ಬೆಳಗಾವಿ.
ರಾಜ್ಯದಲ್ಲಿ ಸಿದ್ಧರಾಮಯ್ಯ ಸಕರ್ಾರ ಬಂದ ನಂತರ ಬೆಳಗಾವಿ ಮಹಾನಗರ ಪಾಲಿಕೆಗೆ 125 ರೂ ಸಹ ಅನುದಾನ ಬಂದಿಲ್ಲ ಎಂದು ಶಾಸಕ ಅಭಯ ಪಾಟೀಲ ಹೇಳಿದರು,
ಮೇಯರ್ ಚುನಾವಣೆ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು,
ಬಿಜೆಪಿ ಮೊದಲ ಮೇಯರ್ ಅಧಿಕಾರವಧಿಯಲ್ಲಿ ಸಾಧನೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಈ ಉತ್ತರ ನೀಡಿದರು.

ಬಿಜೆಪಿ ಸರ್ಕಾರ ಅವಧಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಗೆ 125 ಕೋಟಿ ರೂ ಅನುದಾನ ಬರುತ್ತಿತ್ತು, ಆಧರೆ ಈಗಿನ ಸರ್ಕಾರ 125 ರೂ ಸಹ ಅನುದಾನ ಕೊಟ್ಟಿಲ್ಲ. ಹೀಗಾಗಿ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಅಭಯ ಪಾಟೀಲರು ಪ್ರಶ್ನೆ ಮಾಡಿದರು,

ಜೈ ಶ್ರೀರಾಮ ಘೋಷಣೆ
ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಗರಸೇವಕರು ಜೈ ಶ್ರೀರಾಮ ಘೋಷಣೆ ಮೊಳಗಿಸಿದರು,
ಚುನಾವಣೆಗೂ ಮುನ್ನ ಪಾಲಿಕೆ ಸಭಾಗೃಹಕ್ಕೆ ಬರುವಾಗಲೂ ಘೋಷಣೆ ಕೂಗುತ್ತ ಬಂದರು, ನಂತರ ಮೇಯರ್, ಉಪಮೇಯರ್ ಆಯ್ಕೆ ನಂತರ ಜೈಶ್ರೀರಾಮ ಘೋಷಣೆ ಮೊಳಗಿಸಿದರು,

ಈ ಬಾರಿ ಬಿಜೆಪಿಗರು ಕೇಸರಿ ಪೇಟ ಸುತ್ತಿ ಸಬಾಗೃಹ ಪ್ರವೇಶ ಮಾಡಿದರು,
ವಿರೋಧ ಬದಲು ಪರ ಸಹಿ…!
ಬೆಳಗಾವಿ ಮಹಾನಗರ ಪಾಲಿಕೆ ಉಪಮೇಯರ್ ಚುನಾವಣೆ ಸಂದರ್ಭದಲ್ಲಿ ಪಾಲಿಕೆ ಸಿಬ್ಬಂದಿಗಳು ಶಾಸಕರಿಂದ ತಪ್ಪು ಸಹಿ ಮಾಡಿಸಿಕೊಂಡು ಯಡವಟ್ಟು ಮಾಡಿದರು,
ಚುನಾವಣಾಧಿಕಾರಿಗಳು ಉಪಮೇಯರ್ ಸ್ಥಾನದ ಮತದಾನದ ಸಂದರ್ಭದಲ್ಲಿ ವಿರೋಧ ಪಕ್ಷದ ಜ್ಯೋತಿ ಕಡೋಲ್ಕರ ವಿರುದ್ಧ ಇದ್ದವರು ಕೈ ಎತ್ತಬೇಕು ಎಂದರು, ನಂತರ ಅವರಿಂದ ಸಹಿ ಮಾಡಿಸಿಕೊಳ್ಳಲು ಸಿಬ್ಬಂದಿಗೆ ಸೂಚನೆ ನೀಡಿದರು, ಆದರೆ ಸಿಬ್ಬಂದಿಗಳು ಮಾತ್ರ ಶಾಸಕ ಅಭಯ ಪಾಟೀಲರ ಬಳಿ ಪರ ಎಂದು ಹೇಳಿ ಸಹಿ ಮಾಡಿಸಿಕೊಂಡರು, ಇದನ್ನು ಗಮನಿಸಿದ ಶಾಸಕರು ಸಿಬ್ಬಂದಿ ವಿರುದ್ಧ ಕೆಂಡಾಮಂಡಲವಾದರು,