
ಶೆಡ್ಟರಗೆ ಕೊಟ್ರೆ ಬೆಳಗಾವಿ ಬಿಜೆಪಿಗೆ ಬಲು ಕಷ್ಟ..!
ಬೆಳಗಾವಿ. ಲೋಕಸಮರದ ಕಲಿಗಳ ಆಯ್ಕೆ ಬೆಳಗಾವಿ ಹೊರತುಪಡಿಸಿ ಉಳಿದವುಗಳು ಮುಗಿದಿದೆ. ಬೆಳಗಾವಿ ಅಭ್ಯರ್ಥಿ ಆಯ್ಕೆ ಒಂದು ರೀತಿಯ ಕಗ್ಗಂಟಾಗಿದೆ. ಬೆಳಗಾವಿಯಲ್ಲಿಯೇ ಘಟಾನುಘಟಿಗಳು ಇರುವಾಗ ಹುಬ್ಬಳ್ಳಿ ಯ ಜಗದೀಶ ಶೆಟ್ಟರಗೆ ಯಾಕೆ ಎನ್ನುವ ಬಹುದೊಡ್ಡ ಪ್ರಶ್ನೆ ಎದುರಾಗಿದೆ. ಬೆಳಗಾವಿ ಲೋಕಸಭಾ ವ್ಯಾಪ್ತಿಯ ಬೇಕಾದವರಿಗೆ ಟಿಜೆಟ್ ಕೊಡಿ. ಅದನ್ನು ಬಿಟ್ಟು ಹುಬ್ಬಳ್ಳಿ ಯ ಜಗದೀಶ ಶೆಟ್ಟರಗೆ ಟಿಕೇಟ್ ಕೊಟ್ಟರೆ ಬಿಜೆಪಿಗೆ ಆರಂಭಿಕ ಹಿನ್ನೆಡೆ ಆರಂಭವಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ಯಿವೆ. ಹಾವೇರಿ, ಧಾರವಾಡ ಟಿಕೆಟ್ ತಪ್ಪಿದ ನಂತರ ಬೆಳಗಾವಿ ಕಡೆಗೆ…