ಬೆಳಗಾವಿ . ಗಡಿನಾಡ ಬೆಳಗಾವಿ ಪೊಲೀಸ್ ಆಯುಕ್ತ ಎಸ್.ಎನ್. ಸಿದ್ರಾಮಪ್ಪ ಅವರು ವಿದ್ಯಾರ್ಥಿ ಪೊಲೀಸ್ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಪೊಲೀಸ ಮಹಾನುರ್ದೇಶಕರ ಸೂಚನೆ ಹಿನ್ನೆಲೆಯಲ್ಲಿ ಈ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಇದು 30 ದಿನಗಳ ಕಾಲಾವಧಿ ಹೊಂದಿದೆ.,ಅದರಲ್ಲಿ 15 ದಿನ ಠಾಣೆಯಲ್ಲಿ ಪೊಲೀಸ್ ಕಾನೂನುಗಳು ಹಾಗೂ ಠಾಣೆಯ ದಿನನಿತ್ಯದ ಚಟುವಟಿಕೆಗಳ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಹಾಗೂ 5 ದಿನ ನಗರದಲ್ಲಿರುವ ವಿವಿಧ ಪೊಲೀಸ್ ಸಂಬಂಧಿತ ಕಚೇರಿಗಳ ಭೇಟಿಯೊಂದಿಗೆ ನಗರದ ಸಿಸಿಆರ್ಬಿ ಕಂಟ್ರೋಲ್ ರೂಂ ಹಾಗೂ ಟಿಎಂಸಿ ಬಗ್ಗೆ ಪ್ರಾಯೋಗಿಕ ತಿಳುವಳಿಕೆ ನೀಡಲಾಗುತ್ತದೆ. ಮತ್ತು ಕೊನೆಗೆ 5 ದಿನ ವಿದ್ಯಾರ್ಥಿಗಳಿಗೆ ತಾವು ಕಲಿತ ವಿಷಯದ ಮೇಲೆ ಸವಿಸ್ತಾರವಾದ ವರದಿ ತಯಾರಿಸಲು ಹೇಳಲಾಗುತ್ತದೆ.
ಇಂದು ನಡೆದ ಕಾರ್ಯಕ್ರಮದಲ್ಲಿ ನಗರದ ವಿವಿಧ ಕಾಲೇಜ್ ಗಳಿಂದ ಸುಮಾರು 65 ಜನ ವಿದ್ಯಾರ್ಥಿಗಳು ಹಾಗು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಎನ್ ಎಸ್ ಎಸ್ ಕಾರ್ಯಕ್ರಮದ ನೋಡಲ್ ಅಧಿಕಾರಿ ಕಮಲಾಕ್ಷಿ ಹಾಗೂ ಮಿರ್ಜಿ ಕಾಲೇಜ್ ವಿದ್ಯಾರ್ಥಿಗಳು ಭಾಗವಸಿದ್ದರು.
.