ಮೇಯರ್ ಚುನಾವಣೆ-ಎಚ್ಚರಿಕೆ ಹೆಜ್ಜೆಯತ್ತ ನಾಯಕರ ಚಿತ್ತ
`ಹಿಂದಿರುವ ವ್ಯಕ್ತಿಗಳದ್ದೇ ತಲೆನೋವು ಜಾಸ್ತಿ’ ಆಯ್ಕೆ ಬಗ್ಗೆ ಗುಟ್ಟು ಬಿಟ್ಡುಕೊಡದ ಅಭಯ
ಬೆಳಗಾವಿ.
ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ಇದೇ ದಿ. 15 ರಂದು ನಡೆಯಲಿದೆ. ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ಮತ್ತು ಉಪಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.
ಮಃಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಹೀಗಾಗಿ ಕಾಂಗ್ರೆಸ್ ತಿಪ್ಪರಲಾಗ ಹಾಕಿದರೂ ಬಿಜೆಪಿ ಒಡೆಯುವುದು ಕಷ್ಟ. ಈ ಹಿನ್ನೆಲೆಯಲ್ಲಿ ಮೇಯರ್ ಮತ್ತು ಉಪಮೇಯರ್ ಆಯ್ಕೆ ಅವಿರೋಧವಾಗಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಕಳೆದ ಬಾರಿ ಬಿಜೆಪಿ ಪ್ರಥಮ ಮೇಯರ್ ಸ್ಥಾನ ಬೆಳಗಾವಿ ದಕ್ಷಿಣಕ್ಕೆ ಮತ್ತು ಉಪಮೇಯರ್ ಸ್ಥಾನ ಬೆಳಗಾವಿ ಉತ್ತರ ಕ್ಷೇತ್ರಕ್ಕೆ ಬಂದಿತ್ತು, ಇನ್ನುಳಿದಂತೆ ಆಡಳಿತ ಪಕ್ಷದ ನಾಯಕ ಸ್ಥಾನವು ಉತ್ತರ ಕ್ಷೇತ್ರಕ್ಕೆ ಹೋಗಿತ್ತು,
ಆದರೆ ಈ ಬಾರಿ ಮೇಯರ ಸ್ಥಾನ ಉತ್ತರ ಕ್ಷೇತ್ರದ ಪಾಲಾಗಲಿದೆ. ಸಧ್ಯ ಬಂದಿರುವ ಮಾಹಿತಿ ಪ್ರಕಾರ ಸವಿತಾ ಕಾಂಬಳೆ ಅಥವಾ ಲಕ್ಷ್ಮೀ ರಾಠೋಡ್ ಇಬ್ಬರಲ್ಲಿ ಒಬ್ಬರು ಮೇಯರ್ ಆಗುವುದು ಪಕ್ಕಾ.!
ಕಳೆದ ಮೇಯರ್ ಅಧಿಕಾರವಧಿಯಲ್ಲಿ ಕೆಲವರು ಮಾಡಿದ ಭಾರೀ ಯಡವಟ್ಟನ್ನು ಗಮನಿಸಿದ ನಾಯಕರು ಈ ಸಲ ಅಳೆದುತೂಗಿ ಆಯ್ಕೆ ಮಾಡುವ ಸಾಧ್ಯತೆಗಳಿವೆ, ಸಧ್ಯ ಕೇಳಿ ಬರುತ್ತಿರುವ ಹೆಸರಿನ ಹಿಂದಿರುವ ವ್ಯಕ್ತಿಗಳ ಬಗ್ಗೆಯೂ ಕೂಡ ಬಿಜೆಪಿ ಶಾಸಕರು, ನಾಯಕರು ಹೆಚ್ಚಿಗೆ ತಲೆ ಕೆಡಿಸಿಕೊಂಡಿದ್ದಾರೆಂದು ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಶಾಸಕ ಅಭಯ ಪಾಟೀಲರು ಮೇಯರ್, ಉಪಮೇಯರ್ ಯಾರು ಎನ್ನುವುದರ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ. ಚುನಾವಣೆ ದಿನ ಬೆಳಿಗ್ಗೆಯೇ ಹೆಸರು ಘೋಷಣೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ,
ಇನ್ನು ಉಪಮೇಯರ್ ಸ್ಥಾನ ಬೆಳಗಾವಿ ದಕ್ಷಿಣಕ್ಕೆ ಸಿಗುತ್ತದೆ,. `ಮರಾಠಾ’ ಎಂದು ಹೊರಟರೆ ಆ ಸ್ಥಾನಕ್ಕೆ ಆನಂದ ಚವ್ಹಾಣ, ರಾಜು ಭಾತಖಾಂಡೆ ಅಥವಾ ನಿತಿನ್ ಜಾಧವ ಪಾಲಾಗಬಹುದು.
ಆಧರೆ ಮರಾಠಿಯೇತರರಿಗೆ ಕೊಡಬೇಕು ಎನ್ನುವ ನಿರ್ಧಾರವಾದರೆ ಗಿರೀಶ ಧೋಂಗಡಿ, ಅಭಿಜಿತ್ ಜವಳಕರ `ಲಕ್’ ಖುಲಾಯಿಸಬಹುದು,
ಎಚ್ಚರಿಕೆ ಹೆಜ್ಜೆ…!
ಇಲ್ಲಿ ಬಿಜೆಪಿ ನಾಯಕರು ಮೇಯರ್ ಅಭ್ಯಥರ್ಿ ಆಯ್ಕೆ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಂಡಿಲ್ಲ. ಆದರೆ ಕನ್ನಡ ಬಾರದ ಮೇಯರ್ ತಲೆಕೆಡಿಸಿ ಗೊಂದಲ ಸೃಷಷ್ಟಿಸಿದವರ ಬಗ್ಗೆ ಹೆಚ್ಚಿಗೆ ಚಿಂತನೆ ನಡೆಸಿದ್ದಾರೆಂದು ಗೊತ್ತಾಗಿದೆ.
