ಪಾಲಿಕೆ ಜೊತೆ ಸಂಘರ್ಷಕ್ಕೆ ಸರ್ಕಾರ ಸಿದ್ಧತೆ..?
ಆಸ್ತಿ ತೆರಿಗೆ ಪರಿಷ್ಕರಣೆ ವಿಷಯ ಮುಗೀತು. ಈಗ ಭಾಷಾ ವಿಷಯ ಮುಂದಿಟ್ಟು ಪಾಲಿಕೆಗೆ ನೋಟೀಸ್ ಕೊಡುವ ಚಿಂತನೆ? ಕನ್ನಡದಿಂದಲೇ ಕಲಾಪ ಆರಂಭಿಸಿದ್ದ ಮೇಯರ್. ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯನ್ನು ಇಕ್ಕಟ್ಟಿಗೆ ಸಿಲುಕಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ತೆರೆಮರೆ ಕಸರತ್ತು ನಡೆಸಿದೆಯೇ? ಸಧ್ಯ ನಡೆದಿರುವ ಬೆಳವಣಿಗೆಯನ್ನು ಗಮನಿಸಿದರೆ ಅಂತಹುದೊಂದು ಅನುಮಾನ ಬರತೊಡಗಿದೆ. ಕಳೆದ ದಿನ ಮಹಾನಗರ ಪಾಲಿಕೆ ಪರಿಷತ್ ಸಭೆಯಲ್ಲಿ ಮೇಯರ್ ಸೇರಿದಂತೆ ಬಹುತೇಕ ನಗರ ಸೇವಕರು ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆಗೆ…