ಬೆಳಗಾವಿ.
ಸಹಕಾರಿ ಕ್ಷೇತ್ರ ಎಲ್ಲರಿಗೂ ಒಲಿಯುವುದಿಲ್ಲ. ಆದರೆ, ಕವಟಗಿಮಠರ ಮನೆತನ ಮೂರು ತಲೆಮಾರಿನಿಂದ ಸಹಕಾರಿ ಕ್ಷೇತ್ರದಲ್ಲಿ ಬೆಳೆದು ಬಂದಿರುವುದನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಅವರಿಗೆ ಉಜ್ವಲ ಭವಿಷ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು,
ಸವದತ್ತಿಯಲ್ಲಿ ಮಹಾಂತೇಶ ಕವಟಗಿಮಠ ಪೌಂಡೇಶನ್ ಉದ್ಘಾಟನೆ, ಮಹಾಂತೇಶ ಕವಟಗಿಮಠರ 58 ನೇ ಜನ್ಮದಿನಾಚರಣೆ ಮತ್ತು ಸದನದೊಳಗೆ, ಹೊರಗೆ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು,

ಮುಂಬೈ-ಕನರ್ಾಟಕ ಭಾಗದಲ್ಲಿ ಸಹಕಾರಿ ಕ್ಷೇತ್ರಕ್ಕೆ ಮುನ್ನುಡಿ ಬರೆದಿರುವ ಕವಟಗಿಮಠ ಮನೆತನದ ಕೊಡುಗೆ ಅಪಾರ. ತಂದೆಯವರ ಸಾಮಾಜಿಕ ಸೇವೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಮಹಾಂತೇಶ ಕವಟಗಿಮಠ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆಂದು ಅವರು ಹೇಳಿದರು. .

ಶಿಕ್ಷಣ, ಸಹಕಾರ ಮತ್ತು ರಾಜಕೀಯ ಕ್ಷೇತ್ರದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಸಮಾಜಮುಖಿ ಕೆಲಸ ಮಾಡುತ್ತಿರುವ ಕವಟಗಿಮಠರ ಮನೆತನದ ಕಾರ್ಯ ಪ್ರಶಂಸನೀಯ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು

.
ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೊಂದವರಿಗೆ ಸಹಾಯ ಹಸ್ತ ಚಾಚಬೇಕು ಎನ್ನುವ ಉದ್ದೇಶದಿಂದ ಅವರು ಈ ಫೌಂಡೇಶನ್ ಆರಂಭಿಸಿದ್ದಾರೆ. ಭವಿಷ್ಯದ ದಿನಗಳಲ್ಲಿ ಅದು ಬಲಿಷ್ಠವಾಗಿ ಬೆಳಯಲಿದೆ ಎಂದರು
ಯಲ್ಲಮ್ಮದೇವಿ ಆಶೀವರ್ಾದವಿದೆ..!
58 ನೇ ವರ್ಷಕ್ಕೆ ಕಾಲಿಡುತ್ತಿರುವ ಮಹಾಂತೇಶ ಕವಟಗಿಮಠರ ಮೇಲೆ ಸವದತ್ತಿ ಯಲ್ಲಮ್ಮದೇವಿ ಆಶೀವಾದವಿದೆ ಎಂದು ಕೆಎಲ್ಇ ಕಾಯರ್ಾಧ್ಯಕ್ಷ ಡಾ, ಪ್ರಭಾಕರ ಕೋರೆ ಹೇಳಿದರು.

ಸಹಕಾರಿ ಕ್ಷೇತ್ರದಲ್ಲಿ ಮಹಾಂತೇಶ ಕವಟಗಿಮಠ ಮನೆತನದ ಕೊಡುಗೆ ಅಪಾರವಿದೆ. ವಿಧಾನಪರಿಷತ್ ನ ಸದಸ್ಯರಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಸವದತ್ತಿನ ಯಲ್ಲಮ್ಮನ ಆಶರ್ಿವಾದ ಕಟವಗಿಮಠ ಮನೆತನದ ಮೇಲೆ ಇರುವುದರಿಂದ ಅವರು ಎಲ್ಲ ಕ್ಷೇತ್ರಗಳಲ್ಲಿ ಬೆಳೆದಿದ್ದಾರೆಂದರು.
ಇಂಚಲ ಸಾಧು ಸಂಸ್ಥಾನಮಠದ ಶಿವಾನಂದ ಭಾರತಿ ಸ್ವಾಮೀಜಿ, ಹುಬ್ಬಳ್ಳಿ ಮೂರುಸಾವಿರ ಮಠದ ಡಾ. ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, ಕೂಡಲಸಂಗಮ ಲಿಂಗಾಯನ ಪಂಚಮಸಾಲಿ ಪೀಠದ ಬಸವಜಯ ಮೃತ್ಯಂಜಯ ಸ್ವಾಮೀಜಿ, ಶಾಸಕರಾದ ಅಭಯ ಪಾಟೀಲ, ದುಯರ್ೋಧನ ಐಹೊಳೆ, ಮಾಜಿ ಶಾಸಕಾರದ ಜಗದೀಶ ಮೆಟಗುಡ್ಡ, ಅನಿಲ ಬೆನಕೆ, ಸಂಜಯ ಪಾಟೀಲ, ಡಾ.ವಿಶ್ವನಾಥ ಪಾಟೀಲ, ವಿರೂಪಾಕ್ಷ ಮಾಮನಿ, ರತ್ನಾ ಆನಂದ ಮಾಮನಿ, ರಾಜೇಶ್ವರಿ ಮಹಾಂತೇಶ ಕವಟಗಿಮಠ, ಜಗದೀಶ ಕವಟಗಿಮಠ ಇತರರಿದ್ದರು.

ಸಮಾಜ ಸೇವೆ ನಿರಂತರ
ನನ್ನ ಉಸಿರಿರುವತನಕ ಸಮಾಜ ಸೇವೆ ನಿರಂತರವಾಗಿರುತ್ತದೆ ಎಂದು ಮಹಾಂತೇಶ ಕವಟಗಿಮಠ ಹೇಳಿದರು,

ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಬಸವಣ್ಣ ತತ್ವ ಸಿದ್ಧಾಂತಗಳ ಮೇಲೆ ಬದುಕು ಕಟ್ಟಿಕೊಂಡಿರುವ ನಾನು ಗೆದ್ದಾಗ ಹಿಗ್ಗಲಿಲ್ಲ, ಸೋತಾಗ ಕುಗ್ಗಲಿಲ್ಲ. ಹೀಗಾಗಿ ಸಮಾಜ ಸೇವೆ ನಿರಂತರವಾಗಿ ಮುಂದುವರಿಯಲಿದೆ ಎಂದರು ಹೇಳಿದರು,
ರಾಜಕೀಯದಲ್ಲಿ ಸೋಲು, ಗೆಲುವು, ಅಧಿಕಾರ ಶಾಶ್ವತ ಅಲ್ಲ. ಆದರೆ, ಸಮಾಜ ಸೇವೆ ಶಾಶ್ವತ. ಹಾಗಾಗಿಯೇ ನನ್ನ ತಾಯಿಯ ತವರೂರಿನಲ್ಲಿಯೇ ಮಹಾಂತೇಶ ಕವಟಗಿಮಠ ಫೌಂಡೇಶನ್ ಆರಂಭಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು,