ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ
ಬೆಳಗಾವಿ:ಕಳೆದ 14 ವರ್ಷದಿಂದ ನಡೆಸಿಕೊಂಡು ಬರಲಾಗುತ್ತಿರುವ ಅಂತಾರಾಷ್ಟ್ರೀಯ ಪತಂಗೋತ್ಸವ ಈ ಬಾರಿ ಕೂಡ ಇದೇ ದಿ, 20 ರಿಂದ 23 ರವರೆಗೆ ನಡೆಯಲಿದ್ದು, ಅದು ವಿಶೇಷಗಳಿಂದ ಕೂಡಿರುತ್ತದೆ ಎಂದು ಅದರ ರೂವಾರಿಯೂ ಆಗಿರುವ ಶಾಸಕ ಅಭಯ ಪಾಟೀಲ ಹೇಳಿದರು, ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪತಂಗೋತ್ಸವಕ್ಕೆ ಇಲ್ಲಿನ ಬಿ. ಎಸ್. ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿಯಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು, ಈ ಬಾರಿ ಯುಕೆ, ಇಂಡೋನೇಶಿಯಾ, ಸ್ಲೋವೆನಿಯಾ, ನೆದರಲ್ಯಾ,ಡ್ ದಿಂದ ಹತ್ತು ಜನ ವಿದೇಶಿಗರು ಸೇರಿದಂತೆ…