Headlines

ಸಂಭಾವಿತ ಶಾಸಕನಿಗೆ ಆವಾಜ್ ಹಾಕಿದ ಅಧಿಕಾರಿ..!

ರಾಯಭಾಗ ಶಾಸಕ ಐಹೊಳೆಗೆ ಗುಟುರು ಹಾಕಿದ ಅಧಿಕಾರಿ.

ಸಾಹೇಬ್ರೆ ಎಂದು ಮಾತನಾಡಿದ ಬಿಜೆಪಿ ಶಾಸಕರಿಗೆ ದರ್ಪ ತೋರಿದ ಗೋಕಾಕ ಅರಣ್ಯಾಧಿಕಾರಿ.

ಇಂತಹ ಅಧಿಕಾರಿ ಶಾಸಕ ಸವದಿ ಮತ್ತು ಅಭಯ ಪಾಟೀಲರಿಗೆ ಸಿಕ್ಕಿದ್ದರೆ…ಅಧಿಕಾರಿ ಉದ್ಧಟತನದ ಮಾತುಗಳು.ಶಾಸಕರಿಗೆ ತೋರಿದ ಅಗೌರವ.

ಅಧಿಕಾರಿ ದರ್ಪದ ಮಾತುಗಳ ಆಡಿಯೋ ವೈರಲ್.

ಬೆಳಗಾವಿ.

ಗೋಕಾಕದ ಅರಣ್ಯ ಇಲಾಖೆ ಅಧಿಕಾರಿ ಆ ರೀತಿಯ ದರ್ಪದ ಮಾತುಗಳನ್ನು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೋ ಅಥವಾ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲರಿಗೆ ಆಡಿದ್ದರೆ ಅದರ ಕಥೆನೇ ಬೇರೆ ಆಗ್ತಿತ್ತು.

ಆದರೆ ಸಂಭಾವಿತ ಶಾಸಕ ಎಂದು ಕರೆಯಲ್ಪಡುವ ರಾಯಭಾಗ ಶಾಸಕ ಧುರ್ಯೋಧನ ಐಹೊಳೆಯವರಿಗೆ ಗೋಕಾಕದ ಆ ಅರಣ್ಯ ಇಲಾಖೆ ಅಧಿಕಾರಿ ಆಡಿದ ಮಾತುಗಳು, ಬಳಸಿದ ಶಬ್ದಗಳು ಅಕ್ಷಮ್ಯ ಅಪರಾಧವೇ ಸರಿ. ಇದು ಶಾಸಕರಿಗೆ ಮಾಡಿದ ಅವಮಾನವೇ ಸರಿ ಎಂದರೆ ತಪ್ಪಾಗಲಾರದು

ಇಲ್ಲಿ ಶಾಸಕರು, ಅಧಿಕಾರಿಗೆ ಕರೆ ಮಾಡಿದ ಸಂದರ್ಭದಲ್ಲಿ ಸಾಹೇಬರೇ ಎಂದು ಉಲ್ಲೇಖಿಸಿ ತಮ್ಮ ಹೆಸರು ಹೇಳಿ ಮಾತನಾಡಿದ್ದಾರೆ.

ಆದರೆ ಅರಣ್ಯ ಇಲಾಖೆ ಅಧಿಕಾರಿ ದರ್ಪದ ಮಾತುಗಳು ಹೇಗಿದ್ದವು ಎನ್ನುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮೂರು ನಿಮಿಷ ಎರಡು ಸೆಕೆಂಡಿನ‌ ಆಡಿಯೋ ಸಾಕ್ಚಿ

