ಕುತೂಹಲ ಕೆರಳಿಸಿದ ಹೆಬ್ಬಾಳಕರ- ಬಿಎಸ್ ವೈ ಭೆಟ್ಟಿ?!
ಬೆಂಗಳೂರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಪುತ್ರ ಮೃನಾಲ್ ಮತ್ತು ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪ ಭೆಟ್ಟಿ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಇವರಿಬ್ಬರ ಭೆಟ್ಟಿಗೆ ರಾಜಕೀಯ ಕಾರಣ ಇತ್ತೊ ಇಲ್ಲವೊ ಎನ್ನುವುದು ಬೇರೆ ಮಾತು.
ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆ ಒಂದು ಪೊಟೊ ಬಿಜೆಪಿ ಮತ್ತು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗೆ ಎಡೆ ಮಾಡಿಕೊಡುತ್ತಿದೆ.

ಅಂದ ಹಾಗೆ ಇವರಿಬ್ಬರ ಭೆಟ್ಟಿ ಯಾವಾಗಿನದ್ದು ಎನ್ನುವುದು ಸ್ಪಷ್ಟವಾಗಿಲ್ಲ. ಬಹುಶಃ ದಾವಣಗೆರೆಯಲ್ಲಿ ಇತ್ತೀಚೆಗೆ ನಡೆದ ಸಮಾಜದ ಕಾರ್ಯಕ್ರಮ ದಲ್ಲಿ ಈ ಇಬ್ಬರೂ ಭೆಟ್ಟಿ ಆಗಿರಬಹುದು ಎನ್ನಲಾಗುತ್ತಿದೆ. ಆದರೆ ಪೊಟೊವನ್ಬು ಗಮನಿಸಿದರೆ ಎಲ್ಲಿಯೋ ಪ್ರತ್ಯೇಕವಾಗಿ ಭೆಟ್ಟಿ ಆದಂತೆ ಕಾಣುತ್ತಿದೆ. ಈ ಬಗ್ಗೆ ಸ್ಪಷ್ಟನೆಗಾಗಿ ಮೃನಾಲ್ ರನ್ಬು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಲಭ್ಯರಾಗಲಿಲ್ಲ