Headlines

ಬೆಳಗಾವಿಯಲ್ಲಿ ನೈತಿಕ ಪೊಲೀಸಗಿರಿ.

ಬೆಳಗಾವಿ.
ಗಡಿನಾಡ ಬೆಳಗಾವಿಯಲ್ಲಿ ನೈತಿಕ ಪೊಲೀಸ್ ಗಿರಿ ಘಟನೆ ಇಂದು ನಡೆದಿದೆ.
ಯಮನಾಪುರದ ಅನ್ಯ ಕೋಮಿನ ಯುವಕ ಯುವತಿ ಒಂದೆಡೆ ಕುಳಿತಿದ್ದನ್ಬು ಪ್ರಶ್ನಿಸಿ ಕೆಲವರು ಆ ಜೋಡಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ಗೊತ್ತಾಗಿದೆ.
ಆದರೆ ಹಲ್ಲೆಗೊಳಗಾದವರು ಸಹೋದರ ಮತ್ತು ಸಹೋದರಿಯಾಗಿದ್ದರು ಎಂದು ಗೊತ್ತಾಗಿದೆ.
ಆ ಹುಡುಗ ಮತ್ತು ಹುಡುಗಿ ಹೆತ್ತವರದ್ದು ಲವ್ ಮ್ಯಾರೇಜ್. ಹೀಗಾಗಿ ಇಬ್ಬರಿಗೂ ಬೇರೆ ಬೇರೆ ಹೆಸರನ್ನು ಇಟ್ಟಿದ್ದರು.


ಇಲ್ಲಿ ಹುಡುಗಿ ಮುಖಕ್ಕೆ ಬಟ್ಟೆ ಕಟ್ಡಿಕೊಂಡು ಬಂದಿದ್ದರೆ , ಹುಡುಗ ಹಣೆಗೆ ತಿಲಕ ಹಚ್ಚಿಕೊಂಡಿದ್ದನು.
ಆದರೆ ಹಲ್ಲೆಕೋರರು ಇದನ್ನೇ ತಪ್ಪಾಗಿ ತಿಳಿದುಕೊಂಡು ‌ಬೆಲ್ಟ್, ರಾಡನಿಂದ ಹಲ್ಲೆ ಮಾಡಿದ್ದಾರೆಂದು ಹೇಳಲಾಗಿದೆ.
ಯಮನಾಪುರ ಬಳಿಯ ಗೊಂಡವಾಡ ಗ್ರಾಮದ ಇಬ್ಬರು ಯುವ ನಿಧಿ ಅರ್ಜಿ ತುಂಬಲು ಬೆಳಗಾವಿಗೆ ಬಂದಿದ್ದರು.
ಆದರೆ ಈ ಸಂದರ್ಭದಲ್ಲಿ ಸರ್ವರ್ ಸಮಸ್ಯೆಯಾಗಿದ್ದರಿಂದ ಅವರು ಕಿಲ್ಲಾ ಕೆರೆ ಪಕ್ಕದಲ್ಲಿರುವ ರಾಷ್ಟ್ರಧ್ವಜ ಕೆಳಗೆ ಪೊಟೊ ತೆಗೆದುಕೊಳ್ಳಲು ಬಂದಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಅನ್ಯ ಕೋಮಿನ 16 ಕ್ಕೂ ಹೆಚ್ಚಿದ್ದ ಜನರು ಆ ಯುವಕನನ್ನು ಥಳಿಸಿದ್ದಾರೆ. ನಮ್ಮ ಸಮಾಜದ ಹುಡುಗಿ ಜೊತೆ ಏಕೆ ಕುಳಿತಿದ್ದಿಯಾ ಎಂದು ಪ್ರಶ್ನೆ ಮಾಡಿ ಹಲ್ಲೆ ಮಾಡಿದ್ದಾರೆ.
ಇಲ್ಲಿ ಯುವಕನನ್ನು ಅಲ್ಲಿಯೇ ಥಳಿಸಿದ್ದಲ್ಲದೇ ಕೊಢಡಿಗೆ ಕರೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ಗೊತ್ತಾಗಿದೆ.
ನಂತರ ಆ ಯುವತಿ ನಮ್ಮ ಸಮಾಜಕ್ಕೆ ಸೇರಿದವಳಾ ಎಂದು‌ ತಪಾಸಣೆ ಮಾಡಲು ಹಲ್ಲೆಕೋರರು ಮುಂದಾದಾಗ ಅವರಿಬ್ಬರು ಸಹೋದರ ಮತ್ತು ಸಹೋದರಿ ಎಂದು ಗೊತ್ತಾಗಿದೆ.
ಈ ಹಲ್ಲೆ ವಿಷಯ ಮನೆಯವರಿಗೆ ಗೊತ್ತಾದ ಕೂಡಲೇ ಪೊಲೀಸರಿಗೆ ವಿಷಯ ತಲುಪಿದೆ‌ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳುವ ಕೆಲಸ ತಡರಾತ್ರಿವರೆಗೆ ನಡೆದಿತ್ತು

Leave a Reply

Your email address will not be published. Required fields are marked *

error: Content is protected !!