ಬೆಳಗಾವಿ.
ಮಹಾನಗರ ಪಾಲಿಕೆಗೆ ದಾನರೂಪವಾಗಿ ನೀಡಿರುವ ಜಾಗೆಯನ್ನು ಅತಿಕ್ರಮಣ ಮಾಡಿದವರ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕೆಂದು ಗಣಾಚಾರಿ ಗಲ್ಲಿಯ ನಿವಾಸಿಗಳು ಆಗ್ರಹಿಸಿದ್ದಾರೆ,

ಈ ಕುರಿತಂತೆ ಮೇಯರ್, ಆಯುಕ್ತರು ಮತ್ತು ಪಿಡಬ್ಲುಡಿ ಕಮಿಟಿ ಅಧ್ಯಕ್ಷರಿಗೆ ಮನವಿ ಪತ್ರವನ್ನು ನಿವಾಸಿಗಳು ಅರ್ಪಿಸಿದರು

ಗಣಾಚಾರಿ ಗಲ್ಲಿಯ ಬಕರಿ ಮಂಡಿಯಲ್ಲಿನ ಶ್ರೀಮತಿ, ಶ್ರೀಮತಿ ಶಂಕರ ಕಾಟಕರ ಇವರು ಸಮಾಜದ ಉಪಯೋಗಕ್ಕಾಗಿ 12 ಗುಂಟೆ ಜಾಗೆಯ ದುರುಪಯೋಗ ಆಗಬಾರದೆಂಬ ಉದ್ದೇಶದಿಂದ ಮಹಾನಗರ ಪಾಲಿಕೆಗೆ ದಾನದ ಸ್ವರೂಪದಲ್ಲಿ ನೀಡಿದ್ದರು.
ಆದರೆ ಕೆಲವು ವರ್ಷಗಳ ಹಿಂದೆ ಅಲ್ಲಿ ಹಿಂದೂ ಖಾಟಿಕ ಸಮಾಜದ ಕೆಲವರು ಸಾಮಾಜಿಕ ಕಾರ್ಯ ಮಾಡುವ ರೀತಿಯಲ್ಲಿ ಬಂದು ಆ ಜಾಗೆಯನ್ನು ಅತೀಕ್ರಮಣ ಮಾಡಿದ್ದಾರೆಂದು ದೂರಿನಲ್ಲಿ ವಿವರಿಸಲಾಗಿದೆ,
ಈಗ ನಗರಸೇವಕ ಶಂಕರಗೌಡಾ ಪಾಟೀಲರ ಮೂಲಕ ಅದೇ ಪರಿಸರದಲ್ಲಿ ಎಲ್ಲಾ ಸಮುದಾಯದ ಉಪಯೋಗಕ್ಕಾಗಿ ಸಮುದಾಯ ಭವನ ನಿರ್ಮಾಣಕ್ಕಾಗಿ ಸಿದ್ಧತೆ ನಡೆಸಲಾಗುತ್ತಿದೆ, ಅದರೆ ಅದಕ್ಕೆ ಅಡ್ಡಿ ಮಾಡುವ ಕೆಲಸವನ್ನು ಕೆಲವರು ನಡೆಸಿದ್ದಾರೆ,
ಆದ್ದರಿಂದ ಪಾಲಿಕೆ ವತಿಯಿಂದ ವಿಚಾರಣೆ ನಡೆಸಿ ಸಮುದಾಯ ಭವನ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಪತ್ರದಲ್ಲಿ ಕೇಳಿಕೊಳ್ಳಲಾಗಿದೆ, ಈ ಮನವಿ ಪತ್ರಕ್ಕೆ ಸುಮಾರು 21 ಜನ ಸಹಿ ಮಾಡಿದ್ದಾರೆ,