Headlines

ನಾನೂ MES ಅಭ್ಯರ್ಥಿ ಎಂದ ನಗರಸೇವಕ ಸಾಳುಂಕೆ…!

ಬೆಳಗಾವಿ

ಬೆಳಗಾವಿ ದಕ್ಷಿಣ ಕ್ಷೇತ್ರದ ಏಕೈಕ ಎಂಇಎಸ್ ನಗರಸೇವಕ ರವಿ ಸಾಳುಂಕೆ ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ಬೆಳಗಾವಿ ಲೋಕ ಸಮರದಲ್ಲಿ ಅಭ್ಯರ್ಥಿ ಆಗಲು ನಿರ್ಧರಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮರಾಠಿ ದಾಖಲೆ ಬಗ್ಗೆ ಮೇಲಿಂದ ಮೇಲೆ ಪ್ರಸ್ತಾಪಿಸುವ ಅವರು ಎಂಇಎಸ್ ನಿಂದ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಮುಂಬಯಿಯ ಠಾಕ್ರೆ ಕುಟುಂಬ ಸಹ ಇವರಿಗೆ ಟಿಕೆಟ್ ಕೊಡಬೇಕು ಎನ್ನುವ ಸೂಚನೆಯನ್ನು ಇಲ್ಲಿನ‌ ಮುಖಂಡರಿಗೆ ರವಾನಿಸಿದೆ ಎಂದು ಗೊತ್ತಾಗಿದೆ.

ಎಂಇಎಸ್ ಆಯ್ಕೆ ಸಮಿತಿಯಲ್ಲಿದ್ದ ಬಹುತೇಕರು ರವಿ ಸಾಳುಂಕೆ ಪರ ಬ್ಯಾಟ ಬೀಸತೊಡಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಯಾವುದೇ ವಿವಾದಕ್ಕೊಳಗಾಗದೇ ಮರಾಠಿ ಭಾಷಿಕರ ಪರ ರವಿ ಸಾಳುಂಕೆ ಕೆಲಸ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲ ಬಹುತೇಕ ಎಂಇಎಸ್ ನವರು ರವಿ ಸಾಳುಂಕೆಗೇ ಟಿಕೆಟ್ ನೀಡಬೇಕು ಎಂದು ಆಯ್ಕೆ ಸಮಿತಿ ಮೇಲೆ ಒತ್ತಡ ಹೇರತೊಡಗಿದ್ದಾರೆಂದು ಗೊತ್ತಾಗಿದೆ.

Leave a Reply

Your email address will not be published. Required fields are marked *

error: Content is protected !!