ಬಿಜೆಪಿ ರಾಮನ ಬಲ. 400 ರ ಗಡಿ ದಾಟಿಸಲಿರುವ ಶ್ರೀರಾಮ. ರಾಜ್ಯದಲ್ಲಿ 28 ರಲ್ಲಿ 23 ಸ್ಥಾನ ಪಕ್ಕಾ? ಕಾಂಗ್ರೆಸ್ 5. ರಾಷ್ಟ್ರೀಯ ಚಾನಲ್ ಸಮೀಕ್ಷೆಯಿಂದ ಬಹಿರಂಗ
ನವದೆಹಲಿ
ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಲೋಕಾರ್ಪಣೆಗೊಂಡ ನಂತರ ಇಡೀ ದೇಶವ್ಯಾಪಿ ಕೇಳಿ ಬರುತ್ತಿರುವ ಒಂದೇ ಮಾತು ಜೈ ಶ್ರೀರಾಮ..!
ಈಗ ಬೆಳಿಗ್ಗೆ ಮತ್ತು ರಾತ್ರಿ ಗುಡ್ ಮಾರ್ನಿಂಗ್, ಗುಡ್ ನೈಟ್ ಬದಲಾಗಿ ಜೈ ಶ್ರೀರಾಮ ಹೇಳುತ್ತಿದ್ದಾರೆ. ಇದು ಯಾರೂ ಹೇಳಿಕೊಟ್ಟ ಮಾತಲ್ಲ. ಜನರೇ ಸ್ವಯಂ ಸ್ಪೂರ್ತಿಯಾಗಿ ಆ ಮಾತನ್ಬು ಹೇಳುತ್ತಿದ್ದಾರೆ.

ಈ ಶ್ರೀರಾಮ ಮಂದಿರಕ್ಕಾಗಿ ಹೋರಾಟ ಮಾಡಿದವರು BJP ಯವರು. ಇದು ಈಗ ಕಾಂಗ್ರೆಸ್ ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೇವಲ ಅಲ್ಪಸಂಖ್ಯಾರನ್ನು ಓಲೈಕೆ ಮಾಡುತ್ತಿದ್ದಾರೆ ಎನ್ನುವುದು ಸುಳ್ಳಲ್ಲ. ಅಷ್ಟೇ ಅಲ್ಲ ಇದರ ಜೊತೆಗೆ ಮುಖ್ಯಮಂತ್ರಿ ಗಳು ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ತಿಲಕ ಹಚ್ವಿಕೊಳ್ಳಲು ತಿರಸ್ಕಾರ ಮಾಡಿದ್ದ ವಿಡಿಯೋಗಖು ಸಾಮಾಜಿಕ ಜಾಕತಾಣದಲ್ಲಿ ವೈರಲ್ ಆಗಿವೆ.

ಹೀಗಾಗಿ ಬರುವ ಲೋಕಸಭೆ ಚುನಾವಣೆ ಕಾಂಗ್ರೆಸ್ ಗೆ ಧರ್ಮ ಸಂಕಟ ತಂದಿಟ್ಟರೆ, ಬಿಜೆಪಿ ಶ್ರೀರಾಮ ಹೆಸರಿನಲ್ಲಿ (ಚಾರಸೋ ಪಾರ್) 400 ರ ಗಡಿದಾಟುವ ಲಕ್ಷಣಗಳು ಕಾಅಸಿಗುತ್ತಿವೆ. ಈ ಮಾತನ್ನು ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಲೋಕಸಭೆಯಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಇಂತಹ ಸಮೀಕ್ಷೆಗಳು ಯಾವುದೋ ಒಂದೇ ಚಾನಲ್ ದಲ್ಲಿ ಪ್ರಸಾರವಾಗಿದ್ದರೆ ಹೋಗಲಿ ಬಿಡು. ಅದು ಪ್ಯಾಕೇಜ ಅನಬಹುದಿತ್ತು. ಆದರೆ ರಾಷ್ಟ್ರೀಯ ಮಟ್ಟದ ಟೈಮ್ಸ್ ನೌ,ಸುವರ್ಣ ನ್ಯೂಜ್, ರಿಪಬ್ಲಿಕ ಕನ್ನಡ ಸೇರಿದಂತೆ ಬಹುತೇಕ ಚಾನಲ್ ಗಳಲ್ಲಿ ಈ ಸಮೀಕ್ಷೆ ಬಿತ್ತರವಾಗಿದೆ.