ಅದನ್ನು ಒಂದ್ಸಲ ಕೇಳಿದರೆ ಸಾಕು ಅರಣ್ಯ ಇಲಾಖೆ ಅಧಿಕಾರಿ ದರ್ಪ ಎಷ್ಟಿದೆ ಎನ್ನುವುದು ಗೊತ್ತಾಗುತ್ತದೆ. ಅದಕ್ಕೆ ಹೇಳಿದ್ದು ಇಂತಹ ಅಧಿಕಾರಿ ಲಕ್ಷ್ಮಣ ಸವದಿ ಅಥವಾ ಅಭಯ ಪಾಟೀಲರ ಕೈಗೆ ಸಿಕ್ಕಿದ್ದರೆ ಇಷ್ಟೊತ್ತಿಗೆ ಅವರು ಮನೆ ದಾರಿ ಹಿಡಿಯುತ್ತಿದ್ದರು. ಅಥವಾ ಮತ್ತೇನಾಗ್ತಿತ್ತು ಎನ್ನುವುದು ಭಗವಂತನೇ ಬಲ್ಲ

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಶಾಸಕರು ಎಂದು ಗೊತ್ತಿದ್ದರೂ ಈ ರೀತಿ ಸೊಕ್ಕಿನಿಂದ ಮಾತಾಡುವ ಅರಣ್ಯ ಇಲಾಖೆ ಅಧಿಕಾರಿ ಇನ್ನು ಸಾರ್ವಜನಿಕರೊಂದಿಗೆ ಹೇಗೆ ಮಾತಾಡುತ್ತಿರಬಹುದು ಎನ್ನುವುದನ್ನು ಊಹಿಸಿಕೊಳ್ಳಲು ಆಗದು.

ಆದ್ದರಿಂದ ಪಕ್ಷ ಯಾವುದೇ ಇದ್ದರೆನು.ಮೊದಲು ಇಂತಹ ಅಧಿಕಾರಿಗಳನ್ನು ಮನೆಗಟ್ಟುವ ಕೆಲಸವನ್ಬು ಸರ್ಕಾರ ಮಾಡಬೇಕಿದೆ. ಇಲ್ಲವಾದರೆ ಇಂದು ಶಾಸಕರಿಗೆ ಆದಂತೆ ಮುಖ್ಯಮಂತ್ರಿ ಗಳಿಗೂ ಆದರೂ ಅಚ್ಚರಿಪಡಬೇಕಿಲ್ಲ.

ನಾನು ಶಾಸಕ ಐಹೊಳೆ..

ನಾನು ರಾಯಬಾಗ ಎಂಎಲ್‌ಎ ಮಾತನಾಡುತ್ತಿದ್ದೇನೆ. ರಾಯಬಾಗದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅರಣ್ಯ ಭವನ ಮಂಜೂರಾಗಿ, ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಈಗ ಸ್ಥಳೀಯ ಅಧಿಕಾರಿಗಳು ಅದನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ನೀವು ಸಮಸ್ಯೆ ಬಗೆಹರಿಸಿ ಕಾಮಗಾರಿ ಚಾಲೂ ಮಾಡಿಸಬೇಕು ಸಾಹೇಬರೆ’ ಎಂದು ಐಹೊಳೆಯವರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೇಳಿಕೊಂಡಿದ್ದಾರೆ

ಆದರೆ ಮೊಬೈಲ್‌ನಲ್ಲಿ ಇನ್ನೊಂದು ಕಡೆಯಿಂದ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿ, ‘ನೀವ್ ಯಾರು? ಶಾಸಕ ಎಂದು ನನಗೆ ಹೇಗೆ ಗೊತ್ತಾಗಬೇಕು’ ಎಂದು ಉದ್ಧಟತನದಿಂದಲೇ ಪ್ರಶ್ನೆ ಮಾಡಿದ್ದಾರೆ.

