನಾಥ ಹುಲಕುಂದ ರವರಿಗೆ 5000 ರೂ. ಹಾಗೂ ಸಿಬ್ಬಂದಿಗಳಿಗೆ ತಲಾ 4000 ರೂ. ಬಹುಮಾನ ನೀಡಿ ಸನ್ಮಾನಿಸಿದರು.

ಇದರೊಂದಿಗೆ ಸಂತ್ರಸ್ತ ಮಹಿಳೆಯ ರಕ್ಷಣೆ ಮಾಡಲು ಪ್ರಯತ್ನಿಸಿದ ಜಹಾಂಗೀರ್ ಖಾಸಿಂಸಾಬ್ ತಹಶೀಲ್ದಾರ್ ಹೊಸವಂಟಮುರಿ ಗ್ರಾಮ ಇವರಿಗೆ ಉಚ್ಛ ನ್ಯಾಯಾಲಯ ಬೆಂಗಳೂರುರವರ ಪ್ರಶಂಸನೆ ಮಾಡಿರುವ ಆದೇಶದ ಪ್ರತಿಯನ್ನು ಸಹ ಪೊಲೀಸ್ ಆಯುಕ್ತರು ನೀಡಿದರು.