ಬಾಗಲಕೋಟೆ ಬ್ರಾಹ್ಮಣ ಸಭಾ ಅಧ್ಯಕ್ಷ ದೇಶಪಾಂಡೆ ನಿಧನ
ಹಿರಿಯ ವಕೀಲ ಕೆ.ಎಸ್.ದೇಶಪಾಂಡೆ ನಿಧನಕ್ಕೆ ಕಂಬನಿ ಮಿಡಿದ ಜನ ಬಾಗಲಕೋಟೆ: ನಗರದ ಹಿರಿಯ ವಕೀಲ, ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ದೇಶಪಾಂಡೆ(೭೨) ಅವರು ಬೆಳಗಾವಿ ಜಿಲ್ಲೆ ಖಾನಾಪುರ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಸುದ್ದಿ ಕೋಟೆ ಜನರನ್ನು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ.ಕಾನೂನಿನಲ್ಲಿ ಪರಿಣಿತಿ ಹೊಂದಿದ್ದ ಅವರು ಕ್ಲಿಷ್ಟಕರ ಪ್ರಕರಣಗಳಲ್ಲೂ ಅತ್ಯಂತ ಚತುರತೆಯಿಂದ ವಾದಿಸಿ ಗೆಲವುಸಾಧಿಸುತ್ತಿದ್ದರು. ಅವರ ವಾಕ್ಚಾತುರ್ಯ, ಸರಳವ್ಯಕ್ತಿತ್ವ ದೊಡ್ಡ ಖ್ಯಾತಿಯನ್ನು ತಂದು ಕೊಟ್ಟಿತ್ತು. ಬಾಗಲಕೋಟೆಯ ಪ್ರತಿಷ್ಠಿತ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘವೂ ಸೇರಿದಂತೆ…