ಅದಕ್ಕೆ ಶಾಸಕ ಐಹೊಳೆಯವರು, . ‘ನಾನೇ ಶಾಸಕ ಮಾತನಾಡುತ್ತಿದ್ದೇನೆ, ನಿಮಗೇನು ಫೋಟೊ ಕಳಿಸಬೇಕೇ?’ ಎಂದು ಕೇಳಿದ್ದಾರೆ ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಫ್‌ಒ, ‘ಎಲ್ಲಿ ಕಟ್ಟುತ್ತಿದ್ದಾರೆ? ಅದರಿಂದ ಏನಾಗಬೇಕು ಈಗ? ಅದೇನು ನಮ್ಮಪ್ಪನ ಜಾಗ ಅಲ್ಲ. ಸರ್ಕಾರದಿಂದ ಮಂಜೂರಾಗಬೇಕು. ಅನಧಿಕೃತ ಇದ್ದ ಕಾರಣ ಬಂದ್‌ ಮಾಡಿದ್ದಾರೆ’ ಎನ್ನುತ್ತಾರೆ. ಇದಕ್ಕೆ ಕೋಪಗೊಂಡ ಶಾಸಕ, ‘ಏಯ್‌ ನೆಟ್ಟಗೆ ಮಾತಾಡ್ರಿ. ಯಾಕ್‌ ಏಕವಚನದಾಗ ಮಾತಾಡತಿ’ ಎಂದು ಪ್ರಶ್ನಿಸಿದ್ದಾರೆ.

ಅದಕ್ಕೆ ಇದಕ್ಕೆ ಅಧಿಕಾರಿ, ‘ನೀನು ಏಕವಚನದಲ್ಲಿ ಮಾತಾಡಿದರೆ ನಡೆಯೋದಿಲ್ಲ. ನೀನು ಎಂಎಲ್‌ಎ ಇದ್ದರೆ ನಿನಗೆ ಇರಬೇಕು. ನನಗೇನಲ್ಲ. ನಿಂದ ಗೊತ್ತಿದೆ ಹೋಗೋ ನನಗೆ. ನೀ ಯಾಂವ…’ ಎಂದು ಅಧಿಕಾರಿ ಏರುದನಿಯಲ್ಲಿ ರೇಗಿದ್ದಾರೆ. ‘ಏಯ್‌ ನಿನ್ನಾಪ್ಪನ ಹೆಂಗ್‌ ಮಾತಾಡತಿ’ ಎಂದು ಐಹೊಳೆ ಹೇಳುತ್ತಾರೆ.

‘ನೀ ಹಿಂಗ್‌ ಮಾತಾಡಿದರೆ ನನ್ನ ಹತ್ತಿರ ನಡೆಯುವುದಿಲ್ಲ. ನೀನೇನು ಮನವಿ ಬರೆದು ಕೊಟ್ಟಿದ್ದೀಯಾ ನನಗೆ? ಹೀಗೆ ಮಾತಾಡಿದರೆ ಸುಮ್ಮನೇ ಬಿಡುವುದಿಲ್ಲ. ಈಗಲೇ ನಿನ್ನ ಮೇಲೆ ಕಂಪ್ಲೆಂಟ್‌ ಕೊಡುತ್ತೇನೆ’ ಎಂದೂ ಅಧಿಕಾರಿ ರೇಗುತ್ತಾರೆ. ‘ನಾನು ಸಾಹೇಬರೆ ಎಂದೇ ಮಾತಾಡಿದ್ದೇನೆ. ನಾನೇನು ನಿಮ್ಮದು ಹೊಲ ಕಸಗೊಂಡಿಲ್ಲ’ ಎನ್ನುತ್ತಾರೆ ಶಾಸಕ. ‘ಹಿಂಗ್‌ ರಿಕ್ವೆಸ್ಟ್‌ ಮಾಡಿಕೊಳ್ಳಿ. ಈಗಲೇ ಕೆಲಸ ಮಾಡಿ ಕೊಡುತ್ತೇನೆ. ಯಾರನ್ನೂ ಎದುರು ಹಾಕಿಕೊಳ್ಳಬೇಡಿ’ ಎಂದೂ ಅಧಿಕಾರಿ ಶಾಸಕರಿಗೆಏರು ಧ್ವನಿಯಲ್ಲಿ ಹೇಳಿದ್ದು ಕಂಡು ಬರುತ್ತದೆ.

Leave a Reply

Your email address will not be published. Required fields are marked *

error: Content is protected !!