ಬೆಳಗಾವಿ ದಕ್ಷಿಣ ‘ರಾಮ’ಮಯ.!

ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ 80 ಸಾವಿರ ಕುಟುಂಬಕ್ಕೆ 5 ಲಕ್ಷ ಲಾಡು ವಿತರಣೆ.

ರಾಮಮಯ ಮಾಡುವ ನಿಟ್ಟಿನಲ್ಲಿ ಸಿದ್ಧತೆ. ಪ್ರತಿಯೊಬ್ಬರ ಕೈ ಮೇಲೆ ಶ್ರೀರಾಮನ ಟ್ಯಾಟೊ.

ರಾಮನ ಸೇವೆಗೆ ಮುಂದಾದ ಬಿಜೆಪಿ ನಗರಸೇವಕರು

ವಾರ್ಡ 43 ರ ನಗರ ಸೇವಕಿ ವಾಣಿ ಜೋಶಿ ಟಿಳಕವಾಡಿಯ ಹನುಮಾನ ಮಂದಿರ ಮತ್ತು ವಾರ್ಡ 24 ರ ನಗರಸೇವಕ ಗಿರೀಶ ಧೋಂಗಡಿ ಹಳೆಯ ಮಹಾತ್ಮಾ ಫುಲೆ ರೋಡದಲ್ಲಿರುವ ಸಂಕಟ ವಿಮೋಚಕ ಹನುಮಾನ ಮಂದಿರ ದಲ್ಲಿ ಸ್ವಚ್ಚತಾ ಅಭಿಯಾನ.

ರಾಮನ ಭಾವಚಿತ್ರ ಇರುವ ಧ್ವಜ ವಿತರಿಸಿದ ನಗರಸೇವಕಿ ವಾಣಿ ಜೋಶಿ.

ಬೆಳಗಾವಿ. ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಮತ್ತು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರವನ್ನು ರಾಮಮಯ ಮಾಡುವ ಎಲ್ಲ ಸಿದ್ಧತೆಗಳು ನಡೆದಿವೆ. ಶಾಸಕ ಅಭಯ ಪಾಟೀಲರ ನೇತೃತ್ವದಲ್ಲಿ ದಕ್ಷಿಣ ಕ್ಷೇತ್ರದ 85 ಸಾವಿರ ಕುಟುಂಬಗಳಿಗೆ ಮೋತಿಚೂರು ಲಾಡು ವಿತರಿಸುವ ಕೆಲಸ ಭರ್ಜರಿಯಾಗಿ ನಡೆದಿದೆ

ಬೆಳಗಾವಿಯ ಮಾಣಿಕಬಾಗದಲ್ಲಿ ಸುಮಾರು ನೂರಕ್ಕೂ ಹೆಚ್ಚು ರಾಮಸೇವಕರು ಲಾಡು ವಿತರಿಸಲು ಎಲ್ಲ‌ ಸಿದ್ಧತೆ ಕಾರ್ಯದಲ್ಲಿ ತೊಡಗಿದ್ದಾರೆ. ಬಹುಶಃ ರವಿವಾರದಿಂದಲೇ ಆಯಾ ವಾರ್ಡನ ನಗರಸೇವಕರ ಮೂಲಕ ಮನೆ ಮನೆಗೆ ಲಾಡು ವಿತರಿಸುವ ಕೆಲಸ ಮಾಡಲಾಗುತ್ತದೆ.

ಇದನ್ನು ಹೊರತುಪಡಿಸಿದರೆ ಬಸವಣ ಗಲ್ಲಿಯಲ್ಲಿ ರಾಮನ‌ ಇತಿಹಾಸ ಬಿಂಬಿಸುವ ನೂರಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಎಲ್ಲರ ಗಮನ‌ಸೆಳೆಯುತ್ತಿವೆ. ಬಹುಶಃ ಈ ರೀತಿ ಬೇರೆ ಎಲ್ಲೂ ಮಾಡಿಲ್ಲ. ದೇಶದಲ್ಲಿಯೇ ಮೊದಲ ಬಾರಿ ಇದಾಗಿದೆ ಎಂದು ಶಾಸಕ ಅಭಯ ಪಾಟೀಲರು ಹೇಳಿದರು.

ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ‌ ನಗರಸೇವಕರು ತಮ್ಮ ತಮ್ಮ‌ ವಾರ್ಡಗಳಲ್ಲಿ ಜನೇವರಿ 22 ರಂದು ದೀಪಾವಳಿ ಹಬ್ಬದ ರೂಪದಲ್ಲಿ ಆಚರಿಸುವ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆಂದರು.

ದೇವಸ್ಥಾನ ಸ್ವಚ್ಚತಾ ಅಭಿಯಾನ. ಧ್ವಜ ವಿತರಣೆ

ಬೆಳಗಾವಿ ವಾರ್ಡ ನಂಬರ 43 ರ ನಗರಸೇವಕಿ ಮತ್ತು‌ ನಗರ ಯೋಜನಾ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ವಿಲಾಸ ಜೋಶಿ ಅವರು ಟಿಳಕವಾಡಿಯ ಹನುಮಾನ ಮಂದಿರ ಸ್ವಚ್ಚತಾ ಅಭಿಯಾನ‌ ನಡೆಸಿದರು.

ಬೆಳಿಗ್ಗೆ 7 ರಿಂದ‌ ಈ ಅಭಿಯಾನಕ್ಕೆ ಚಾಲನೆ ನೀಡಿ ಖುದ್ದು ಸ್ವಚ್ಚತೆ ಯಲ್ಲಿ ತೊಡಗಿದರು. ಪ್ರತಿ ದಿನ‌ ವಾರ್ಡನಲ್ಲಿ ಬರುವ ಎಲ್ಲ‌ ದೇವಸ್ಥಾನದಲ್ಲಿ ಈ ಅಭಿಯಾನ ‌ನಡೆಯಲಿದೆ.

ಅಷ್ಟೇ ಅಲ್ಲ ಇಂದು ಹನುಮಾನ ಮಂದಿರದಿಂದ ವಾರ್ಡನ ಪ್ರತಿ ಮನೆ‌ಮನೆಗೂ ಶ್ರೀರಾಮನ ಭಾವಚಿತ್ರ ಇರುವ ಧ್ವಜ ವಿತರಿಸುವ ಕಾರ್ಯಕ್ಕೂ ವಾಣಿ ವಿಲಾಸ ಜೋಶಿ ಚಾಲನೆ ನೀಡಿದರು.

ವಾರ್ಡ ನಂಬರ 24 ರ ನಗರಸೇವಕ ಗಿರೀಶ ಧೋಂಗಡಿ ಸಹ ರಾಮ ಭಕ್ತರೊಂದಿಗೆ ಕೂಡಿಕೊಂಡು ದೇವಸ್ಥಾನ ಸ್ವಚ್ಚತಾ ಅಭಿಯಾನ. ನಡೆಸಿದರು.

ಹಳೆಯ ಮಹಾತ್ಮಾ ಫುಲೆ ರಸ್ತೆಯಲ್ಕಿರುವ ಸಂಕಟ ವಿಮೋಚಕ ಹನುಮಾನ ಮಂದಿರ ಸೇರಿದಂತೆ ಸುತ್ತಲಿನ ಪರಿಸರವನ್ನು ಸ್ವಚ್ಚಗೊಳಿಸಿದರು.

Leave a Reply

Your email address will not be published. Required fields are marked *

error: Content is protected !!