ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ಸಬ್ ಇನ್ಸ್ ಪೆಕ್ಟರ್ ಮೇಲೆ ಕ್ರಮ ಕೈಗೊಳ್ಳಬೇಕು : ಬಸವರಾಜ ಬೊಮ್ಮಾಯಿ ಆಗ್ರಹ
ಬೆಂಗಳೂರು: ರಾಮನಗರ ವಕೀಲರ ಮೇಲೆ ಪ್ರಕರಣ ಹಾಕಿರುವುದರ ಕುರಿತು ರಾಜ್ಯದ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ರಾಮನಗರ ಸಬ್ ಇನ್ಸಪೆಕ್ಟರ್ ಮೇಲೆ ಕ್ರಮ ಕೈಗೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಶೂನ್ಯವೇಳೆಯಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಪ್ರಸ್ತಾಪಿಸಿದ ವಿಷಯದ ಮೇಲೆ ಮಾತನಾಡಿದ ಅವರು, ಚಿಕ್ಕಮಗಳೂರಿನಲ್ಲಿಯೂ ಒಂದು ಘಟನೆ ನಡೆಯಿತು. ಪೊಲಿಸರು ಮತ್ತು ವಕೀಲರ ನಡಿವೆ ಸಂಘರ್ಷ ಮುಂದುವರೆದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಹೆಚ್ಚಾಗುತ್ತದೆ ಎಂದು ಹೇಳಿದರು.

ದೇಶದಲ್ಲಿ ತುರ್ತುಪರಿಸ್ಥಿತಿ ಹೇರಲು ಹಾಸ್ಟೆಲ್ ನಲ್ಲಿ ಒಂದು ಊಟ ಸಿಗದಿದ್ದಕ್ಕೆ ತುರ್ತು ಪರಿಸ್ಥಿತಿ ಹೇರಬೇಕಾಯಿತು. ಅಧಿಕಾರಿಯನ್ನು ಕೇವಲ ಅಮಾನತು ಮಾಡಿದರೆ ಶಿಕ್ಷೆ ನೀಡಿದಂತಲ್ಲಾ. ಸಬ್ ಇನ್ಸ್ ಪೆಕ್ಟರ್ ಮೇಲೆ ಆರೋಪ ಇದೆ. ನಾವು ಇಡೀ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವುದರ ಬಗ್ಗೆ ಮಾತನಾಡುತ್ತಿದ್ದೇವೆ. ರಾಜ್ಯದ ಕಾನೂನು ಸುವ್ಯವಸ್ಥೆ ಮುಖ್ಯವೋ ಅಥವಾ ಸಬ್ ಇನ್ಸ್ ಪೆಕ್ಡರ್ ನ ಪ್ರತಿಷ್ಠೆ ಮುಖ್ಯವೋ ಎಂದು ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
ಹಾವೇರಿಯಲ್ಲಿ ನಡೆದ ಘಟನೆಯಲ್ಲಿ ತನಿಖೆ ನಡೆಯುವ ಮೊದಲೇ ಸಿಪಿಐ, ಸಬ್ ಇನ್ಸ್ ಪೆಕ್ಟರ್ ಅವರನ್ನು ಅಮಾನತು ಮಾಡಿ, ತನಿಖೆ ನಡೆಸುತ್ತಿದ್ದೀರಿ, ಅದೇ ರೀತಿ ಇಲ್ಲಿ ನಡೆದುಕೊಳ್ಳಿ ಎಂದು ಆಗ್ರಹಿಸಿದರು.