Headlines

ವಾರ್ಡ ಅಭಿವೃದ್ಧಿಗೆ ಬದ್ಧ- ಅಭಯ


ಬೆಳಗಾವಿ.
ದಕ್ಷಿಣ ವಿಧಾನಸಭಾ ಕ್ಷೇಡತ್ರದಲ್ಲಿ ಬರುವ ಎಲ್ಲ ವಾರ್ಡಗಳ ಅಭಿವೃದ್ಧಿ ಕಟಿಬದ್ಧನಿರುವುದಾಗಿ ಶಾಸಕ ಅಭಯ ಪಾಟೀಲರು ಭರವಸೆ ನೀಡಿದರು.


ಮಹಾನಗರ ಪಾಲಿಕೆ ವಾರ್ಡ ನಂಬರ 43 ರಲ್ಲಿ ಬರುವ ಅನಗೋಳ ನಾಕಾದಲ್ಲಿ 9 ಲಕ್ಷ ರೂ ವೆಚ್ಚದ ಕಮಾನ್ ಮತ್ತು ಮೃತ್ಯುಂಜಯನಗರದ ಬಿಪಿಯಲ್ಲಿ 11 ಲಕ್ಷ ರೂ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಗೆ ಅವರು ಚಾಲನೆ ನೀಡಿದರು, ಈ ಸಂದರ್ಭದಲ್ಲಿ ನಗರಸೇವಕಿ ಮತ್ತು ನಗರ ಯೋಜನೆ ಹಾಗೂ ಅಭಿವೃದ್ಧಿ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ಜೋಶಿ ಅವರು ಹಾಜರಿದ್ದರು,
ಈ ಸಂದರ್ಭದಲ್ಲಿ ಮಾತನಾಡಿದ ಅಭಯ ಪಾಟೀಲರು,


ಬಹುತೇಕ ವಾಡರ್ಿನಲ್ಲಿ ಹೇಳಿಕೊಳ್ಳುವಂತಹ ಕಾಮಗಾರಿಗಳು ಬಾಕಿ ಉಳಿದಿಲ್ಲ. ಆದರೂ ಜನರು ಆಯಾ ನಗರಸೇವಕರ ಮೂಲಕ ಪ್ರಸ್ತಾಪಿಸುವ ಸಮಸ್ಯೆಗಳಿಗೆ ಆಧ್ಯತೆ ಕೊಟ್ಟು ಪರಿಹರಿಸುವ ಕೆಲಸ ಮಾಡಲಾಗುತ್ತದೆ ಎಂದರು.


ಈಗ ಬಹುತೇಕ ವಾರ್ಡಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ, ಕಳೆದ ಬಾರಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿತ್ತು, ಅಷ್ಟೇ ಅಲ್ಲ ಅದಕ್ಕೆ ಶಾಶ್ವತ ಪರಿಹಾರಕ್ಕಾಗಿ ಅನೇಕ ದಿಟ್ಟ ಕ್ರಮವನ್ನು ತೆಗೆದುಕೊಳ್ಳಲಾಗಿದೆ,
ಈಗ ಭೀಕರ ಕುಡಿಯುವ ನೀರಿನ ಸಮಸ್ಯೆ ಇದ್ದ ಕಡೆಗೆ ಬೋರವೆಲ್ ಕೊರೆಯಿಸುವ ಕೆಲಸ ಮಾಡಲಾಗುತ್ತದೆ, ಈಗಾಗಲೇ ಆಯಾ ನಗರಸೇವಕರ ಮೂಲಕ ವಾರ್ಡಗಳಲ್ಲಿ ಎಷ್ಟು ಬೋರವೆಲ್ಗಳು ಬೇಕು ಎನ್ನುವುದರ ಮಾಹಿತಿ ತರಿಸಿಕೊಳ್ಳಲಾಗಿದೆ, ಶೀಘ್ರವೇ ಬೋರವೆಲ್ ಕೊರೆಯಿಸುವ ಕೆಲಸವನ್ನು ಮಾಡಲಾಗುವುದು ಎಂದು ಅವರು ಹೇಳಿದರು,
ಆಡಳಿತ ಪಕ್ಷದ ನಾಯಕ ಗಿರೀಶ ಧೋಂಗಡಿ, ಉಪಮೇಯರ್ ಆನಂದ ಚವ್ಹಾಣ, ಶೋಭಾ ಸೋಮನ್ನಾಚೆ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು,
ಅಷ್ಟೇ ಅಲ್ಲ ಶಾಸಕರು ದಕ್ಷಿಣ ಕ್ಷೇತ್ರದ ಇನ್ನುಳಿದ ವಾರ್ಡಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಚಾಲನೆ ನೀಡಿದರು,

Leave a Reply

Your email address will not be published. Required fields are marked *

error: Content is protected !!