ಪಾಲಿಕೆಯಲ್ಲಿ ಲ್ಯಾಪ್ ಟಾಪ್ ಕಳ್ಳತನ .
ಭೂಗಳ್ಳರ ಪಾಲಾದವಾ ಲ್ಯಾಪಟಾಪ್?.
ಕಳ್ಳತನದ ಹಿಂದಿದೆ PID ಕರಿನೆರಳು. ಲ್ಯಾಪಟಾಪ್ ದಲ್ಲೇನಿದೆ ಎಂದು.ಗೊತ್ತಿದ್ದವರೇ ಕಳ್ಳತನ ಮಾಡಿದರಾ?
ಬೆಳಗಾವಿ:
ಮಹಾನಗರ ಪಾಲಿಕೆಯಲ್ಲಿ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿಡಲಾಗಿದ್ದ ನಾಲ್ಕು ಲ್ಯಾಪಟಾಪ್ಗಳು ಕಾಣೆಯಾಗಿದ್ದು ವಿಭಿನ್ನ ಸಂಶಯಕ್ಕೆ ಕಾರಣವಾಯಿತು,
ಬೆಳಗಾವಿಯ ಬಸವೇಶ್ವರ ವೃತ್ತದ ಬಳಿ ಇರುವ ಮಹಾನಗರ ಪಾಲಿಕೆಯ ದಕ್ಷಿಣ ವಲಯದ ಕಂದಾಯ ಶಾಖೆಯಲ್ಲಿ ಈ ಕಳ್ಳತನ ನಡೆದಿದೆ.

ಪಾಲಿಕೆಯ ಕಚೇರಿಯ ಬಾಗಿಲು ಮುರಿದು ಒಳಗೆ ನುಗ್ಗಿದ ಕಳ್ಳರು ನಾಲ್ಕು ಲ್ಯಾಪ್ಟಾಪ್ ಎಗರಿಸಿ ಪರಾರಿಯಾಗಿದ್ದಾರೆ. ಆಸ್ತಿ ಮಾಲೀಕತ್ವದ ದಾಖಲಾತಿ, ಆಸ್ತಿ ಮಾಲೀಕರ ಗುರುತಿನ ಚೀಟಿ, ತೆರಿಗೆ ಚೀಟಿ, ಕಟ್ಟಡ ಪರವಾನಗಿ ಪತ್ರ ಸೇರಿದಂತೆ ಒಟ್ಟು 26 ವಾಡರ್್ಗಳ ನಿವಾಸಿಗಳ ದಾಖಲೆಗಳ ಸಂಗ್ರಹವು ಅದರಲ್ಲಿತ್ತು ಎನ್ನಲಾಗಿದೆ. ಸೋಮವಾರ ಬೆಳಗ್ಗೆ ಸಿಬ್ಬಂದಿ ಕಚೇರಿಗೆ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲಗಳ ಪ್ರಕಾರ ದಕ್ಷಿಣ ಕ್ಷೇತ್ರದಲ್ಲಿ ಖಾತೆ ಬದಲಾವಣೆ, ಸೈಟುಗಳ ಮಾರಾಟ ಮುಂತಾದ ದಂಧೆಯಲ್ಲಿ ತೊಡಗಿದ್ದವರೇ ಈ ಕೃತ್ಯ ಎಸಗಿರಬಹುದು ಎನ್ನುವ ಅನುಮಾನ ಪೊಲೀಸರನ್ನು ಕಾಡುತ್ತಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರೂ ಸಹ ಇಲ್ಲಿಯವರೆಗೆ ಆಗಿದ್ದ ಪಿಐಡಿ ಸೇರಿದಂತೆ ಆದ ಮತ್ತು ಆಗಬೇಕಾಗಿರುವ ದಾಖಲೆಗಳ ಮಾಹಿತಿ ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆಂದು ಗೊತ್ತಾಗಿದೆ