ಬೆಳಗಾವಿ
.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಚಿಕ್ಕೋಡಿ ಮತ್ತು ಬೆಳಗಾವಿ ಸಭೆ ಮುಗಿಸಿ ಸಂಸದೆ ಅಂಗಡಿ ಮನೆಗೆ ಭೆಟ್ಟಿ ಕೊಟ್ಟು ನೀಡಿದ ಸಂದೇಶವಾದರೂ ಏನು?
ಚಿಕ್ಕೋಡಿಯಲ್ಲಿ ಸಭೆ ಮುಗಿಸಿ ಬೆಳಗಾವಿಯ ಖಾಸಗಿ ಹೊಟೇಲ್ ನಲ್ಲಿ ಕೇವಲ ಅರ್ಧ ತಾಸಿನಲ್ಲಿ ಕಾರ್ಯಕಾರಿಣಿ ಸಭೆ ಮುಗಿಸಿ ಸಂಸದೆ ಅಂಗಡಿಯವರ ಮನೆಗೆ ನಡ್ಡಾ ಹೋದರು.

ಸಹಜವಾಗಿ ಬೆಳಗಾವಿಗೆ ಬರುವ ಗಣ್ಯರು ಡಾ. ಪ್ರಭಾಕರ ಕೋರೆ ಮನೆಗೆ ಹೋಗುತ್ತಾರೆ. ಆದರೆ ಇಲ್ಲಿ ನಡ್ಡಾ ಅವಸರದಲ್ಲಿ ಅಂಗಡಿ ಮಬೆಗೆ ಹೋಗಿ ಏನು ಚರ್ಚೆ ನಡೆಸಿರು ಎನ್ನುವ ಕುತೂಹಲ ಎಲ್ಕರಲ್ಲಿ ಮೂಡಿದೆ.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೊಸೆ ಶೃದ್ಧಾ ಶೆಟ್ಟರ್ , ಸ್ಪೂರ್ತಿ ಪಾಟೀಲ ಸಹ ಇದ್ದರು.

ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಹೊಸ ಮುಖಕ್ಲೆಕೆ ಟಿಕೆಟ್ ಎನ್ನುವ ಮಾತುಗಳನಡುವೆ ನಡ್ಡಾ ಭೆಟ್ಡಿ ಚರ್ಚೆಗೆ ಕಾರಣವಾಗುತ್ತದೆ.
ಅಥವಾ ಚುನಾವಣೆಗೆ ಸಜ್ಜಾಗಿ ಎನ್ನುವ ಭರವಸೆ ನೀಡಿದರಾ ಹೇಗೆ ಎನ್ನುವ ಚರ್ಚೆ ಕೂಡ ನಡೆದಿದೆ.. ಈ ಹಿನ್ನೆಲೆಯಲ್ಲಿ ನಡ್ಡಾ ಭೇಟಿ ನೀಡಿ ಏನಾದರೂ ಸೂಚನೆ ನೀಡಿದರಾ ಎನ್ನುವ ಚರ್ಚೆ ಬಿಜೆಪಿಯಲ್ಲಿ ಜೋರಾಗಿ ನಡೆದಿದೆ.
ಈ ಸಂದರ್ಭದಲ್ಲಿ ಸಂಕಲ್ಪ ಶೆಟ್ಟರ್, ಶೃದ್ಧಾ ಶಟ್ಟರ್, ಸೃರ್ತಿ ಪಾಟೀಲ ಉಪಸ್ಥಿತರಿದ್ದರು.