Headlines

ಮಹಾರಾಷ್ಟ್ರ ಫಲಕ ತೆರವು-

ಬೆಳಗಾವಿ. ಕನ್ನಡಿಗರ ಹೋರಾಟಕ್ಕೆ ಮಣಿದ ಬೆಳಗಾವಿ ಮಹಾನಗರ ಪಾಲಿಕೆ ಅನಗೋಳ ದಲ್ಲಿರುವ ಜೈ ಮಹಾರಾಷ್ಟ್ರ ನಾಮಫಲಕವನ್ನು ತೆರವುಗೊಳಿಸಿತು.

ಇಂದು ಬೆಳಿಗ್ಗೆಯಷ್ಟೇ ಕನ್ನಡ ಪರ ಸಂಘಟನೆಗಳು ಪಾಲಿಕೆ ಆಯುಕ್ತರ ಕಾರಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದ್ದವು‌ . ಅಷ್ಟೇ ಅಲ್ಲ ಆಯುಕ್ತರಿಗೆ ಧಿಕ್ಕಾರ ಸಹ ಹೇಳಿದ್ದರು.

ಇದಾದ ನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಆಯುಕ್ತ ಲೋಕೇಶ್ ಅವರು ಆ ಫಲಕ ತೆರವಿಗೆ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತಿಯಲ್ಲಿ ಫಲಕ ತೆರವುಗೊಳಿಸಕಾಯಿತು.

Leave a Reply

Your email address will not be published. Required fields are marked *

error: Content is protected !!