Headlines

ಬೆಳಗಾವಿಯಲ್ಲಿ ಪಂಚಮಸಾಲಿ v/s ಪಂಚಮಸಾಲಿ

ಬೆಳಗಾವಿ.ಗಡಿನಾಡ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬದಲಾದ ರಾಜಕೀಯ ಸನ್ನಿವೇಶವು ಬಿಜೆಪಿ ಹಾಲಿ ಸಂಭವನೀಯ ಅಭ್ಯರ್ಥಿಯನ್ನು ಬದಲಾಯಿಸುವ ಮಾತುಗಳು ಕೇಳಿ ಬರುತ್ತಿವೆ.

ಕಳೆದ ದಿನವಷ್ಟೆ ಹುಬ್ಬಳ್ಳಿಯ ಜಗದೀಶ ಶೆಟ್ಟರ್ ಅವರು ಬೆಳಗಾವಿ ಬಿಜೆಪಿಗರಿಗೆ ಅವಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಜೆಪಿಗರು ಯಾವುದೇ ಕಾರಣಕ್ಕೂ ಶೆಟ್ಟರ್ ಪರ ಪ್ರಚಾರಕ್ಕೆ ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲ ೮ ಜನ ಘಟಾನುಘಟಿಗಳೇ ಕ್ಷೇತ್ರವ್ಯಾಪಿ ಪ್ರಚಾರ ಮಾಡಿ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು ಎನ್ನುವ ಮಾತುಗಳು ಕೇಳಿ ಬಂದಿದ್ದವು.

ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಹೈಕಮಾಂಡ ಈಗ ಅಭ್ಯರ್ಥಿ ಯನ್ನೇ ಬದಲಾಯಿಸುವ ಚಿಂತನೆ ನಡೆಸಿದೆ ಎಂದು ಗೊತ್ತಾಗಿದೆ.

ಮತ್ತೊಂದು ಕಡೆಗೆ ಕಾಂಗ್ರೆಸ್ ನಿಂದ ಸಚಿವೆ ಹೆಬ್ಬಾಳಕರ ಪುತ್ರ ಮೃನಾಲ್ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಪಂಚಮಸಾಲಿ‌ ಮತಗಳು ಹಂಚಿ ಹೋಗುವುದನ್ನು ತಡೆಗಟ್ಟಲು ಮತ್ತೊಬ್ಬ ಪ್ರಖರ ಹಿಂದುತ್ವವಾದಿಯೂ ಆಗಿರುವ ಬಸನಗೌಡ ಪಾಟೀಲ ಯತ್ನಾಳ ರನ್ನು ಕಣಕ್ಕಿಳಿಸುವ ಸಾಧ್ಯತೆಗಳು ಹೆಚ್ಚಾಗಿ‌ ಕಾಣಸಿಗುತ್ತಿವೆ.

ಒಂದು ವೇಳೆ ಯತ್ನಾಳರನ್ನು ಅಭ್ಯರ್ಥಿ ಮಾಡಿದರೆ ಬೆಳಗಾವಿ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ‌ ದೂರವಾಗಬಹುದು ಎನ್ನುವ ಮಾತಿದೆ. .

Leave a Reply

Your email address will not be published. Required fields are marked *

error: Content is protected !!