ಗಡಿಯಲ್ಲಿ ಸರ್ಕಾರಿ ಅಧಿಕಾರಿಗಳಿಂದಲೇ ಆದೇಶ ಉಲ್ಲಂಘನೆ.
ಐಜಿಪಿ, ಡಿಸಿ ಪದಾಧಿಕಾರಿಳಾಗಿರುವ ಬೆಳಗಾವಿ ಕ್ಲಬ್.
ಈ ಕ್ಲಬ್ ಹೋಲ್ಡಿಂಗ್ ದಲ್ಲಿ ಕನ್ನಡ ಹರೋಹರ. ಬರೆಯೋಕು ಬಾರದ ದಡ್ಡರು.
ಬೆಳಗಾವಿ. ಬೆಂಗಳೂರಿನಲ್ಲಿ ಕುಳಿತು ಮುಖ್ಯಮಂತ್ರಿ ಗಳೂ ಸೇರಿದಂತೆ ಇಡೀ ಮಂತ್ರಿ ಮಂಡಲ ಕನ್ನಡ ಕನ್ನಡ ಅಂತ ಬಾಯಿ ಬಾಯಿ ಬಡಕೊಂಡರೂ ಅದು ಗಡಿನಾಡ ಬೆಳಗಾವಿಯವರಿಗೆ ಏನೂ ಸಂಬಂಧವೇ ಬರಲ್ಲ.!
ಕನ್ನಡ ಫಲಕಕ್ಕೆ ಸಂಬಂಧಿಸಿದಂತೆ ರಾಜ್ಯದ ಕನ್ನಡ ಪರ ಸಂಘಟನೆಗಳು ಒಂದಾಗಿ ಅಭಿಯಾನ ಆರಂಭಿಸಿವೆ.

ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಅಳವಡಿಸಿದ ಕ್ಲಬ್ ನ ಫಲಕ
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪೊಲೀಸರ ಲಾಠಿ ರುಚಿಯನ್ನು ಲೆಕ್ಕಿಸದೇ ಹೋರಾಟವನ್ನು ಆರಂಭಿಸಿದ್ದಾರೆ. ಕೆಲ ಹೋರಾಗಾರರು ಜೈಲು ಕಂಬಿ ಸಹ ಎಣಿಸತೊಡಗಿದ್ದಾರೆ.
ಆದರೆ ಗಡಿನಾಡ ಬೆಳಗಾವಿಯಲ್ಲಿಯೇ ಹೋಲ್ಡಿಂಗ್ ಗಳಲ್ಲಿ ಶೇ. 60 ರಷ್ಟು ಕನ್ನಡವನ್ನು ಅನುಷ್ಠಾನ ತರಬೇಕಾಗಿದ್ದ ಅಧಿಕಾರಿಗಳೇ ಸಿಎಂ ಸಿದ್ಧರಾಮಯ್ಯನವರ ಸುಗ್ರೀವಾಜ್ಞೆಗೆ ಡೋಂಟಕೇರ್ ಎಂದಿದ್ದಾರೆ.

ಇಲ್ಲಿ ಯಾವುದೋ ಖಾಸಗಿ ಕಂಪನಿಯವರೊ ಅಥವಾ ಇನ್ಯಾವುದೊ ವ್ಯಾಪಾರಸ್ಥರು ಅದನ್ಬು ಉಲ್ಲಂಘಿಸಿದ್ದರೆ ಸ್ವಲ್ಪ ಮಟ್ಟಿಗೆ ರಿಯಾಯಿತಿ ಕೊಡಬಹುದು.

ಆಸರೆ ಭರಫೂರ್ ಸರ್ಕಾರಿ ಸಂಬಳ ಪಡೆಯುವ ಅಧಿಕಾರಿಗಳೇ ಈ ರೀತಿ ಕನ್ನಡ ಅನುಷ್ಠಾನ ದಲ್ಲಿ ಹಿಂದೇಟು ಹಾಕಿದರೆ ಗಡಿನಾಡ ಬೆಳಗಾವಿಯಲ್ಲಿ ಕನ್ನಡ ಮತ್ತು ಕನ್ನಡಿಗರ ಸ್ಥಿತಿ ಏನಾಗಬಹುದು?
ಸಿಂಪಲ್ ಆಗಿ ಹೇಳಬೇಕೆಂದರೆ, ಬೆಳಗಾವಿಯಲ್ಲಿ ಐಜಿಪಿ, ಡಿಸಿ, ಪೊಲೀಸ್ ಆಯುಕ್ತರೇ ಪದಾಧಿಕಾರಿಗಳಾಗಿರುವ ಬೆಳಗಾವಿ ಕ್ಲಬ್ ನಲ್ಲಿ ಕನ್ನಡ ಅನುಷ್ಠಾನ ಆಗುತ್ತಿಲ್ಲ.
ಬೆಳಗಾವಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಬೆಳಗಾವಿ ಕ್ಲಬ್ ನವರು ಹೊಸ ವರ್ಷಾಚರಣೆಯ ಹೋಲ್ಡಿಂಗ್ ಹಾಕಿದ್ದಾರೆ. ಅದರಲ್ಲಿ ಸರ್ಕಾರದ ಆದೇಶ ಪ್ರಕಾರ ಶೇ. ೬೦ ರಷ್ಟು ಕನ್ನಡ ಇರಲೇಬೇಕು. ಆದರೆ ಆ ಫಲಕವನ್ನು ನೋಡಿದರೆ ಸರ್ಕಾರಿ ಸಂಬಳ ಪಡೆಯುವ ಅಧಿಕಾರಿಗಳ ಕನ್ನಡ ಪ್ರೇಮ ಎಷ್ಟಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಇನ್ನೂ ಒಂದು ಗಮನಿಸಬೇಕಾದ ಸಂಗತಿ ಎಂದರೆ, ಆ ಫಲಕದಲ್ಲಿ ಕನ್ನಡ ಭಾಷೆಯ ಕಗ್ಗೊಲೆ ಕೂಡ ಆಗಿದೆ. ಅಲ್ಲಿ ಹೊಸ ಎಂದು ಬರೆಯಬೇಕಾಗಿದ್ದಲ್ಲಿ ‘ಹೋಸ ಎಂದು ಬರೆದು ಅಣಕಿಸಿದಂತೆ ಮಾಡಲಾಗಿದೆ.

ಕಳೆದ ದಿನವಷ್ಟೇ ಪಾಲಿಕೆಯವರು ಕನ್ನಡ ಅನುಷ್ಠಾನ ಗೊಳ್ಳದ ಫಲಕವನ್ಬು ಕಿತ್ತಾಕಿದ್ದರು. ಇದು ಕನ್ನಡಿಗರ ಮೆಚ್ಚುಗೆಗೂ ಪಾತ್ರವಾಗಿತ್ತು.