Headlines

ಬಿಜೆಪಿ ಟಿಕೆಟ್ಗೆ ರೈತರ ಡಿಮ್ಯಾಂಡ್

ರೈತ ಹೋರಾಟಗಾರೊಬ್ಬರಿಗೆ ಬಿಜೆಪಿ ಟಿಕೆಟ್ ಕೋಡಿ: ಪ್ರಕಾಶ ನಾಯಕ

ಬೆಳಗಾವಿ:ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಒಂದು ಟಿಕೆಟ್ ರೈತ ಮುಖಂಡರಿಗೆ ನೀಡಬೇಕೆಂದು ಬೆಳಗಾವಿಗೆ ಬರುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಒತ್ತಾಯಿಸಲಾಗುವುದು ಎಂದು ರಾಷ್ಟ್ರೀಯ ರೈತರ ಸಂಘದ ಮುಖಂಡ ಪ್ರಕಾಶ ನಾಯಕ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರೈತರು ಎಲ್ಲವನ್ನು ಹೋರಾಟದ ಮೂಲಕವೇ ಪಡೆಯುವ ಪರಿಪಾಟ ನಿರ್ಮಾಣವಾಗಿದೆ‌. ನಮ್ಮ ಹೋರಾಟಕ್ಕೆ ಅಷ್ಟು ಗಂಭೀರವಾಗಿ ಪ್ರತಿಕ್ರಯಿಸದ ಭ್ರಷ್ಟ ವ್ಯವಸ್ಥೆಯಿಂದ ರೈತ ಹೋರಾಟಗಾರರು ಸಂಸದ ಭವನದಲ್ಲಿರುವುದು ಅನಿವಾರ್ಯವಾಗಿದೆ ಎಂದರು.

ಪ್ರಧಾನಿ ನರೇಂದ್ರ ‌ಮೋದಿ ಅವರ ವಚನದಂತೆ ರೈತ ಸಂಘೋಕಾ ಸಾಥ ಸಾಥ್. ಹಾಗಾದಲ್ಲಿ ಮಾತ್ರ ರೈತರ ಸಾಲ ಮನ್ನಾವಾಗುವುದು. ಅಲ್ಲದೆ, ರೈತರ ಶ್ರಮಕ್ಕೆ ಆರ್ಥಿಕತೆಯ ಭದ್ರೆತೆ ಮಾನದಂಡದ ಜೊತೆಗೆ ಕೃಷಿಯನ್ನು ಉತ್ತಮವಾಗಿಸುವುದು ಮತ್ತು ರೈತರ ಬದುಕು ಖುಷಿಯೊಂದಿಗೆ ಬಲಿಷ್ಟವಾಗಿ ಕಟ್ಟಲು ನೆರವಾಗುವುದು ಎಂದರು.

ರಾಜ್ಯದ ‌ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಪಕವಾಗಿ ಬರಗಾಲ‌ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಸಿಎಂ ಆಡಿತದ ವೈಫಲ್ಯದಿಂದ ಕೂಡಲೇ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ರೈತರ ಪರವಾಗಿ ಇರುವ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿಗೆ ಮುಖ್ಯಮಂತ್ರಿಯನ್ನಾಗಿ ಹೈಕಮಾಂಡ್ ಮಾಡಬೇಕೆಂದು ಒತ್ತಾಯಿಸಿದರು.

0

Leave a Reply

Your email address will not be published. Required fields are marked *

error: Content is protected !!