Headlines

ಬೆಳಗಾವಿ ಪಾಲಿಕೆಯಲ್ಲಿ ‘ಇನ್ಸುರನ್ಸ್ ಇಲ್ಲ ಲಾರಿ ಓಡಾಟ.

ಬೆಳಗಾವಿ ಪಾಲಿಕೆಗೆ ಮಹಾ ಮೇಲೆ ಪ್ರೀತಿ. ಇನ್ಸುರನ್ಸ್ ಮುಗಿದ ಪಾಲಿಕೆಯ ಲಾರಿ ಓಡಾಟ.

ವರ್ಷದಿಂದ ಇನ್ಸುರನ್ಸ ತುಂಬಿಲ್ಲ. ಹೇಳೊರು, ಕೇಳೊರು ಇಲ್ಲವೆ?

ಇವರಿಗೆ ಕರ್ನಾಟಕ ಪಾಸಿಂಗ್ ವಾಹನ ಸಿಗಲ್ಲವೇ?

ವಾಹನ ತಪಾಸಣೆ ಮಾಡದ ಪೊಲೀಸರು, ಆರ್ ಟಿಓ.

ಬೆಳಗಾವಿ. ಗಡಿ ವಿಷಯದಲ್ಲಿ ಕಾಲು ಕೆದರಿ ಜಗಳಕ್ಕೆ ನಿಂತಿದ್ದ ಮಹಾರಾಷ್ಟ್ರಕ್ಕೆ ಬೆಳಗಾವಿ ಕಂಡರೆ ಅದೆಷ್ಡು ಪ್ರೀತಿ ಗೊತ್ತಿಲ್ಲ. ಏಕೆಂದರೆ ಬೆಳಗಾವಿ ಪಾಲಿಕೆಯವರು‌ ಮಹಾರಾಷ್ಟ್ರ ಪಾಸಿಂಗ್ ಹೊಂದಿರುವ ವಾಹನಗಳನ್ನು ಓಡಿಸುತ್ತಿದ್ದಾರೆ.

ಇದು ಈಗ ಕನ್ನಡಿಗರ ಆಕ್ರೋಶಕ್ಕೂ ಕಾರಣವಾಗುತ್ತಿದೆ. ಉದ್ಯೋಗ ವಿಷಯದಲ್ಲಿ ಕನ್ನಡಿಗರಿಗೆ ಹೆಚ್ಚೆಚ್ಚು ಅನುಕೂಲ ಆಗಬೇಕು ಎನ್ನುವುದು ಕರ್ಣಾಟಕ ಸರ್ಕಾರದ ಅಷ್ಟೇ ಅಲ್ಲ ಪ್ರತಿಯೊಬ್ಬ ಕನ್ನಡಿಗರ ಆಶಯಚಾಗಿದೆ.‌

ಆದರೆ ಬೆಳಗಾವಿ ಪಾಲಿಕೆ ಈಗ ಕನ್ನಡಿಗರ ಮತ್ತು ಸರ್ಕಾರದ ಆಶಯಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಬೆಳಗಾವಿ ಮಹಾನಗರದಲ್ಲಿ ಕಸದ ಲಾರಿಯೊಂದು ಓಡಾಡುತ್ತಿದೆ. ಅದರ ಮೇಲೆ ಮಹಾನಗರ ಪಾಲಿಕೆ ಎಂದು ಬರೆಯಲಾಗಿದೆ. ಆದರೆ ಅದು ಮಹಾರಾಷ್ಟ್ರ ಪಾಸಿಂಗ್ ಹೊಂದಿದೆ. ಅದರ ಮೇಲೆ MH07p1738 ಎಂಬ ನಂಬರ ಇದೆ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಆಧಿಕಾರಿಗಳು ಗುತ್ತಿಗೆ ಗೆ ಪಡೆಯುವ ಮುನ್ನ ಎಲ್ಲವನ್ನು ಪರಿಶೀಲನೆ ಮಾಡಬೇಕಿತ್ತು. ಅದೂ ಬಿಡಿ, ಪ್ರತಿಯೊಂದು ವಾಹನದ ದಾಖಲೆಗಳು ಮಹಾನಗರ ಪಾಲಿಕೆಯ ಬಳಿವಿರಬೇಕು. ಅವರು ಅದನ್ಬು ವರ್ಷಕ್ಕೊಮ್ಮೆಯಾದರೂ ಪರಿಶೀಲನೆ ಮಾಡುತ್ತಿರಬೇಕು. ಆದರೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಂತಹ ವ್ಯವಸ್ಥೆ ಇಲ್ಲವೇ ಇಲ್ಲ ಎನ್ನುವುದು ಈಗ ಸ್ಪಷ್ಡವಾಗತೊಡಗಿದೆ.

ಇಲ್ಲಿ ಈ ವಾಹನದ ಇನ್ಸುರೆನ್ಸ್ ಅವಧಿಸಿಕ್ಕ ದಾಖಲೆ ಪ್ರಕಾರ 2022 sept 9 ಕ್ಕೆ ಮುಗಿದಿದೆ. ಅದರ ನಂತರ ಅದನ್ನು ತುಂಬಲಾಗಿಲ್ಲ.ಇದರ ಜೊತೆಗೆ ವಾಹನದ ಫಿಟನೆಸ್ ಬರುವ 2024 ಮಾರ್ಚ 17 ಕ್ಕೆ ಮುಕ್ತಾಯವಾಗುತ್ತದೆ.

ಸಧ್ಯ ಹೇಗಾಗಿದೆ ಅಂದರೆ, ಮಹಾನಗರ ಪಾಲಿಜೆಯ ವಾಹನಗಳನ್ನು ಪಾಲಿಕೆಯವರೇ ತಿರುಗಿ ಸಹ ನೋಡುತ್ತಿಲ್ಲ ಎನ್ನುವುದು ಸ್ಪಷ್ಟ. ಅಧಿಕಾರಿಗಳು ಕೇವಲ ತಾವು ಓಡಾಡುವ ವಾಹನಗಳ‌ ಕಡೆಗೆ ಗಮನಿಸುತ್ತಾರೆ. ಇನ್ನುಳಿದವುಗಳ ಬಗ್ಗೆ ಕೇರಲೆಸ್ ಮಾಡುತ್ತಿದ್ದಾರೆ.

ಬೆಳಗಾವಿಯಲ್ಲಿ ಕಸದ ವಾಹನಗಳನ್ನು ಗಮನಿಸಿದರೆ ಬಹುತೇಕವು ಗಳಿಗೆ ನಂಬರ ಪ್ಲೇಟ್ ಇರುವುದಲ್ಲ.ಮೇಲಾಗಿ ಕಸದ ವಾಹನಗಳನ್ನು ಪೊಲೀಸರು, RTO ದವರೂ ಅಪ್ಪಿತಪ್ಪಿ ಕೂಡ ನಿಲ್ಲಿಸಿ ದಾಖಲೆ ಪರಿಶೀಲನೆ ಮಾಡುವುದಿಲ್ಲ. ಬೆಳಗಾವಿ ನಗರದ ತುಂಬ ಓಡಾಡುವ ಇಂತಹ ವಾಹನಗಳಿಂದ ಅನಾಹುತವಾದರೆ ಅದಕ್ಕೆ ಯಾರು ಹೊಣೆ ಎನ್ನುವುದು ಬೆಳಗಾವಿಗರ ಪ್ರಶ್ನೆ. ಉತ್ತರಿಸುವವರು ಯಾರು?

Leave a Reply

Your email address will not be published. Required fields are marked *

error: Content is protected !!